ಖ್ಯಾತ ಖಳನಟ, ಪರಿಸರ ಪ್ರೇಮಿ ದಿ. ಎಂ ಪಿ ಶಂಕರ

Must Read

ಕನ್ನಡ ಚಿತ್ರರಂಗದ ಹಿರಿಯ ನಟ ಪರಿಸರ ಪ್ರೇಮಿ ಪ್ರಾಣಿಪ್ರಿಯ ಖ್ಯಾತ ಖಳ ನಟ ಎಂ ಪಿ ಶಂಕರ ಚಲನ ಚಿತ್ರಗಳಲ್ಲಿ ಹಲವು ಹೊಸ ಪ್ರಯೋಗಗಳನ್ನು ಕಾಡು ಮೇಡುಗಳಲ್ಲಿ ಚಿತ್ರಿಸಿ ಹೆಸರುವಾಸಿಯಾದ ಅಪ್ರತಿಮ ಕೆಚ್ಚೆದೆಯ ಗಂಡುಗಲಿ ಎಂ ಪಿ ಶಂಕರ

ಎಂ ಪಿ ಶಂಕರ ಇವರು 20, ಆಗಸ್ಟ್, 1935 ರಂದು ಮೈಸೂರು ಪುಟ್ಟಲಿಂಗಪ್ಪ ಮತ್ತು ಗಂಗಮ್ಮ ಎಂಬ ಲಿಂಗಾಯತ ಕುಟುಂಬದಲ್ಲಿ ಜನಿಸಿದರು.
ಆಜಾನು ಬಾಹು ಶಂಕರ್ ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ಇವರು ಅನೇಕ ಖಳನಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯ ಹರಿಶ್ಚಂದ್ರ, ಶನಿ ಪ್ರಭಾವ, ಬಂಗಾರದ ಮನುಷ್ಯ, ಗಂಧದ ಗುಡಿ,ಭೂತಯ್ಯನ ಮಗ ಅಯ್ಯು ಇವರ ಕೆಲವು ಪ್ರಮುಖ ಚಿತ್ರಗಳು.ಇವರು ಪೋಷಕ ನಟರಾಗಿ ಕೂಡ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ, ದಿಗ್ದರ್ಶನ, ಚಿತ್ರನಿರ್ಮಾಣ, ವಿತರಣೆ ಹಾಗೂ ಸಂಬಂಧಿಸಿದ ಎಲ್ಲಾ ಮಜಲುಗಳನ್ನು ಚೆನ್ನಾಗಿ ಅರಿತಿದ್ದರು. ಕಾಡು, ಪರಿಸರ ಸಂರಕ್ಷಣೆಯ ಬಗ್ಗೆ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಹಲವು ಚಿತ್ರಗಳ ನಿರ್ಮಾಪಕರಾಗಿದ್ದಾರೆ.

ಪುಟ್ಟಲಿಂಗಪ್ಪ, ಗಂಗಮ್ಮ ದಂಪತಿಗಳ ಪ್ರೀತಿಯ ಮೂರನೆಯ ಸಂತಾನವಾಗಿ ಭರಣಿ ನಕ್ಷತ್ರ ದಲ್ಲಿ ಜನಿಸಿದರು.ಹೀಗಾಗಿ ಭರಣಿ ಚಲನ ಚಿತ್ರ ಬ್ಯಾನರ್ ಕೆಳಗೆ 16 ಚಿತ್ರಗಳನ್ನು ನಿರ್ಮಿಸಿದ್ದಾರೆ.ಪತ್ನಿ, ಮಂಜುಳಾ,ಪುತ್ರಿ, ಶೋಭಾ, ಇಬ್ಬರು ಪುತ್ರರು, ತಿಲಕ್, ಹಾಗೂ ವಿರೂಪಾಕ್ಷ. ಕೊನೆಯ ಮಗ ವಿರೂಪಾಕ್ಷ ಆತ್ಮ ಹತ್ಯೆ ಮಾಡಿ ಕೊಂಡು ಇಹ ಲೋಕ ತ್ಯಜಿಸಿದರು.

