ಸ್ವಾತಂತ್ರ್ಯ ಯೋಧ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ

Must Read

ಗಂಡು ಮೆಟ್ಟಿನ ಉತ್ತರ ಕರ್ನಾಟಕದ ಹುಬ್ಬಳಿಯ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳು ಬಹುಶಃ ಕರ್ನಾಟಕದ ಭಾರತದ ಇತಿಹಾಸಗಳ ಪುಟಗಳಲ್ಲಿ ಸೇರದೆ ಹೋಗಿದ್ದು ಅತ್ಯಂತ ನೋವಿನ ಸಂಗತಿ. ಇಂತಹ ಅಪ್ಪಟ ಗಾಂಧಿವಾದಿ ರಾಷ್ಟ್ರ ಭಕ್ತ ಸ್ವಾತಂತ್ರ್ಯ ಸೇನಾನಿ ಸಂತ ಸದ್ಗುರು ಶ್ರೀ ಮಹದೇವಪ್ಪ ಮುರುಗೋಡ ಇವರ ಜೀವನದ ಸಂಘರ್ಷ ಸಮನ್ವಯತೆಯ ಹಾದಿಯನ್ನು ನೋಡೋಣ.

ಮಹಾದೇವರ ಮನೆತನದ ಹಿರಿಯರು ಮೂಲತಃ ಸವದತ್ತಿ ತಾಲ್ಲೂಕಿನ ಮುರಗೋಡ ಗ್ರಾಮದವರು. ಅವರ ಮನೆತನದ ಹಿರಿಯರು ಮನೆತನದ ಮೂಲ ಉದ್ಯೋಗವಾದ ಕಿರಾಣಿ ವ್ಯಾಪಾರ ಮಾಡುತ್ತ ಹುಬ್ಬಳ್ಳಿ ಪಟ್ಟಣದಲ್ಲಿ ಬಂದು ಅಲ್ಲಿಯೇ ನೆಲೆಸಿದರು.

ಮನೆಯ ಯಜಮಾನ ಶಿವಪ್ರಭುಗಳು.ಅವರ ಧರ್ಮಪತ್ನಿ ಕಾಳಮ್ಮ. ಧಾರ್ಮಿಕ ಹಿನ್ನೆಲೆ, ಉತ್ತಮ ವ್ಯಕ್ತಿತ್ವ ಹೊಂದಿದ ಈ ದಂಪತಿಗಳು ಇಂಚಗೇರಿ ಮಠದ ಸದ್ಗುರುಗಳು ಶ್ರೀ ಗಿರಿಮಲ್ಲೇಶ್ವರ ಮಹಾರಾಜರಿಂದ ನಾಮ ಪಡೆದಿದ್ದರು. ಇಂಚಗೇರಿ ಸಂಪ್ರದಾಯದ ನಿತ್ಯನೇಮ, ಭಜನೆ,ಧ್ಯಾನದ ವಾತಾವರಣ ಅವರ ಮನೆತನದಲ್ಲಿ ಇತ್ತು. ಶಿವಪ್ರಭುಗಳು ಚೆನ್ನಾಗಿ ಇಂಗ್ಗೀಷ ಬಲ್ಲವರಾಗಿದ್ದರಿಂದ ಹುಬ್ಬಳ್ಳಿಯ ರಾಯಲಿ ಕಂಪನಿಯಲ್ಲಿ ಮ್ಯಾನೇಜರ ಹುದ್ದೆ ಪಡೆದಿದ್ದರು.

