ಪುಸ್ತಕ ಪ್ರೀತಿಸಿ, ಹಗಲು ರಾತ್ರಿ ಓದಿ – ಎಂ ಎನ್ ಬಿರಾದಾರ

Must Read

ಸಿಂದಗಿ; ಪರೀಕ್ಷೆ ನಿನ್ನಲ್ಲಿ ಎನು ಬಯಸುತ್ತದೆ ಎಂದರೆ ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಸ್ವಯಂ ನಿಯಂತ್ರಣ ಮಾಡಿದ್ದಾಗ ಮಾತ್ರ ಯಾವುದೇ ತರಬೇತಿಯಲ್ಲಿ ಸಾಧನೆ ಮಾಡಲು ಸಾಧ್ಯ. ಪುಸ್ತಕವನ್ನು ಪ್ರೀತಿಸಿ ಹಗಲು ರಾತ್ರಿಯನ್ನದೆ ಓದಿ ಶ್ರಮ ವಹಿಸಿದರೆ ಗೌರವ ಸನ್ಮಾನಗಳು ತನ್ನಿಂದ ತಾನೆ ಬಯಸಿ ಬರುತ್ತವೆ ಎಂದು ವಿಜಯಪುರ ಚಾಣಕ್ಯ ಕರಿಯರ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಶಾಲಾ ಶಿಕ್ಷಣ ಇಲಾಖೆ (ಪಪೂ) ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿ, ಬಡತನದಿಂದ ಬೆಂದು ಎತ್ತಿನ ಕೊಟಿಗಿಯಲ್ಲಿ ಜೀವನ ನಡೆಸಿದ ನನ್ನ ಬದುಕು ಪುಸ್ತಕ ಓದಿನ ಶಕ್ತಿಯಿಂದ ತಿರುವು ಪಡೆದುಕೊಂಡು ಸ್ನೇಹಿತರ ಪ್ರೇರಣೆಯಿಂದ ಒಂದು ಹಂತ ತಲುಪಿ ಜಿ.ಪಿ.ಪೋರವಾಲ ಕಾಲೇಜು ವೇದಿಕೆಯನ್ನಾಗಿ ಬಳಸಿಕೊಂಡು ಚಾಣಕ್ಯ ಕರಿಯರ ಅಕಾಡೆಮಿ ಪ್ರಾರಂಭಿಸಿ ಯಾವುದೇ ಮಾರ್ಗದರ್ಶನ ವಿಲ್ಲದೆ ೨೬ ವರ್ಷಗಳಿಂದ ತರಬೇತಿ ನಡೆಸುತ್ತಿದ್ದೇನೆ ಕಾರಣ ಓದಿಗೆ ಬಡತನ ಅಡ್ಡಿಯಾಗಬಾರದು ಆ ಕಷ್ಠ ಇಂದು ಒಂದು ಶಕ್ತಿಯಾಗಿ ನಿಲ್ಲಿಸುವಂತ ದಾರಿ ಮಾಡಿಕೊಟ್ಟಿದೆ. ಈ ಅಕಾಡೆಮಿಯು ಹೆಣ್ಣು ಮಕ್ಕಳಿಗೆ ಉಚಿತ ತರಬೇತಿ ನೀಡಿ ೮೦ ಕಾನಸ್ಟೆಬಲ ಹುದ್ದೆ ಕಲ್ಪಿಸಿಕೊಟ್ಟಿದಲ್ಲದೆ ಮಾಜಿ ಸೈನಿಕರಿಗೆ, ಅನಾಥ ಮಕ್ಕಳಿಗೆ ವಿಧವೆಯರಿಗೆ, ವಿವಾಹ ವಿಚ್ಚೇಧನ ಪಡೆದವರಿಗೆ ಮತ್ತು ನನ್ನ ಜನ್ಮಸ್ಥಳ ತಿಳಗೂಳ ಗ್ರಾಮದ ಪ್ರತಿಯೊಬ್ಬರಿಗೂ ಉಚಿತ ತರಬೇತಿ ನೀಡಿದ ಪ್ರತಿಫಲವಾಗಿ ರಾಜ್ಯದಲ್ಲಿ ೨೫ ಸಾವಿರಕ್ಕೂ ಅಧಿಕ ಸರಕಾರಿ ಹುದ್ದೆ ನಿರ್ಮಾಣ ಮಾಡಿಕೊಟ್ಟಿದೆ ಕಾರಣ ಓದಿಗೆ ಬಡತನ ಎಂದು ಅಡ್ಡಿಯಾಗುವುದಿಲ್ಲ ನಿನ್ನಲ್ಲಿ ಛಲವಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ವಿಜಯಪುರ ಗ್ರಾಮೀಣ ಉಪವಿಭಾಗದ ಪೊಲೀಸ ಉಪ ಅಧಿಕ್ಷಕ ಟಿಎಸ್.