ಎಮ್.ಪಿ.ಶಂಕರ್, ಶ್ರೇಷ್ಠ ಖಳನಾಯಕನೆಂದು ಹೆಸರುಮಾಡಿದ್ದರು. 1962 ರಲ್ಲಿ ಬಿಡುಗಡೆಯಾದ ಸತ್ಯಹರಿಶ್ಚಂದ್ರ ಕಪ್ಪು-ಬಿಳುಪಿನ ಚಲನಚಿತ್ರದಲ್ಲಿ ವೀರಬಾಹು ವಿನ ಪಾತ್ರದಲ್ಲಿ ಒಳ್ಳೆಯ ಅಭಿನಯವನ್ನು ತೋರಿಸಿ ಚಿತ್ರರಸಿಕರ ಮನವೊಲಿಸಿಕೊಂಡರು. ಅವರ ನಿರ್ದೇಶನದ, ಡಾ.ರಾಜ್ ನಟಿಸಿದ ಗಂಧದಗುಡಿ ಚಿತ್ರ ಎಲ್ಲರ ಗಮನ ಸೆಳೆಯಿತು. ಇದರ ಎರಡನೆಯ ಆವೃತ್ತಿಯಲ್ಲಿ ಶಿವರಾಜಕುಮಾರ್ ಅಭಿನಯಿಸಿದ್ದರು. ಕಾಡಿನ ಸಂರಕ್ಷಣೆ ಹಾಗೂ, ಪರಿಸರದ ಬಗ್ಗೆ ಅವರು ಯಾವಾಗಲು ಕಾಳಜಿ ವಹಿಸುತ್ತಿದ್ದರು. ರತ್ನಮಂಜರಿ,ಚಿತ್ರದಿಂದ ಕನ್ನಡಚಿತ್ರರಂಗವನ್ನು ಪ್ರವೇಶಿಸಿದ ಶಂಕರ್ ರವರು, 1968 ರಲ್ಲಿ, ’ಕಾಡಿನ ರಹಸ್ಯ’ ಚಿತ್ರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಕಲ್ಲರಳಿ ಹೂವಾಗಿ’ ಚಿತ್ರ, ಅವರ ವೃತ್ತಿಜೀವನದ ಕೊನೆಯದು.ಕೆಲವು ಹಾಸ್ಯಸನ್ನಿವೇಶಗಳಿಂದ ತುಂಬಿದ, ‘ನಾರದವಿಜಯ’, ಹಾಗೂ ‘ಗಿಡ್ಡೂದಾದ’, ಎಂಬ ಚಿತ್ರಗಳನ್ನು ತಯಾರಿಸಿದ್ದರು.

ಭರಣಿ ಕಲಾತಂಡ, , ನಾಟಕರಂಗಪ್ರಕಾರ
ಇದು ಎಂ ಪಿ ಶಂಕರ ಅವರ ಅತ್ಯಂತ ಅಪರೂಪದ ಪ್ರೀತಿಯ ರಂಗ ಭೂಮಿಯ ಕಲಾ ತಂಡ. ಇದರಡಿಯಲ್ಲಿ ’ಗೌತಮ ಬುದ್ಧ’, ‘ಸೊಹ್ರಾಬ್ ರುಸ್ತುಂ’, ‘ಗದಾಯುದ್ಧ’, ‘ಕನಕದಾಸ ‘ನಾಟಕಗಳನ್ನು ಆಡಿಸಿ, ತಾವೂ ಅಭಿನಯಿಸಿದ್ದರು. ಅವರ ಪೂಜ್ಯ ತಂದೆಯವರ ಅಭಿಲಾಷೆಯಂತೆ, ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

*ಪ್ರಶಸ್ತಿಗಳು, ಹಾಗೂ ಬಿರುದು-ಬಾವಲಿಗಳು*

ನಟಶಾರ್ದೂಲ,
ಕಲಾಶಾರ್ದೂಲ,
ಮೈಸೂರುಹುಲಿ,
ಕಲಾಸೇವಾಧುರೀಣ,
ಕನ್ನಡಭೂಷಣ,
ಸಾಹಸೀಚಿತ್ರರತ್ನ,
ಕರುಣಾರತ್ನ,
ಸಾಗರ,