*ಬಾಲ್ಯ ಮತ್ತು ಶಿಕ್ಷಣ*
ಸತ್ಪುರುಷರು, ಮಹಾತ್ಮರು,ಜ್ಞಾನಿಗಳು ಜನ್ಮವೆತ್ತಿ ವಿಶ್ವವನ್ನೇ ಬೆಳಗಿದ್ದಾರೆ. ಅಂತಹ ಪುರುಷರು ಶ್ರೀ ಮಹಾದೇವರು.
02.11.1915 ರಂದು ವೀರಾಪುರ ಓಣಿ ಹುಬ್ಬಳ್ಳಿಯಲ್ಲಿ ತಂದೆ ಶಿವಪ್ರಭುಗಳು ತಾಯಿ ಕಾಳಮ್ಮ ಇವರ ಉದರದಲ್ಲಿ
ಜನಿಸಿದರು.
ಧ್ಯಾನಸ್ಥಿತಿಯಲ್ಲಿರುವ ಮಗು ಗುರು ಗಿರಿಮಲ್ಲೇಶ್ವರರು ಹಸ್ತ ಇರಿಸಿದ ನಂತರ ಕಣ್ಣು ತೆರೆಯಿತು.
ಸಾತ್ವಿಕ ಕಳೆ ಹೊಂದಿರುವ ಮಗುವಿಗೆ “ಮಹಾದೇವ”ನೆಂದು ನಾಮಕರಣ ಮಾಡಿದರು. ಮಗು ಮಹಾದೇವನ ಬಾಲ್ಯವು ಸಾಹಸದ ಘಟನೆಗಳಿಂದ ಕೂಡಿತ್ತು. ಚಿಕ್ಕಂದಿನಲ್ಲಿಯೇ ಅಪಾರ ಧೈರ್ಯವನ್ನು, ಧ್ಯಾನಯೋಗವನ್ನು ಮೈಗೂಡಿಸಿಕೊಂಡಿದ್ದರು. ಮಹಾದೇವನ ತುಂಟಾಟ, ಬಾಲಲೀಲೆಗೆ ಬೇಸತ್ತು ವೀರಾಪೂರ ಓಣಿಯಲ್ಲಿಯ ಕನ್ನಡ ಶಾಲೆಗೆ ದಾಖಲಿಸುತ್ತಾರೆ. 4 ನೆಯ ಇಯತ್ತೆಯ ವರೆಗೆ ಶಿಕ್ಷಣ ಪೂರೈಸಿದ ಮಹಾದೇವರು.

ಗುರುಗಳು ಅ,ಆ,ಇ,ಈ…ಹೇಳಿದರೆ…..ಮಹಾದೇವನು..ಉ,ಊ,ಋ,ಎ ಮುಂದಿನ ಅಕ್ಷರಗಳನ್ನು ಬರೆಯುವ ವಿದ್ಯಾರ್ಥಿಯಾಗಿದ್ದರು. ಶಾಲೆಯಲ್ಲಿ ತಾನೇ ಮುಂದಾಳುತ್ವ ವಹಿಸುವುದು ವಿದ್ಯಾರ್ಥಿ ನಾಯಕತ್ವವನ್ನು ನಿರ್ವಹಿಸುವುದು ಅವರ ಗುಣಗಳಲ್ಲಿ ಸರ್ವ ಶ್ರೇಷ್ಠ.

*ಧ್ಯಾನಕ್ಕೆ ಹೊರಳಿದ ಶ್ರೀ ಮಹಾದೇವರು*

ಧ್ಯಾನವೇ ಅವರ ಆಟ, ಪಾಠವಾಗಿತ್ತು.ತನ್ನ ಸಂಗಡಿಗರಿಗೂ ಅದನ್ನು ಹೇಳಿಕೊಡುತ್ತಿದ್ದರು. ಬಾಲ್ಯದಲ್ಲಿಯೇ ಅಧ್ಯಾತ್ಮವನ್ನು ಉಸಿರನ್ನಾಗಿಸಿಕೊಂಡ ಮಹಾದೇವರು ಮುಂದೆ ಇಂಚಗೇರಿ ಮಠದ ನಾಲ್ಕನೆಯ ಗುರುಗಳಾಗಿ ಸ್ಥಾನವನ್ನು ಅಲಂಕರಿಸುತ್ತಾರೆ.

