ಕದಂಬ ಸೈನ್ಯ ವತಿಯಿಂದ ಕದಂಬ ಕಾಕುತ್ಸವಮ೯ ಪ್ರಶಸ್ತಿ ಪ್ರದಾನ

Must Read

ಹಾಸನ –  ಕದಂಬ ಸೈನ್ಯ ಕನ್ನಡ ಸಂಘಟನೆ ವತಿಯಿಂದ ಉತ್ತರ ಕನ್ನಡ ಜಿಲ್ಲೆ ಭುವನಗಿರಿ ಶ್ರೀ ಭುವನೇಶ್ವರಿ ದೇವಸ್ಥಾನ ಆಡಳಿತ ಸಹಕಾರ ದಿಂದ ಜನವರಿ ೭-೨೦೨೬ ರಂದು ಕನ್ನಡಿಗರ ಕುಲ ದೇವತೆ ಭುವನಗಿರಿ ಶ್ರೀ ಭುವನೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಲ್ಲಿ ಕದಂಬ ಚಕ್ರವರ್ತಿ ಕಾಕುತ್ಸವಮ೯‌ ಪ್ರಶಸ್ತಿ,ಯನ್ನು ಪತ್ರಕತ೯ರು ಕನ್ನಡ ಸಾಹಿತ್ಯ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಬನವಾಸಿ ಸುಧೀರ್ ಆರ್ ನಾಯರ್ ರವರಿಗೆ ಪ್ರದಾನ ಮಾಡಲಾಗುವುದು.

ರಾಜ್ಯ ಮಟ್ಟದ ಕನ್ನಡ ಹೋರಾಟಗಾರರು, ಸಾಹಿತ್ಯ ಸೇವೆ, ರಂಗಭೂಮಿ, ಯಕ್ಷಗಾನ ಬಯಲಾಟ ಕಲಾವಿದರು ಪತ್ರಕತ೯ರು, ಅತ್ಯುತ್ತಮ ಮಹಿಳಾ ಸಂಘಟಕಿಯರಿಗೆ ವೀರ ರಾಣಿ ಚೆನ್ನಭೈರಾದೇವಿ ಪ್ರಶಸ್ತಿ, ಕದಂಬ ರಂಗ ರತ್ನ ಪ್ರಶಸ್ತಿ, ಕದಂಬ ರತ್ನ ಪ್ರಶಸ್ತಿ ನೀಡಲಾಗುವುದು.

ಹಾಸನದ ಹಿರಿಯ ಸಾಹಿತಿ ಗೊರೂರು ಅನಂತರಾಜು, ಡಾ. ಬರಾಳು ಶಿವರಾಮ ಅವರಿಗೆ ಕದಂಬ ರತ್ನ ಪ್ರಶಸ್ತಿಯನ್ನು ರಂಗ ನಟರಾದ ಪ್ರೋ. ಎ.ಹೆಚ್. ಗಣೇಶ್, ಅಂಕಪುರ, ಎಸ್.ಎಸ್.ಪುಟ್ಟೇಗೌಡರು, ಶಂಭುನಾಥಪುರ, ರವಿಕುಮಾರ್ ಬೇಕ್ರೀ ರಾಜೇಗೌಡರು, ಅರಕಲಗೂಡು, ವೆಂಕಟೇಗೌಡರು ಪಟ್ನ, ಆಲೂರು ಇವರುಗಳಿಗೆ ಕದಂಬ ರಂಗ ರತ್ನ ಪ್ರಶಸ್ತಿಯನ್ನು, ಹಾಗೂ ಹೊಳೆನರಸೀಪುರ ಪುಟ್ಟಸ್ವಾಮಿಗೌಡರು ಇವರಿಗೆ ಕದಂಬ ಪ್ರಗತಿ ಪರ ರೈತ ಪ್ರಶಸ್ತಿಯನ್ನು ಹಾಸನದ ಶಶಿಕಲಾ ಜಗದೀಶ ಅವರಿಗೆ ವೀರರಾಣಿ ಚಿನ್ನ ಬೈರಾದೇವಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಉತ್ತರ ಕನ್ನಡ , ಹಾಸನ, ರಾಮನಗರ, ಬಾಗಲಕೋಟೆ, ಮಂಡ್ಯ, ಮೈಸೂರು, ವಿಜಯಪುರ, ಗದಗ ಜಿಲ್ಲೆಯ ಇಪ್ಪತ್ನಾಲ್ಕು ಗಣ್ಯರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು,

ಈ ಕಾರ್ಯಕ್ರಮದಲ್ಲಿ ಶಿರಸಿ ಸಿದ್ದಾಪುರ ಶಾಸಕರಾದ ಭೀಮಣ್ಣ ನಾಯಕ್, ಕನಾ೯ಟಕ ರಾಜ್ಯ ಆಹಾರ ಆಯೋಗ ಅಧ್ಯಕ್ಷರು ಡಾ ಹೆಚ್. ಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರು, ಅನೇಕ ಗಣ್ಯರು ಗಳು, ಕನ್ನಡ ಹೋರಾಟಗಾರರು, ಸಾಹಿತಿಗಳು, ಪತ್ರಕತ೯ರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ.

ಮಂಡ್ಯ, ಮೈಸೂರು ಹಾಸನ, ಉತ್ತರ ಕನ್ನಡ, ಬಾಗಲಕೋಟೆ, ರಾಮನಗರ, ಗದಗ, ವಿಜಯಪುರ, ಮಂಡ್ಯ ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಶಿವಮೊಗ್ಗ, ಜಿಲ್ಲೆಯ ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯ, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ
ಎಂದು ರಾಜ್ಯ ಅಧ್ಯಕ್ಷ ಬೇಕ್ರಿ ರಮೇಶ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group