ಮೂಡಲಗಿ – ಶಿವಾಪೂರ ಹ ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಶಿವಾಪೂರ (ಹ) ದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನ ಗುರುಗಳಾದ ಚಿದಾನಂದ ಮ ಹೂಗಾರ ರವರು ಪ್ರಸ್ತುತ ಸನ್ನಿವೇಶದಲ್ಲಿ ಸ್ತ್ರೀ ಶಿಕ್ಷಣ ಬಹಳ ಅವಶ್ಯಕವಾಗಿದೆ.ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅಂದಿನ ಸಮಾಜದ ಸಾಕಷ್ಟು ನಿಂದನೆ ಅಪಮಾನ ಸಹಿಸಿಕೊಂಡು ಸ್ತ್ರೀ ಶಿಕ್ಷಣಕ್ಕೆ ಮುನ್ನುಡಿ ಬರೆದ ಮಹಾನ್ ಮಹಿಳಾ ಶಿಕ್ಷಕಿಯಾಗಿ ಎಲ್ಲರಿಗೂ ಆದರ್ಶಪ್ರಾಯರಾದರು ಎಂದು ಹೇಳಿದರು.
ಶಾಲಾ ಮಕ್ಕಳು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ವೇಷಭೂಷಣ ತೊಟ್ಟು ಬಂದು ಭಾಷಣ ಮಾಡುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
ಗುರುಮಾತೆಯರು ಸಾವಿತ್ರಿಬಾಯಿ ಫುಲೆಯವರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ರಾಜೇಶ್ವರಿ ಜಕಾತಿ, ಸಾವಿತ್ರಿ ಜುಟನಟ್ಟಿ,ರೂಪಾ ಯಂಡ್ರಾವಿ, ರಾಜೇಶ್ವರಿ ದುರದುಂಡಿ, ಮಹಾದೇವಿ ತಮದಡ್ಡಿ ,ಈರವ್ವ ಸುಣಧೋಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಡಿವೆಪ್ಪ ತುಪ್ಪದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

