ಮೂಡಲಗಿ:- ತಾಲೂಕಿನ ಯಾದವಾಡ ಗ್ರಾಮದ ಪೇಟೆ ಓಣಿಯ ಶ್ರೀ ಹನುಮಾನ ದೇವಸ್ಥಾನದಲ್ಲಿ 7 ನೆಯ ವರ್ಷದ ಕಾರ್ತಿಕೋತ್ಸವವು ಶನಿವಾರ ದಿನಾಂಕ 10-2026 ರಂದು ಮುಂಜಾನೆ 7 ಗಂಟೆಗೆ ಜರುಗುತ್ತದೆ.
ಶ್ರೀ ಮಾರುತಿ ದೇವರ ವಾಯುಸ್ತುತಿ ಮತ್ತು ಮಹಾಭಿಷೇಕ ಶುಭಾರಂಭದೊಂದಿಗೆ ಕುಂಭಮೇಳ ಮುಂಜಾನೆ 10 ಗಂಟೆಗೆ ಮತ್ತು ಪೂಜ್ಯ ರಿಂದ ಪ್ರವಚನ. ಸಂಜೆ 6 ಗಂಟೆಗೆ ಮಹಾಮಂಗಳಾರತಿ ನಂತರ ದೀಪೋತ್ಸವ ಕಾರ್ಯಕ್ರಮ ಜರಗುವುದು.
ರವಿವಾರ ಜನವರಿ,11-2026 ರಂದು ಮುಂಜಾನೆ 8 ಗಂಟೆಗೆ ಪಲ್ಲಕ್ಕಿ ಉತ್ಸವ ಸೇವೆಯೊಂದಿಗೆ ಶ್ರೀ ಮಾರುತಿ ದೇವರ ಕಾರ್ತಿಕೊತ್ಸವವು ಮುಕ್ತಾಯಗೊಳ್ಳುವುದು. ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಶಿರಹಟ್ಟಿ-ಬಾಳೆಹೊಸುರು, ಶ್ರೀ ಅಭಿನವ ಚೌಕೇಶ್ವರ ದೇವರು, ವೀರಕ್ತಮಠ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಶ್ರಿ ಮಾಳಿಂಗೇಶ್ವರ ಆಶ್ರಮ, ಯಾದವಾಡ ಪೂಜ್ಯರಿಂದ ಪ್ರವಚನ ಆಯೋಜನೆ ಮಾಡಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀ ಹನುಮಾನ ದೇವಸ್ಥಾನದ ಕಮೀಟಿಯ ಸದಸ್ಯರು ಹಾಗೂ ಗ್ರಾಮದ ಹಿರಿಯರು ಕಾರ್ತಿಕೋತ್ಸವದ ಬಿತ್ತಿ ಪತ್ರ ಬಿಡುಗಡೆಗೊಳಿಸಿ ಪತ್ರಿಕೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಹನುಮಾನ ದೇವಸ್ಥಾನದ ಕಮೀಟಿಯ ಸದಸ್ಯರು ಹಾಗೂ ಗ್ರಾಮದ ಹಿರಿಯರಾದ ಸೋಮಶೇಖರ ಕತ್ತಿ, ಆತ್ಮಾರಾಮ ಇತಾಪಿ, ರಮೇಶ ಪತ್ತಾರ, ಮಲ್ಲಿಕಾರ್ಜುನ ಅಥಣಿ, ಮಲ್ಲಿಕಾರ್ಜುನ ಕಟ್ಟಿ, ಕಲ್ಮೇಶ ಗಾಣಗಿ, ವೀರಣ್ಣ ಅಥಣಿ, ಬಸವರಾಜ ಹುನಗುಂದ, ಶಿವಪುತ್ರಪ್ಪ ಕಂಠಿಗಾವಿ, ಈರಣ್ಣ ಅರಕೇರಿ, ಮೌನೇಶ ಪತ್ತಾರ, ಪ್ರದೀಪ ಇತಾಪಿ, ಮುದಸ್ಸರ ಕೆಮಲಾಪುರ, ಶಿವಾನಂದ ಹ್ಯಾಗಾಡಿ, ಉಪೇಂದ್ರ ಸುಣಗಾರ , ಈರಣ್ಣ ಮುದ್ದಾಪೂರ, ಆದರ್ಶ ಒಂಟಿ ಇನ್ನೂ ಅನೇಕರು ಇದ್ದರು.