*ಪ್ರಶಸ್ತಿಗಳು.*

1953_1954 ರಲ್ಲಿ ಬನುಮಯ್ಯ ಹೈಸ್ಕೂಲ್ ನಲ್ಲಿ ತಮ್ಮ ‘ಪ್ರೌಢಶಾಲೆಯ ವಾರ್ಷಿಕೋತ್ಸ’ವದಲ್ಲಿ ‘ಕಾಡುಕುರುಬ’ ನ ಪಾತ್ರವನ್ನು ಯಶಸ್ವಿಯಾಗಿ ಅಭಿನಯಿಸಿದ್ದರು. ‘ಮೈಸೂರ ವಿದ್ಯುಚ್ಛಕ್ತಿ ಆಫೀಸ್’ ನಲ್ಲಿ ದಿನಗೂಲಿ ಕೆಲಸಮಾಡುತ್ತಿದ್ದರು.
1955 ರಲ್ಲಿ, ‘ಮೈಸೂರಿನ ರೈಲ್ವೆಕಾರ್ಖಾನೆ’ಯಲ್ಲಿ ನೌಕರಿಮಾಡಿದ್ದರು.
1956 ರಲ್ಲಿ ‘ಮೈಸೂರು ದಸರಾಹಬ್ಬ’ದ ಸಮಯದ ‘ಕುಸ್ತಿ-ಪಂದ್ಯಾವಳಿ’ಯಲ್ಲಿ ಭಾಗವಹಿಸಿದ್ದರು.
ಆಗಿನ ಮೈಸೂರಿನ ಮುಖ್ಯಮಂತ್ರಿ, ‘ಬಿ.ಡಿ.ಜತ್ತಿ’ಯವರ ಹಸ್ತದಿಂದ ಬಹುಮಾನ ಗಿಟ್ಟಿಸಿದ್ದರು. ತಮ್ಮ ಕೊನೆಯದಿನಗಳಲ್ಲಿ ವಿನಿವಿಂಕ್ ಶಾಸ್ತ್ರಿ ಗಳ ಜೊತೆ ವ್ಯವಹಾರ ಸಂಬಂಧಬೆಳೆಸಿ, ಸುಮಾರು 15 ಲಕ್ಷರೂಪಾಯಿಗಳಷ್ಟು ಹಣವನ್ನು ನಷ್ಟ ಮಾಡಿಕೊಂಡಿದ್ದರು.ಇದರಿಂದ ಬಹಳವಾಗಿ ನೊಂದಿದ್ದರು.

*ಚಲನಚಿತ್ರಗಳು*

ಕಾಡಿನರಾಜ
ಮೃಗಾಲಯ
ರಾಮಲಕ್ಷ್ಮಣ
ನಾನೇರಾಜ
ಕಾಡಿನ ರಹಸ್ಯ
ಬೆಟ್ಟದಹುಲಿ
ನ್ಯಾಯವೇ ದೇವರು
ಬಂಗಾರದ ಮನುಷ್ಯ
ನಾಗರಹಾವು
ದೂರದಬೆಟ್ಟ
ಭೂತಯ್ಯನ ಮಗ ಅಯ್ಯು
ಗಂಧದಗುಡಿ
ಶನಿ ಪ್ರಭಾವ,
ಕಲ್ಲರಳಿ ಹೂವಾಗಿ

