ಸಿಂದಗಿ: ಮನದ ನೆಮ್ಮದಿಗಾಗಿ ಸುಖದ ಜೀವನಕ್ಕಾಗಿ ಮುಕ್ತಿಯ ಪ್ರಾಪ್ತಿಗಾಗಿ ಧರ್ಮ ಆಚರಣೆ ಆ ಧರ್ಮ ಜ್ಞಾನ ವೇದ ಪುರಾಣದಿಗಳಿಂದ ಸಾಧ್ಯ ಆದರೆ ಸಂಸ್ಕೃತ ಭಾಷೆ ಅರಿಯದವರಿಗೆ ಇದು ಕಬ್ಬಿಣದ ಕಡಲೆ ಪ್ರತಿ ಸಾಮಾನ್ಯ ಮನೆ ಮನಕ್ಕು ಜ್ಞಾನ ಮುಟ್ಟಿಸುವ ಕಾರ್ಯ ದಾಸ ಸಾಹಿತ್ಯ ಮಾಡುತ್ತಿದೆ ಪರಮಪೂಜ್ಯ ಶ್ರೀ ಶ್ರೀ 1008 ಸತ್ಯಾತ್ಮ ತೀರ್ಥ ಸ್ವಾಮಿಗಳ ಕೃಪಾಶೀರ್ವಾದದಿಂದ ನಡೆಯುತ್ತಿದೆ ಎಂದು ಪಂ ಶ್ರೀ ವಿಠಲಾಚಾರ್ಯ ಮಂಗಳವೇಡಿರವರು ಹೇಳಿದರು.
ನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿಧಾನದಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಸೌರಭ ದಾಸ ಸಾಹಿತ್ಯದ ಅರ್ಧವಾರ್ಷಿಕ ಪರೀಕ್ಷೆ ಉದ್ಘಾಟಿಸಿ ಮಾತನಾಡಿ ವಿಶ್ವದಾದ್ಯಂತ ಹರಿದಾಸ ಸಾಹಿತ್ಯವನ್ನು ದಾಸರ ಪದಗಳನ್ನು, ಸುಳಾದಿಗಳನ್ನು, ಶ್ಲೋಕಗಳನ್ನು ಗುರು ಜಗನ್ನಾಥದಾಸರು ರಚಿಸಿದ ಹರಿಕಥಾಮೃತಸಾರದಂತಹ ಮೇರು ಕೃತಿಗಳನ್ನು ಮತ್ತು ಎಲ್ಲಾ ಹರಿದಾಸ, ದಾಸಿಯರು ರಚಿಸಿದ ದಾಸರ ಪದಗಳನ್ನು ಸರಳವಾಗಿ ಅರ್ಥಮಾಡಿಕೊಳ್ಳುವದರ ಜೊತೆಗೆ ಇನ್ನು ಹೆಚ್ಚಿನ ವ್ಯಾಪಕ ಹರಿದಾಸ ಸಾಹಿತ್ಯವನ್ನು ಪ್ರಚಾರ ಮಾಡುವುದಕ್ಕೋಸ್ಕರ ವಿದ್ಯಾಲಯವನ್ನು ಸ್ಥಾಪಿಸಿ ಪಂ.ಪ್ರಮೋದಾಚಾರ್ಯ ಪೂಜಾರ ಅವರ ಸಾರಥ್ಯದಲ್ಲಿ 2017ರಿಂದ ಯಶಸ್ವಿಯಾಗಿ ತನ್ನ ಕಾರ್ಯವನ್ನು ಮಾಡುತ್ತಾ ಬರುತ್ತಿದೆ ಪ್ರತಿ ವರ್ಷದಂತೆ ಈ ವರ್ಷ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿಧಾನದಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಸೌರಭ ದಾಸ ಸಾಹಿತ್ಯದ ಅರ್ಧವಾರ್ಷಿಕ ಪರೀಕ್ಷೆಗಳನ್ನ ಯಶಸ್ವಿಯಾಗಿ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.
ವರದಾ ದೇಶಪಾಂಡೆ, ಜಯಶ್ರೀ ಕುಲಕರ್ಣಿ, ರೇಖಾ ಕುಲಕರ್ಣಿ, ಪದ್ಮಜಾ ಕುಲಕರ್ಣಿ, ಸಂಗೀತಾ ಕುಲಕರ್ಣಿ, ಸುನೀತಾ ಕುಲಕರ್ಣಿ, ನೀತಾ ಜೋಷಿ ,ಪ್ರೇರಣಾ ಕುಲಕರ್ಣಿ, ಜ್ಯೋತಿ ಕುಲಕರ್ಣಿ, ಅಮಿತಾ ಪೋತದಾರ, ಶ್ಯಾಮಲಾ ಜಹಗಿರದಾರ, ಆಶಾ ಪೋತದಾರ, ಮಮತಾ ಜೋಷಿ ಮುಂತಾದವರು ಪರೀಕ್ಷೆಯ ಹಾಜರಾದರು.
ಈ ಸಂದರ್ಭದಲ್ಲಿ ಕೃಷ್ಣಾ ಕುಲಕರ್ಣಿ ಪವನ್ ಕುಲಕರ್ಣಿ ಮತ್ತು ಮಕ್ಕಳ ಶಿಕ್ಷಕ ಸಾಹಿತಿ ಬಸವರಾಜ ಅಗಸರ ಹಾಜರಿದ್ದು ಪರೀಕ್ಷೆ ಕುರಿತು ಮಾರ್ಗದರ್ಶನ ನೀಡಿದರು.

