ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸಂಜೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಸುನಂದಾ ಎಮ್ಮಿ ಪ್ರಸ್ತುತ ಸನ್ನಿವೇಶದಲ್ಲಿ ಸ್ತ್ರೀ ಶಿಕ್ಷಣ ಬಹಳ ಅವಶ್ಯಕವಾಗಿದೆ. ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅಂದಿನ ಸಮಾಜದ ಸಾಕಷ್ಟು ನಿಂದನೆ ಅಪಮಾನ ಸಹಿಸಿಕೊಂಡು ಸ್ತ್ರೀ ಶಿಕ್ಷಣಕ್ಕೆ ಮುನ್ನುಡಿ ಬರೆದ ಮಹಾನ್ ಮಹಿಳೆ ಶಿಕ್ಷಕಿಯಾಗಿ ಎಲ್ಲರಿಗೂ ಆದರ್ಶಪ್ರಾಯರಾದರು ಎಂದು ಹೇಳಿದರು.
ಗುರುಮಾತೆಯರು ಸಾವಿತ್ರಿಬಾಯಿ ಫುಲೆಯವರ ಕುರಿತು ಜಿಲ್ಲಾ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ನಸ್ರೀನಬಾನು ಕಾಶೀಮನವರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾಧಕರಿಗೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಸಕ್ರೆಣ್ಣವರ ಸ್ವಾಗತ ಪ್ರಾಸ್ತಾವಿಕ ಮಾತನಾಡಿದರು.
ಗಂಗಮ್ಮ ಪಾಟೀಲ ನಿರೂಪಿಸಿದರು. ಶ್ರೀಮತಿ ಸಾವಿತ್ರಿ ಉಪ್ಪಿನ ವಂದನಾರ್ಪಣೆ ಮಾಡಿದರು. ಈ ವೇಳೆ ಬರಹಗಾರರಾದ ಎಂ.ವೈ.ಮೆಣಸಿನಕಾಯಿ, ಡಾ.ಸುನೀಲ ಪರೀಟ, ರಾಜು ಕೋಲಕಾರ,ಸುಶೀಲಾ ಗುರವ,ಭರತ ಬಳ್ಳಾರಿ, ಆರ್.ಬಿ. ಬನಶಂಕರಿ, ಎಸ್.ಎಂ.ಭಂಡಾರಿ, ವಿಠ್ಠಲ ಯಕಾಜನವರ, ಮಹೇಶ ನೀಲಜಿ, ಬೇವಿನಕೊಪ್ಪ ಮಠ, ಪ್ರೇಮಾ ಸಿಡಲಿ, ರುದ್ರೇಶ ಬಡಿಗೇರ, ಶಬಾಷ್ಖಾನ್, ಕಡೆಮನಿ ಲಂಬುಗೊಳ್ ಗೀತಾ ಮಡಿವಾಳರ ಮುಂತಾದವರು ಭಾಗವಹಿಸಿದ್ದರು.

