ಸಿಂದಗಿ: ಯಲ್ಲಾಪುರದ ರಾಮಪುರ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿ ತನ್ನ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದ ಕಡುಬಡತನದ ಹಿಂದೂ ಹೆಣ್ಣು ಮಗಳಾದ ರಂಜಿತಾಳ ಬರ್ಬರ ಹತ್ಯೆ ಖಂಡನಾರ್ಹ. ರಂಜಿತಾಳ ಹತ್ಯೆ ಮಾಡಿದ ಮುಸ್ಲಿಂ ಜಿಹಾದಿ ರಫೀಕ್ ಹಿಂದೂ ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಆದರೆ ಆತನಿಗೆ ಕುಮ್ಮಕ್ಕು ಕೊಟ್ಟವರನ್ನು ಬಂಧಿಸಲೇಬೇಕು ಎಂದು ವಿಎಚ್ ಪಿ ಪ್ರಮುಖ ಶೇಖರಗೌಡ ಹರನಾಳ ಹೇಳಿದರು.
ಈ ಹಿಂದೆ ಹುಬ್ಬಳ್ಳಿ ಕಾಲೇಜಿನಲ್ಲಿ ನೇಹಾ ಹಿರೇಮಠಳನ್ನು ಕಗ್ಗೊಲೆ ಮಾಡಿದ ಮತಾಂಧ ಫಯಾಝನ ಪ್ರಕರಣ, ಗದುಗಿನ ಅಪೂರ್ವ ಪುರಾಣಿಕ್ ಪ್ರಕರಣ ವಿಜಯಲಕ್ಷ್ಮಿ ತಳವಾರ ಜಿಹಾದಿ ಸದ್ದಾಂನಿಂದ ಅತ್ಯಾಚಾರ ವೆಸಗಿ ಗರ್ಭಿಣಿ ಮಾಡಿದ ಪ್ರಕರಣ ಇವೆಲ್ಲವೂ love ಜಿಹಾದ್ ನಿಂದ ಮಾಡುವ ವಿವಿಧ ಕರಾಳ ಮುಖಗಳಾಗಿವೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಓಲೈಕೆಯಲ್ಲಿ ತೊಡಗಿರುವುದರಿಂದ ನಿಷ್ಪಕ್ಷಪಾತ ತನಿಖೆಯಾಗಲು ಈ ಎಲ್ಲ ಪ್ರಕರಣಗಳನ್ನು ಎನ್ ಐ ಎ ಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು ಹಾಗೆಯೇ ಜ. 1 ರಂದು ವಿಜಯಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಹೋರಾಟ ಮಾಡುತ್ತಿರುವ ರೈತ ಮುಖಂಡರನ್ನು ಮಠಾಧೀಶರು ದಲಿತ ಮುಖಂಡರು ವಿವಿಧ ಸಮಾಜ ಮತ್ತು ಸಂಘಟನೆ ಮುಖಂಡರನ್ನು ಪೊಲೀಸ್ ಇಲಾಖೆ ಬಂದಿಸಿದ್ದು ಈ ಕೂಡಲೆ ಎಲ್ಲಾ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
ದಲಿತ ಯುವ ಮುಖಂಡ ಭೀಮಾಶಂಕರ ರತ್ನಾಕರ ಮಾತನಾಡಿ, ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಈ ಎಲ್ಲಾ ಕೊಲೆಗಳಿಗೆ ಮೂಲ ಕಾರಣ love ಜಿಹಾದ್ ಇಂಥ ಪ್ರಕರಣಗಳನ್ನು ನಾವು ಪಾಕಿಸ್ತಾನ, ಬಾಂಗ್ಲಾದೇಶ ಗಳಲ್ಲಿ ನಡೆಯುವುದನ್ನು ನೋಡುತ್ತಿದ್ದೆವು ಆದರೆ ಈಗ ಕರ್ನಾಟಕದಲ್ಲಿಯೂ ನೋಡುವ ಪರಿಸ್ಥಿತಿ ಬಂದಿದೆ ಇಂತಹ ಪ್ರಕರಣಗಳನ್ನು ನಿಭಾಯಿಸುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸರ್ಕಾರವನ್ನು ದೂರಿದರು.
ಈ ಸಂದರ್ಭದಲ್ಲಿ ವಿಎಚ್ ಪಿ ನಗರ ಅಧ್ಯಕ್ಷ ಬಸನಗೌಡ ಬೆನ್ನಟ್ಟಿ ಪ್ರಮುಖರಾದ ನಂದೀಶ ನಂದರಗಿ ರಾಯಪ್ಪ ಬಡಿಗೇರ ಶಿವರಾಜ ಸಿದ್ದು ಅನಿಲ, ಚಂದನಗೌಡ, ಜಗದೀಶ, ಬಸನಗೌಡ, ರಮೇಶ, ಹಣಮಂತ, ಹಾಗೇ ದಲಿತ ಮುಖಂಡರಾದ ಪರಶುರಾಮ ಕುಮಸಗಿ,ರಮೇಶ ಗನ್ನಾಪುರ, ದತ್ತು ಹೊಸಮನಿ, ಏಕನಾಥ ದ್ಯಶಾಳ,ಮುಕೇಶ ಬಡಿಗೇರ, ಬಸು ಖಾನಾಪುರ, ಲಕ್ಷ್ಮಣ ಇನ್ನು ಅನೇಕ ಪ್ರಮುಖರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಈ ಪ್ರತಿಭಟನೆ ನೇತೃತ್ವ ಸಿಂದಗಿ ತಾಲೂಕ VHP ಕಾರ್ಯದರ್ಶಿಗಳಾದ ಬಸವರಾಜ ಬಿರಾದಾರ ವಹಿಸಿದ್ದರು.