ಸುಲ್ಪಿ ಮಾತನಾಡಿ, ಮನಸ್ಸು ಮಾಡಿದರೆ ಏನನ್ನು ಮಾಡಬಹುದು ಎನ್ನುವುದಕ್ಕೆ ನಾನೇ ನಿಜವಾದ ಸಾಕ್ಷಿ. ಪಿಯುಸಿಯಲ್ಲಿಯೇ ಪೊಲೀಸ ಅಧಿಕಾರಿಯಾಗಬೇಕು ಎನ್ನುವ ಛಲವಿತ್ತು. ಕೇಂದ್ರಿಯ ವಿದ್ಯಾಲಯದ ದೈಹಿಕ ಶಿಕ್ಷಕ ಹುದ್ದೆಯಲ್ಲಿದ್ದರು ಕೂಡಾ ಯಾವುದೇ ಒತ್ತಡಕ್ಕೊಳಗಾಗದೇ ಬ್ರಾಹ್ಮೀ ಮಹೂರ್ತದಲ್ಲಿ ಓದಿ ನನ್ನ ಜೀವನವನ್ನು ರೂಪಿಸಿಕೊಂಡಂತೆ ಇಂದಿನ ವಿದ್ಯಾರ್ಥಿಗಳು ಮನಸ್ಸು ಗಟ್ಟಿ ಮಡಿಕೊಂಡು ಇಷ್ಠಪಟ್ಟು ಓದಿ ಅಲ್ಲದೆ ಒಳ್ಳೆಯ ಗೆಳೆತನ ಮಾಡುವ ಮೂಲಕ ದುಶ್ಟಟದಿಂದ ದೂರವಿರಿ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಸಮ್ಮುಖ ವಹಿಸಿದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಆಶಿರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ರಾಜ್ಯಕ್ಕೆ ೯ ನೇ ರ‍್ಯಾಂಕ ಪಡೆದ ಮಲಕಣ್ಣ ತಳವಾರ ಸನ್ಮಾನಿಸಿ ಗೌರವಿಸಲಾಯಿತು.

ಸುಪ್ರೀಯಾ ಟಕ್ಕಳಕಿ, ಸಂಗೀತಾ ತಳವಾರ, ಮಲಕಣ್ಣ ತಳವಾರ ತಮ್ಮ ಸಾಧನೆಯ ಬಗ್ಗೆ ಮೆಲಕು ಹಾಕಿದರು.
ಪ್ರಾಧ್ಯಾಪಕ ಡಾ ಶರಣಬಸವ ಜೋಗುರ ಸ್ವಾಗತಿಸಿದರು. ವಾರ್ಷಿಕ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಬಸವರಾಜ ಜಮಾದಾರ ವರದಿವಾಚನ ಮಾಡಿದರು. ಪ್ರಾಧ್ಯಾಪಕ ಪ್ರಸನ್ ಜೋಗುರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ನಿಕೀತಾ ಪೂಜಾರಿ, ಸೃಷ್ಠಿ ರೋಡಗಿ ಪ್ರಾಧ್ಯಾಪಕ ಸಿದ್ದಲಿಂದ ಬೂದಿಹಾಳ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸುಪ್ರೀಯಾ ಮಾವೂರ ವಂದಿಸಿದರು.

LEAVE A REPLY

Please enter your comment!
Please enter your name here

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group