ಕುಳಲಿಯಲ್ಲಿ ಹಿರಿಯರ ಪೂರ್ವಭಾವಿ ಸಭೆ ದಿ .10 ರಂದು–ಶಂಕರಾನಂದ ಶ್ರೀಗಳು

Must Read

ಮುಧೋಳ – ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಇದೆ ದಿ 15 ರಿಂದ 24ರ ವರೆಗೆ ಒಟ್ಟು 10 ದಿನಗಳ ಕಾಲ 20 ನೇ ಅಖಿಲ ಭಾರತ ವೇದಾಂತ ಪರಿಷತ್ ಹಾಗೂ ರಾಜ್ಯ ಮಟ್ಟದ ಜನಪದ‌ ಸಂಗೀತೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಗುರುನಾಥಾರೂಢರ ಮಠದ ಪೂಜ್ಯರಾದ ಶಂಕರಾನಂದ ಶ್ರೀಗಳು ಹೇಳಿದರು.

ಅವರು ಪತ್ರಿಕೆ ಯೊಂದಿಗೆ ಮಾತನಾಡುತ್ತ ಅದ್ವೈತ ಸಾರ್ವಭೌಮ ಜಗದ್ಗುರು ಶ್ರೀ ಸಿದ್ಧಾರೂಢರ ಪುರಾಣ, ಸಾಧು ಚಕ್ರವರ್ತಿ ಜಗದ್ಗುರು ಶ್ರೀ ಶಿವಾನಂದ ಭಾರತಿ ಶ್ರೀಗಳ ಬೆಳ್ಳಿ ರಥದಲ್ಲಿ ಉತ್ಸವ.86 ನೇ ಜಯಂತ್ಯುತ್ಸವ, ತುಲಾಭಾರ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದ ಅವರು 10 ದಿನಗಳ ಕಾಲ ನಡೆಯುವ ಈ ವೇದಿಕೆಯಲ್ಲಿ ಸಾಧಕರಿಗೆ ಗೌರವ, ನಾಡಿನ ಹೆಸರಾಂತ ಸಂಗೀತ ಕಲಾವಿದರಿಂದ ಸಂಗೀತ ರಸದೌತಣ ಹಾಗೂ ಬಂದ ಭಕ್ತಸ್ತೋಮಕ್ಕೆ ನಿರಂತರ ಪ್ರಸಾದ‌, ವಿಶಿಷ್ಟ ರೀತಿಯಲ್ಲಿ ರಥೋತ್ಸವ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ತನ್ನಿಮಿತ್ತ ಸ್ಥಳೀಯ ಹಿರಿಯರ, ಕಲಾವಿದರ, ಕಾಯ೯ಕತ೯ರ ಸಭೆಯನ್ನು ಶನಿವಾರ ದಿ.10 ರಂದು ಮುಂಜಾನೆ 10 ಗಂಟೆಗೆ ಕರೆಯಲಾಗಿದೆ ಎಲ್ಲರೂ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸಹಕಾರ ಮಾಗ೯ದಶ೯ನ ನೀಡಲು ಶಂಕರಾನಂದ ಶ್ರೀಗಳು ಕೋರಿದ್ದಾರೆ.

ಈ ಸಂದರ್ಭದಲ್ಲಿ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು, ಹಿರಿಯರಾದ ಸಂಗಪ್ಪ ಗಣಿ, ಶಿವಪ್ಪ ಪವಾಡ ಶೆಟ್ಟಿ, ರಮೇಶ ತಳಪಟ್ಟಿ, ಗಂಗಪ್ಪ ಲಕ್ಕಪ್ಪ ಗೋಳು, ಕಾಯ೯ಕತ೯ರಾದ ರಮೇಶ ಸೋಲೋಣಿ, ಮುತ್ತಪ್ಪ ಪೋಳ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group