ಶಿವಾಪೂರ(ಹ) ದ ಈ ಶೌಚಾಲಯಗಳಿಗೆ ಎಂಥ ದುರ್ಗತಿ ?

Must Read

ಮೂಡಲಗಿ – ಇಲ್ಲಿ ಇರೋದು ಸಾರ್ವಜನಿಕರಿಗಾಗಿ ನಿರ್ಮಿಸಲಾದ ಅಂಗವಿಕಲ ಸ್ನೇಹಿ ಶೌಚಾಲಯಗಳು ಆದರೆ ಇವು ಶೌಚಾಲಯ ಅನ್ನಿಸಿಕೊಳ್ಳಲಿಕ್ಕೇ ಲಾಯಕ್ಕಿಲ್ಲದೆ ತೀರಾ ಹೊಲಸಾಗಿ ಗಬ್ಬೆದ್ದು ಹೋಗಿವೆ.

ತಾಲೂಕಿನ ಶಿವಾಪೂರ(ಹ) ಗ್ರಾಮದ ಕುರಿದಡ್ಡಿ ಹತ್ತಿರ ಇರುವ ಗಾಂವಠಾಣಾ ಜಾಗದಲ್ಲಿ ಗ್ರಾಮ ಪಂಚಾಯತಿಯ ೧೫ ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಈ ಶೌಚಾಲಯಗಳ ಒಳಗೆ ಕಾಲಿಡಲು ಕೂಡ ಸಾಧ್ಯವಿಲ್ಲ. ಒಂದು ಪಾಯಖಾನೆಗೆ ಬಾಗಿಲೇ ಇಲ್ಲ, ಇನ್ನೊಂದರ ಬಾಗಿಲು ಅರ್ಧ ಮುರಿದು ಹೋಗಿದೆ ! ಮತ್ತೊಂದರ ಬಾಗಿಲನ್ನು ತೆರೆಯಲು ಆಗುವುದೇ ಇಲ್ಲ ಅಲ್ಲೇ ಬಾಗಿಲಲ್ಲಿಯೇ ಮಲ ವಿಸರ್ಜನೆ ಮಾಡಲಾಗಿದೆ.

ಸದರಿ ಶೌಚಾಲಯಗಳು ಅಂಗವಿಕಲ ಸ್ನೇಹಿಯಾಗಿದ್ದು ಯಾರೂ ಕೂಡ ಬಳಸಲಾಗದಷ್ಟು ಹೊಲಬುಗೆದ್ದು ಹೋಗಿವೆ. ಇವುಗಳ ನಿರ್ಮಾಣಕ್ಕೆ ರೂ. ೩.೩೦ ಲಕ್ಷ ವೆಚ್ಚ ಮಾಡಲಾಗಿದೆ. ಶೌಚಾಲಯಗಳ ನಿರ್ಮಾಣ ಮಾಡುವುದು ತಡವಾಗುವುದಿಲ್ಲ ಆದರೆ ನಿರ್ವಹಣೆ ಸರಿಯಾಗಿ ಆಗಬೇಕಾಗಿದೆ.

ಈ ಬಗ್ಗೆ ಗ್ರಾಮ ಪಂಚಾಯಿತಿಯ ಪಿಡಿಓ ಬಬಲಿಯವರನ್ನು ಕೇಳಿದಾಗ, ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಬಾಗಿಲುಗಳನ್ನು ಪುನರ್ ಕೂರಿಸಲು ಗುತ್ತಿಗೆದಾರ ಹೊಸತೋಟ ಅವರಿಗೆ ನೋಟೀಸು ನೀಡಲಾಗಿದೆ ಎಂದರು.

ಗುತ್ತಿಗೆದಾರ ಹೊಸತೋಟ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸಾರ್ವಜನಿಕರು ಶೌಚಾಲಯಗಳ ಬಾಗಿಲುಗಳನ್ನು ಮುರಿದಿದ್ದು ದೂರು ಸಲ್ಲಿಸಲಾಗಿದೆ ಇಷ್ಟರಲ್ಲಿಯೇ ಈ ಶೌಚಾಲಯಗಳನ್ನು ರಿಪೇರಿ ಮಾಡಿ, ಸ್ವಚ್ಛಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬಿಡಲಾಗುವುದು ಎಂದರು.
ಸಾರ್ವಜನಿಕರ ಉಪಯೋಗಕ್ಕಾಗಿ ಸರ್ಕಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶೌಚಾಲಯಗಳು ಮತ್ತೆ ಸ್ವಚ್ಛಗೊಂಡು ನಿಲ್ಲಬೇಕಾಗಿದೆ ಅಲ್ಲದೆ ಅವುಗಳ ನಿರ್ವಹಣೆ ಕೂಡ ಸರಿಯಾಗಿ ಆಗಬೇಕಾಗಿದೆ.

ಉಮೇಶ ಬೆಳಕೂಡ, ಮೂಡಲಗಿ
9448863309

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group