*ರಾಜಕೀಯ, ಸಾಮಾಜಿಕ, ಕೃಷಿ, ಧಾರ್ಮಿಕ, ಶೈಕ್ಷಣಿಕ,ಸಾಂಸ್ಕೃತಿಕ ಸಾಧನೆಯನ್ನು ಗೈಯ್ಯುತ್ತಾರೆ.*

ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿ
ಕ್ರಾಂತಿಕಾರಿ ಧ್ಯೇಯಗಳಿಂದ ರಾಸುರಿ ಆಯಾಮವನ್ನು ಪಡೆದು ಕಟು ಸಂಪ್ರದಾಯ ಕಂದಾಚಾರಗಳನ್ನು ಖಂಡಿಸುತ್ತಾ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಹಾಗೂ ಅನ್ಯಾಯಗಳ ವಿರುದ್ಧ ಹೋರಾಟ ನಡೆಸಿದ ಶ್ರೀ ಮಹಾದೇವಪ್ಪನವರಿಂದ ಶ್ರೀ ಕ್ಷೇತ್ರ ಇಂಚಗೇರಿ ಮಠ ದೀನದಲಿತರಿಗೆ ಆಶ್ರಯ ನೀಡಿದ ಆಶ್ರಮವಾಗಿ ಸ್ವತಂತ್ರ್ಯ ನ್ಯಾಯಾಲಯವಾಗಿ , ಸ್ವಯಂ ಉದ್ಯೋಗ ಕೇಂದ್ರವಾಗಿ ಕಾಯಕ ತತ್ವದ ಪ್ರತ್ಯೇಕ್ಷ ನಿದರ್ಶನವಾಗಿ ರೂಪುಗೊಂಡಿದ್ದು ಒಂದು ಅದ್ಭುತ ಸಾಧನೆ ಎಂದು ಹೇಳಬಹುದು.

“ಯಾರು ಜನತಾ ಜನಾರ್ಧನ ಸೇವೆಯ ಮಡುವುನಲ್ಲಿ ದುಮುಕುವರೊ ಅವರ ಅಮೃತ ಪಾನ ಮಾಡಿ ಅಮರರಾಗುವರು “ಎಂಬುದು ಶ್ರೀ ಸ.ಸ.ಮಹಾದೇವರ ಅಮೃತವಾಣಿಯಾಗಿತ್ತು. ನಿಜವಾದ ಅರ್ಥದಲ್ಲಿ ಶ್ರಿ ಮಹಾದೇವರು ಅಮರ ಜೀವಿಗಳು. ಮಹಾತ್ಮಾಗಾಂಧೀಜಯವರ ಮೊಮ್ಮಗ ಅರುಣಗಾಂಧೀಯವರು ಇಂಪ್ರಿಂಟಿ ಎಂಬ ಪಾಕ್ಷಿಕ ಇಂಗ್ಲಿಷ್ ಪತ್ರಿಕೆಯಲ್ಲಿ ಇಂಚಗೇರಿ ಸಾಂಪ್ರದಾಯದ ಕುರಿತು ತತ್ವಗಳ ಈ ದಿಟ್ಟ ಪ್ರಯೋಗ ನಮ್ಮ ಭಾರತದಾದ್ಯಂತ ಅತಿ ಶೀಘ್ರವಾಗಿ ಕಾರ್ಯಗತವಾಗಲೆಂದು ಆಶಿಸಿ ಬರೆದಿದ್ದಾರೆ.

*ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರವೆನಿಸಿದ ಹುಬ್ಬಳ್ಳಿ ಗಿರೀಶಾಶ್ರಮ*