ಹೀಗೆ ಭರಣಿ ಬ್ಯಾನರ್ ನಲ್ಲಿ ಸುಮಾರು 16 ಚಲನ ಚಿತ್ರಗಳನ್ನು ನಿರ್ಮಿಸಿ ಕನ್ನಡದ ಅಪ್ಪಟ ಪರಿಸರ ಪ್ರೇಮಿ ಎಂ ಪಿ ಶಂಕರ ಒಬ್ಬ ಮಾನವತಾವಾದಿ.
ತಮ್ಮ ಗಂಧದ ಗುಡಿ ಚಲನ ಚಿತ್ರಗಳಲ್ಲಿ ಡಾ ರಾಜಕುಮಾರ ಮತ್ತು ವಿಷ್ಣುವರ್ಧನ ಅವರನ್ನು ಒಟ್ಟಿಗೆ ಸೇರಿಸಿ ಒಳ್ಳೆಯ ಚಲನ ಚಿತ್ರ ನಿರ್ಮಿಸಿದರು. ಅಲ್ಲಿ ತಪ್ಪಿನಿಂದಾಗಿ ಬಂದೂಕಿನಿಂದ ಹಾರಿದ ಗುಂಡು ವಿಷ್ಣುವರ್ಧನ ಮತ್ತು ರಾಜಕುಮಾರ ಅವರನ್ನು ದೂರ ಮಾಡಿತು. ಇದನ್ನು ಎಷ್ಟು ಸಲ ಕನ್ನಡಿಗರಿಗೆ ಹೇಳಿದರೂ ಒಪ್ಪದ ಜನರು ವಿಷ್ಣುವರ್ಧನ ಅವರನ್ನು ಉದ್ದೇಶಪೂರಕವಾಗಿ ಅತ್ಯಂತ ಹೀನಾಯವಾಗಿ ನಡೆದು ಕೊಂಡರು. ಇದರಿಂದ ಎಂ ಪಿ ಶಂಕರ ಅವರು ತುಂಬ ನೊಂದುಕೊಂಡಿದ್ದರು.

*ನಿಧನ*
ಮೂಳೆ ಮುರಿತ ಪಿತ್ತ ಕೋಶದ ಕ್ಯಾನ್ಸರ್ ನಿಂದಾಗಿ ಆರೋಗ್ಯವು ಸಂಪೂರ್ಣ ಕ್ಷೀಣಿಸಿತು.ತಮ್ಮ 73 ನೆಯ ವರ್ಷದಲ್ಲಿ ಮೈಸೂರು ಪುಟ್ಟಲಿಂಗಪ್ಪ ಶಂಕರ್ ರವರು, ಮೈಸೂರಿನ, ’ಕಾಳಿದಾಸ ರಸ್ತೆಯಲ್ಲಿರುವ ತಮ್ಮ ಸ್ವಗೃಹ, ಮಂಜುನಾಥನಿಲಯದಲ್ಲಿ, ದಿನಾಂಕ 17, ಜುಲೈ 2008 ರಂದು, ದೈವಾಧೀನರಾದರು. ಮನೆಯಲ್ಲೇ ಜಾರಿಬಿದ್ದು ಸೊಂಟದ ಮೂಳೆಗೆ ಪೆಟ್ಟಾಗಿತ್ತು. ‘ವಿಕ್ರಮ್ ನರ್ಸಿಂಗ್ ಹೋಂ,’ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ವಲ್ಪ ಗುಣಹೊಂದಿ ಮನೆಗೆ ವಾಪಸ್ ಬಂದಿದ್ದರು. ಆದರೆ, ಪಿತ್ತಕೋಶದ ಕ್ಯಾನ್ಸರ್ ಅವರನ್ನು ಬಹಳ ಸಮಯದಿಂದ ಕಾಡಿಸುತ್ತಿತ್ತು. ಅವರ ಅಂತಿಮ ಸಂಸ್ಕಾರವನ್ನು, ವಿದ್ಯಾರಣ್ಯಪುರದ,’ ಲಿಂಗಾಯತ ರುದ್ರಭೂಮಿ,’ ಯಲ್ಲಿ ನೆರವೇರಿಸಲಾಯಿತು.

ಇಂತಹ ಅಪ್ಪಟ ಕನ್ನಡ ಪ್ರೇಮಿ ನಟ ನಿರ್ಮಾಪಕ ನಿರ್ದೇಶಕ ಎಂ ಪಿ ಶಂಕರ ಈಗ ನೆನಪು ಮಾತ್ರ
_________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group