ಸಿಂದಗಿ; ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುತ್ತಿರುವ ರೈತರು ಸ್ವಲ್ಪ ಸಮಯದಲ್ಲಿ ಸಮೀಪವಾಗುವ ಹಳೆಯ ರಸ್ತೆಗಳಿಗೆ ಹೊಂದಿಕೊಂಡಿರುವ ಎಲ್ಲ ಹಳೇ ರಸ್ತೆಗಳನ್ನು ನಿರ್ಮಿಸಿ ರೈತಾಪಿ ಜನರಿಗೆ ಅವರವರ ಹೊಲಗಳಿಗೆ ಹೋಗಲು ಅನುಕೂಲ ಮಾಡಿಕೊಡುವ ಮೂಲ ಉದ್ದೇಶದಿಂದ ಎಲ್ಲ ರಸ್ತೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಗೋಲಗೇರಿ ರಸ್ತೆಯ ಕೆರೆ ಪಕ್ಕದಲ್ಲಿ ೨೦೨೪-೨೫ನೇ ಸಾಲಿನ ಮಳೆ ಪರಿಹಾರ ನಿಧಿಯಲ್ಲಿನ ರೂ ೧ ಕೋಟಿ ವೆಚ್ಚದ ಹಳೇ ಬ್ಯಾಕೋಡ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ಈ ಗೋಲಗೇರಿ ಮುಖ್ಯ ರಸ್ತೆಯಿಂದ ಸಂಪರ್ಕ ಹಳೇ ಬ್ಯಾಕೋಡ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳಿಗೆ ಹೋಗುವ ಈ ರಸ್ತೆಯು ೩೦ ಮೀಟರ ಸಿಸಿ ರಸ್ತೆ, ೧೪೦೦ ಮೀ ಮುರಮ ರಸ್ತೆ ಮುಂದೆ ಡಾಂಬರಿಕರಣ ಮಾಡಲು ಅನುದಾನ ಪೂರೈಸಲಾಗುವುದಲ್ಲದೆ ಈ ಎಲ್ಲ ಹಳೇ ರಸ್ತೆಗಳನ್ನು ಏಕೆ ಸುಧಾರಣೆ ಮಾಡಲಾಗುತ್ತದೆ ಎಂದರೆ ಎಲ್ಲ ಒಳ ಸಂಪರ್ಕ ರಸ್ತೆಗಳನ್ನು ನಿರ್ಮಾಣ ಮಾಡಿದರೆ ರೈತರಿಗೆ ಒಳ್ಳೆಯ ಸುಸಜ್ಜಿತ ರಸ್ತೆ ನೀಡದ್ದಾದ್ದರೆ ಒಳ್ಳೆ ಸೇವೆ ಸಲ್ಲಿಸಿದಂತಾಗುತ್ತದೆ. ರಾಣೀ ಚೆನ್ನಮ್ಮ ಸರ್ಕಲ್ ಹಿಂದಿನ ಹಳೇ ಕೊಕಟನೂರ ರಸ್ತೆಗೆ ರೂ ೧ ಕೋಟಿ, ಹಳೇ ಆಹೇರಿ ರಸ್ತೆ ೧ ಕೋಟಿ ೫೦ ಲಕ್ಷ, ಹಳೇ ಯರಗಲ್ ಬಿಕೆ ರೂ ೧ ಕೋಟಿ ಅನುದಾನ ಮಂಜೂರಾಗಿದೆ ಮುಂದೆ ರಾಂಪೂರ, ಬೆನಕೋಟಗಿ, ಬಂಕಲಗಿ, ಮನ್ನಾಪುರ ಗ್ರಾಮಗಳು ಸೇರಿದಂತೆ ಎಲ್ಲ ಹಳೇ ರಸ್ತೆಗಳನ್ನು ಸುಧಾರಣೆ ಮಾಡಿ ಅನೇಕ ಗ್ರಾಮಗಳಿಂದ ಆಗಮಿಸುತ್ತಿರುವ ಸಾರ್ವಜನಿಕರಿಗೆ ಅನುವು ಮಾಡಿದರೆ ಅತ್ಯುತ್ತಮ ಸೇವೆ ಸಲ್ಲಿಸಿದಂತಾಗುತ್ತದೆ. ಸಾಲಮರದ ತಿಮ್ಮಕ್ಕನ ಉದ್ಯಾನವನದಂತೆ ಮತ್ತು ಕೆರೆ ಪಕ್ಕದಲ್ಲಿರುವ ಶಾಂತವೀರ ಉದ್ಯಾನವನ ಉನ್ನತಿಕರಣ ಮಾಡುವ ಮೂಲಕ ಜಗದ್ಗುರು ಡಾ ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ ಮೂರ್ತಿ ಅನಾವರಣಗೊಳಿಸಿ ಇಲ್ಲಿನ ಸಾರ್ವಜನಿಕರ ಅನುಕೂಲವಾಗುತ್ತದೆ. ಪಟ್ಟಣದ ಎಲ್ಲ ಉದ್ಯಾನವನಗಳನ್ನು ನಿರ್ಮಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಮುತ್ತು ಮುಂಡೆವಾಡಗಿ, ಆಲಮೇಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾದಿಕ ಸುಂಬಡ, ಶಿವನಗೌಡ ಬಿರಾದಾರ, ನೂರಹ್ಮದ ಅತ್ತಾರ, ಶ್ರೀಮಂತ ಮಲ್ಲೇದ, ಭೀಮು ವಾಲೀಕಾರ, ಶಾಂತೂ ರಾಣಾಗೋಳ, ಪ್ರಕಾಶ ಗುಣಾರಿ, ರಮೇಶ ಹೂಗಾರ, ಸಂತೋಷ ಹರನಾಳ, ಸಂತೋಷ ಪೂಜಾರ, ಅಂಬ್ರೀಶ ಚೌಗಲೆ, ರವಿ ನಾವಿ, ಸಂಗನಬಸು ಬಿರಾದಾರ, ಚೆನ್ನು ಪಟ್ಟಣಶೆಟ್ಟಿ, ರಾಜಣ್ಣಿ ನಾರಾಯಣಕರ, ಶಂಕರಗೌಡ ಬಿರಾದಾರ, ಚೆನ್ನು ಗೋಣಿ,ನಾಗೇಶ ತಳವಾರ ಸೇರಿದಂತೆ ಅನೇಕರು ಇದ್ದರು.