ಅಜಾನು ಬಾಹು ಶ್ರೀ ಮಹದೇವಪ್ಪ ಮುರುಗೋಡ ಇವರು ತಮ್ಮ ಜೊತೆಗೆ ಸುಮಾರು 6000 ಕ್ಕೂ ಅಧಿಕ ಸ್ವಾತಂತ್ರ ಸೇನಾನಿಗಳನ್ನು ಸಿದ್ಧ ಪಡಿಸಿ ಆಯುಧ ಬಡಿಗೆ ಕೋಲು ಮುಂತಾದ ಅಸ್ತ್ರಗಳನ್ನು ಹೊಂದಿ ಸ್ವಾತಂತ್ರ್ಯ ಹೋರಾಟಗಾರರ ತಂಡ ಕಟ್ಟಿ ಕೊಂಡರು ತಮ್ಮ ಇಂಚಗೇರಿ ಸಂಪ್ರದಾಯದಂತೆ ಜಾತಿ ವಿಮೋಚನೆ ಸ್ವಯಂ ಉದ್ಯೋಗ ಅಂತರ್ಜಾತಿಯ ಮದುವೆಗಳು ನಡೆಯುತ್ತಿದ್ದವು. ಜನತಾ ನ್ಯಾಯಾಲಯವನ್ನು ಎಲ್ಲಾ ತಾಲೂಕು ಮತ್ತು ಹಳ್ಳಿಗಳಲ್ಲಿ ಏರ್ಪಡಿಸಿ ತುಳಿತಕ್ಕೆ ಒಳಗಾಗಿದ್ದ ಬಡವರನ್ನು ಅಸ್ಪೃಶ್ಯರನ್ನು ಎತ್ತಿ ಹಿಡಿದು ನ್ಯಾಯ ಒದಗಿಸುತ್ತಿದ್ದರು.
ಸಮಾಲೋಚನೆ ತಿಳಿವಳಿಕೆ ಪರಸ್ಪರ ಪೂರಕ ಸಂಬಂಧಗಳ ವೃದ್ಧಿಗೆ ಶ್ರಮಿಸುತ್ತಿದ್ದರು. ಇವುಗಳಿಗೆ ಬಗ್ಗದೆ ಇದ್ದವರಿಗೆ ಗಣಾಚಾರದ ರುಚಿಯನ್ನು ಶ್ರೀ ಮಹಾದೇವ ಪ್ರಭುಗಳು ತೋರಿಸುತ್ತಿದ್ದರು. ಇವರ ಕ್ರಾಂತಿಕಾರಕ ಮೌಲಿಕ ಚಿಂತನೆಗಳಿಗೆ ಮಾರು ಹೋಗಿದ್ದ ರಾಮದುರ್ಗ ಸಂಸ್ಥಾನದ ಸಿಂಹ  ಮಹದೇವಪ್ಪ ಪಟ್ಟಣ, ಹಾವೇರಿಯ ಕ್ರಾಂತಿಕಾರಿ ಮತ್ತು ಭಗತ ಸಿಂಗ್ ರ ಜೊತೆಗೆ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ  ವಿರೂಪಾಕ್ಷಪ್ಪ ಅಂಗಡಿ ಮುಂತಾದ ಅನೇಕರು ಹುಬ್ಬಳ್ಳಿಯ ಶ್ರೀ ಗಿರಿಶಾಶ್ರಮದಲ್ಲಿ ತಮ್ಮ ಕ್ರಾಂತಿಕಾರಕ ಗುಪ್ತ ಚಟುವಟಿಕೆಗಳನ್ನು ನಡೆಸುತ್ತಿದ್ದರು.

ಇವರ ಕ್ರಾಂತಿಕಾರಕ ಮೌಲಿಕ ಚಿಂತನೆಗಳಿಗೆ ಮಾರು ಹೋಗಿದ್ದ ರಾಮದುರ್ಗ ಸಂಸ್ಥಾನದ ಸಿಂಹ  ಮಹದೇವಪ್ಪ ಪಟ್ಟಣ, ಹಾವೇರಿಯ ಕ್ರಾಂತಿಕಾರಿ ಮತ್ತು ಭಗತ ಸಿಂಗ್ ಏ ಆರ ಜೊತೆಗೆ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ  ವಿರೂಪಾಕ್ಷಪ್ಪ ಅಂಗಡಿ ಮುಂತಾದ ಅನೇಕರು ಹುಬ್ಬಳ್ಳಿಯ  ಗಿರಿಶಾಶ್ರಮದಲ್ಲಿ ತಮ್ಮ ಕ್ರಾಂತಿಕಾರಕ ಗುಪ್ತ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಬ್ರಿಟಿಷರ ಮತ್ತು ಪೊಲೀಸರ ಹದ್ದಿನ ಕಣ್ಣು ಗಿರಿಶಾಶ್ರಮದ ಮೇಲಿತ್ತು. 1956 ರ ಚುನಾವಣೆ ಸಂದರ್ಭದಲ್ಲಿ ರಾಮದುರ್ಗದಲ್ಲಿ ಮೈಸೂರು ಪ್ರದೇಶ ಕಾಂಗ್ರೆಸಿನ ಅಧ್ಯಕ್ಷ ಹೂಲಿ ವೆಂಕಟರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಹುರಿಯಾಳಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ವಿರುದ್ಧ ಲೋಕಸೇವಾ ಸಂಘದ ಕಾರ್ಯದರ್ಶಿ ರಾಮದುರ್ಗ ದುರಂತದ ನಾಯಕ ನೆಪೋಲಿಯನ್ ಎನಿಸಿಕೊಂಡ ಮಹದೇವಪ್ಪ ಪಟ್ಟಣ ಎದುರಿಸುತ್ತಾರೆ.

