ಸಿಂದಗಿ- ವಿಜ್ಞಾನ ಕೇವಲ ವಸ್ತು ಪ್ರದರ್ಶನವಲ್ಲ ಬದಲಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ಸೃಜನಶೀಲತೆ ಬೆಳೆಸುವ ಒಂದು ಮಾರ್ಗ. ವಿಜ್ಞಾನದ ಹೊರತು ಯಾವುದೂ ಇಲ್ಲ ಎಂದು ಸ್ಥಳೀಯ ಸಾರಂಗಮಠದ ಪೂಜ್ಯ ಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ನಗರದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಪದ್ಮರಾಜ ಪಬ್ಲಿಕ್ ಶಾಲೆ(ಸಿಬಿಎಸ್‌ಸಿ) ಹಮ್ಮಿಕೊಂಡ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ನಮ್ಮಜೀವನದ ಅವಿಭಾಜ್ಯ ಅಂಗವಾಗಿದ್ದು ವೈಜ್ಞಾನಿಕ ಚಿಂತನೆ ಹೊಂದುವುದರ ಮೂಲಕ ಮೂಡನಂಬಿಕೆ ಹೋಗಲಾಡಿಸಬೇಕು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿ ಹೊಸದೊಂದು ಪ್ರದರ್ಶನ ಮಾಡುತ್ತಾರೆ. ಅದು ಅವರಲ್ಲಿನ ಸೃಜನಶೀಲತೆಗೆ ಉತ್ತೇಜನ ನೀಡುತ್ತದೆ. ಹೊಸ ತಂತ್ರಜ್ಞಾನ ಅರಿವು ಹೊಸದೊಂದು ಪರಿಕಲ್ಪನೆ ಮೂಡುತ್ತದೆ. ಅದು ಅವರ ಮುಂದಿನ ಶೈಕ್ಷಣಿಕ ಪಯಣಕ್ಕೆ ಸ್ಪೂರ್ತಿಯಾಗುತ್ತದೆ. ವಿಜ್ಞಾನ ಮೇಳ ಪ್ರತಿಯೊಂದು ಶಾಲೆಯಲ್ಲಿ ಆಯೋಜಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿದರೆ ವಿಜ್ಞಾನದ ಅರಿವು ಮಕ್ಕಳಲ್ಲಿ ಚೆನ್ನಾಗಿ ಸಿಗುತ್ತದೆ ಅಂತಹ ಚಿಂತನೆ ಪ್ರತಿಯೊಂದು ಶಾಲೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್‌ಪಿವ್ಹಿವ್ಹಿಎಸ್ ಪ್ಯಾರಾ ಮೆಡಿಕಲ್‌ಕಾಲೇಜ ಪ್ರಾಚಾರ್ಯ ವ್ಹಿ.ಬಿ.ಜಿರ್ಲೆ ಮತ್ತು ಎಸ್‌ಪಿವ್ಹಿವ್ಹಿಎಸ್ ಪಾಲಿಟೆಕಿನಿಕ್ ಕಾಲೇಜಿನ ಪ್ರಾಚಾರ್ಯ ಆರ್.ಬಿ.ಪವಾರ ನಿರ್ಣಾಯಕರಾಗಿ ಭಾಗವಹಿಸಿ ಮಾತನಾಡಿ, ವಿಜ್ಞಾನ ನಿತ್ಯದ ಬದುಕಿನೊಂದಿಗೆ ಬೆಸೆದು ಹೋಗಿದೆ. ಎಲ್ಲರೂ ವಿಜ್ಞಾನ ಅರಿವು ಪಡೆದುಕೊಳ್ಳಬೇಕು. ಸಂಶೋಧನೆ ಮಾಡುವವರಿಗೆ ಹೊಸ ಆಲೋಚನೆಗಳ ಮೂಲಕ ಅವಿಷ್ಕಾರಗಳು ಹೊಳೆಯುತ್ತವೆ. ಈ ಕಲ್ಪನೆ ವಿದ್ಯಾರ್ಥಿ ದೆಸೆಯಿಂದಲೇ ಬಳಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಆಲೋಚನೆಗಳ ಸಂಗಮವೇ ವಿಜ್ಞಾನವಾಗಿರುವುದರಿಂದ ಶಾಲೆಗಳಲ್ಲಿ ಹೆಚ್ಚು ಹೆಚ್ಚು ವೈಜ್ಞಾನಿಕ ಕಲ್ಪನೆ ಮಕ್ಕಳಿಗೆ ನೀಡಬೇಕು ಪ್ರತಿ ವಿಷಯದ ಜ್ಞಾನವನ್ನು ಪ್ರಾತ್ಯೇಕ್ಷಿತೆಯ ಮೂಲಕ ಮಾಡಬೇಕು ಎಂದರು.
ಈ ವೇಳೆ ವಿದ್ಯಾರ್ಥಿಗಳು ಮಳೆ ನೀರು ಸಂಗ್ರಹಣೆ, ಜ್ವಾಲಾಮುಖಿ, ಗಾಳಿಯಿಂದ ವಿದ್ಯುತ್ ಉತ್ಪಾದನೆ, ನೀರು ಶುದ್ದೀಕರಣ ಘಟಕ, ವಾಯುಗೋಳದ ಪದರುಗಳು, ಸೋಲಾರ ಶಕ್ತಿ, ಸೌರಮಂಡಲ, ಅಸ್ಥಿಪಂಜರ, ಹೃದಯದ ಕವಾಟಗಳು, ಮೂತ್ರಜನಕಾಂಗ ಸೇರಿದಂತೆ ೧೦೦ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಜ್ಞಾನದ ವಸ್ತುಗಳನ್ನು ನಿರ್ಮಿಸಿ ಅದರ ವ್ಯಾಖ್ಯಾನವನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ದಾನಯ್ಯ ನಂದಿಕೋಲ, ರಾಣಿ ಜೋಗೂರ, ಅಕ್ಷತಾ ಕಿಣಗಿ, ಶಶಿಕಲಾ ಹೂಗಾರ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಪೊದ್ದಾರ, ವಿಜಯಲಕ್ಮೀ ಚೌಧರಿ, ಅರುಣಾ ಕವಲಗಿ, ಕೆ.ಎಸ್.ಲಾತೂರ, ಶ್ರೀಧರ ಮಲ್ಲೇದ, ಎಸ್.ಆರ್.ಹಾಲಕೇರಿ, ಕಲಾವತಿ ಹಿರೇಮಠ, ರೇಖಾ ಬಮ್ಮಣ್ಣಿ, ಭಾರತಿ ಹಿರೇಮಠ, ಸಂತೃಪ್ತಿ ಕಲಬುರ್ಗಿ, ಸುರೇಶ ಸುಣಗಾರ, ಅಭಿಷೇಕ ಬಿರಾದಾರ, ಶಿವಪುತ್ರ ಭಾಸಗಿ, ಆಶೀಫ್ ಕೊಂಕಣಿ ಸೇರಿದಂತೆಇತರರುಇದ್ದರು.

