ಹುನಗುಂದ ತಾಲೂಕಿನ ಅವಳಿ ಸಂಘಗಳಿಂದ ಸೂಟಿ ಪತ್ರಿಕೆ ಹಾಗೂ ಪದಗ್ರಹಣ ಕಾರ್ಯಕ್ರಮ

Must Read

ಹುನಗುಂದ –  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ ಹುನಗುಂದದಲ್ಲಿ ನಡೆದ ಕರ್ನಾಟಕ ರಾಜ್ಯ ಎಸ್ ಸಿ /ಎಸ್ ಟಿ ಪ್ರಾಥಮಿಕ ಮಾಧ್ಯಮಿಕ ಶಿಕ್ಷಕರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹುನಗುಂದ ಹಾಗೂ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುನಗುಂದ ಅವಳಿ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸೂಟಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸರಳವಾಗಿ ಸುಂದರವಾಗಿ ಯಶಸ್ವಿಯಾಯಿತು.

ಸರಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಎಸ್ ಜಿ ಹುದ್ದಾರ ಅವರು ಒಂಟಿಯ ಹೋರಾಟಕ್ಕೂ ಜಂಟಿಯ ಹೋರಾಟಕ್ಕೂ ಬಹಳ ವ್ಯತ್ಯಾಸವಿದೆ. ನಾವೆಲ್ಲರೂ ಸಂಘ ಸಂಸ್ಥೆಗಳ ಜೊತೆಗೆ ಸದಾ ಮುನ್ನಡೆಯೋಣ ಸಂಘಗಳ ಒಂದು ಕೈಗೆ ನಮ್ಮದು ಒಂದು ಕೈ ಸೇರಿಸಿದಾಗ ಮಾತ್ರ ಸಂಘ ಸಂಸ್ಥೆಗಳ ಮೂಲಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳ ಸ್ಥಾನವನ್ನು ವಹಿಸಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುನಗುಂದ ಘಟಕದ ನಿಕಟ ಪೂರ್ವ ಅಧ್ಯಕ್ಷ ಸಿದ್ದು ಶೀಲವಂತರ ಅವರು, ಶಿಕ್ಷಣ ಜ್ಯೋತಿ ಸಾವಿತ್ರಿಬಾಯಿ ಪುಲೆ ಅವರಿಗೆ ಜನ್ಮದಿನದ ಶುಭಾಶಯಗಳು ತಿಳಿಸುತ್ತಾ ಸಂಘಟನೆಯ ಶಕ್ತಿ ಸರ್ವ ಶಕ್ತಿಗೂ ಮಿಗಿಲಾದದ್ದು, ಸಂಘ ಸಂಸ್ಥೆಗಳ ಜೊತೆಗೆ ನಾವೆಲ್ಲರೂ ಶಿಕ್ಷಕರು ಎಂಬ ಭಾವ ನಮ್ಮಲ್ಲಿ ಇರಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಂ ಪಿ ಕುದರಿ ಅವರು ಸಂಘಗಳನ್ನು ಹುಟ್ಟುಹಾಕಿ ಸಂಘದ ಬೆಳವಣಿಗೆಗೆ ಸದಾ ಕಾಲ ದುಡಿಯೋಣ ಪ್ರತಿಯೊಬ್ಬರ ಕಷ್ಟಗಳಿಗೆ ಹೆಗಲು ನಿಡೋಣ ಎಂಬ ವಿಚಾರಗಳನ್ನು ಹಂಚಿಕೊಂಡರು.

ಎಸ್ ಸಿ/ ಎಸ್ ಟಿ ನೌಕರರ ಸಂಘದ ಉಪಾಧ್ಯಕ್ಷ  ಎಂ ಎಚ್ ಪೂಜಾರಿ ಅವರು ಮಾತನಾಡಿ ಸಂಘದ ಗುರಿ ಉದ್ದೇಶಗಳು ಹಾಗೂ ಹಿರಿಯರ ಮಾರ್ಗದರ್ಶನ, ಸಂಘ ಬೆಳೆದು ಬಂದ ದಾರಿಯನ್ನು ಹಾಗೂ ಎನ್ ಪಿ ಎಸ್ ಹೋರಾಟದ ದಿನಗಳನ್ನು ವೇದಿಕೆ ಮೇಲೆ ನೆನೆಸಿಕೊಂಡರು.
ಅವಳಿ ಸಂಘದಿಂದ  ಸಂಗಮೇಶ ಪಾಟೀಲ್ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹುನಗುಂದ ಇವರಿಗೆ ಸನ್ಮಾನಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಎನ್ ಬೇಗಾರ ಅವರು ಮಾತನಾಡಿದರು.
ಅವಳಿ ಸಂಘದ ಸೂಟಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ  ಎಂ ಟಿ ನಡುವಿನಮನಿ, ಶರಣಪ್ಪ ದು ಮರೋಳ, ಮುತ್ತಪ್ಪ ಹ. ಪೂಜಾರಿ, ಲಚ್ಚಪ್ಪ ವಾಯ್ ಗುಂಡಿನಮನಿ,  ಶಾಂತರಾಜ ಎಸ್ ಪಿ,  ರವೀಂದ್ರ ಕೆ ಆರ್,  ಮಹಮ್ಮದ್ ರಫೀಕ್ ಯಳಮೇಲಿ,  ಮಂಜುನಾಥ ಟಕ್ಕಳಕಿ,  ಗಂಗಾಧರಯ್ಯ ಹಿರೇಮಠ,  ಸಂತೋಷ ಶಿರಬೂರ,  ಮಹೇಂದ್ರ ಕುಮಾರ್ ಬೆನ್ನೂರ,  ಪಕೀರಪ್ಪ ತೆಗ್ಗಿನಮನಿ,  ಅಬ್ದುಲ್ ಸೋಲಾಪುರ,  ಪ್ರಶಾಂತ್ ರಾಮವಾಡಗಿ,  ಸುಧಾಕರ ಕೆ ಎನ್,  ಜಾಫರ್ ಅಲಿ ರಾಂಪುರ, ಹನಮಂತ್ ಟಿ ಕಂದಗಲ್,  ಅರುಣ್ ಕುಮಾರ್ ಎನ್, ಶ್ರೀಮತಿ ಅನುಪಮಾ ಪಾಡಮುಖಿ,  ಮಲ್ಲಪ್ಪ ತೋಟಗೇರ,  ಹನಮಂತಪ್ಪ ಕುರಿ ಹಾಗೂ ಅವಳಿ ಸಂಘದ ಸರ್ವರು ಭಾಗವಹಿಸಿದ್ದರು.

ಶ್ರೀಮತಿ ಎಸ್ ಆರ್ ಲಕ್ಷ್ಯಕೊಪ್ಪದ ಪ್ರಾರ್ಥನಾ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಸುಧಾಕರ ಅವರು ಸ್ವಾಗತಿಸಿದರು. ಮುತ್ತು ಯ.ವಡ್ಡರ ಕಾರ್ಯಕ್ರಮ ನಿರೂಪಿಸಿದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group