ಬೆಳಗಾವಿ : ದಿ.ವಿಜಯಕುಮಾರ ಕುರಣೆ ನಿವೃತ್ತ ಡಯಟ್ ಉಪನ್ಯಾಸಕರು ಇವರ ಮಗಳಾದ ಶ್ರೀಮತಿ ಅಲಕಾ ವಿಜಯಕುಮಾರ ಕುರಣೆ, ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಖಾನಾಪುರ ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಡಾಕ್ಟರೆಟ್ ಪದವಿ ದೊರಕಿದೆ.
ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಗೆ ಸಲ್ಲಿಸಿದ ‘ಬಸವರಾಜ ಕಟ್ಟೀಮನಿಯವರ ಸಾಹಿತ್ಯದಲ್ಲಿ ಚಳವಳಿಗಳು’ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದ್ದು, ಸಹ ಪ್ರಾಧ್ಯಾಪಕರಾದ ಗಜಾನನ ನಾಯ್ಕ ಮಾರ್ಗದರ್ಶನ ನೀಡಿದ್ದರು.