ಡಾ ಬಿ ಡಿ ಜತ್ತಿ ಅವರ ರಾಜಕೀಯ ಗುರುಗಳೆನಿಸಿದ ಹೂಲಿ ವೆಂಕರೆಡ್ಡಿ ಅವರ ಚುನಾವಣೆಯ ಪ್ರಚಾರಕ್ಕೆ ಎಸ್ ನಿಜಲಿಂಗಪ್ಪನವರು ಆದಿಯಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ವರಿಷ್ಠ ನಾಯಕರು ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಆದರೆ ಚುನಾವಣೆಯಲ್ಲಿ ಹೂಲಿ ವೆಂಕರೆಡ್ಡಿ ಅವರು ಮಹದೇವಪ್ಪ ಪಟ್ಟಣ ಅವರ ವಿರುದ್ಧ ಸೋಲುತ್ತಾರೆ. ಇಡಿ ರಾಷ್ಟ್ರವೇ ರಾಮದುರ್ಗದ ಕಡೆಗೆ ನೋಡುತ್ತದೆ. ಆರಂಭದಿಂದಲೂ ಬಿ ಡಿ ಜತ್ತಿ ಅವರ ರಾಜಕೀಯ ಎದುರಾಳಿ ಎನಿಸಿದ ಮತ್ತು ಅವರ ವಿರುದ್ಧ ಚುನಾವಣೆಗಳನ್ನು ಎದುರಿಸುತ್ತಿದ್ದ ಶ್ರೀ ಸದ್ಗುರು ಸಮರ್ಥ ಮಹಾದೇವ ಪ್ರಭು ಅವರ ಮೇಲೆ ಕೆಲ ಕ್ರಿಮಿನಲ್ ಕೇಸ್ ಗಳಲ್ಲಿ ಮಹದೇವಪ್ಪ ಅವರ ಮೇಲೆ ನಿರಂತರ ಪೊಲೀಸ ತನಿಖೆಗೆ ಬಿ ಡಿ ಜತ್ತಿ ಅವರು ಮುಖ್ಯ ಮಂತ್ರಿ ಆದ ಮೇಲೆ 1958 ರಲ್ಲಿ ಒತ್ತಾಯಿಸುತ್ತಾರೆ. ತಮ್ಮ ಆತ್ಮೀಯ ಸ್ವಾತಂತ್ರ್ಯ ಹೋರಾಟಗಾರ ಸಂಗಾತಿ ಮಹದೇವಪ್ಪ ಮುರುಗೋಡ ಇವರ ಮೇಲಿನ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಶಾಸಕ ಮಹದೇವಪ್ಪ ಪಟ್ಟಣ ಅವರು ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟ ಮಾಡುತ್ತಾರೆ.

ಒಮ್ಮೆ ಸದನದ ಒಳಗೆ ಮುರುಗೋಡ ಮಹದೇವಪ್ಪ ಅವರ ಮೇಲಿನ ಪ್ರಕರಣಗಳನ್ನು ಸರಕಾರ ಹಿಂದೆ ಪಡೆಯಬೇಕೆಂದು ಶಾಸಕ ಮಹದೇವಪ್ಪ ಪಟ್ಟಣ ಅವರು ಸಿಟ್ಟಿನಿಂದ ಮುಖ್ಯ ಮಂತ್ರಿಗಳ ಕಡೆಗೆ ಪೇಪರ್ ವೆಟ್ ತೂರಿದರಂತೆ ಸ್ವತಃ ಶಾಸಕ ಮಹದೇವಪ್ಪ ಪಟ್ಟಣ ಅವರು ನನ್ನ ಮುಂದೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.ಕೊನೆಗೂ ಗೆಳೆಯನಿಗೆ ನ್ಯಾಯ ಒದಗಿಸುವ ಕಾರ್ಯದಲ್ಲಿ ಶಾಸಕ ಶ್ರೀ ಮಹದೇವಪ್ಪ ಪಟ್ಟಣ ಯಶಸ್ವಿಯಾದರು.

ಶ್ರೀ ಮಹದೇವಪ್ಪ ಮುರುಗೋಡ ಇವರು ಜೀವನ ಕೊನೆಯ ಉಸಿರಿನವರೆಗೆ ಸಾಮಾಜಿಕ ನ್ಯಾಯಪರವಾಗಿ
ಹೋರಾಡುತ್ತಲೇ ಇದ್ದರು.ಇಂಚಿಗೇರಿ ಶ್ರೀಮಠದ ದಿಂಡಿ ಯಾತ್ರೆಯಲ್ಲಿ ಚಕ್ಕಡಿ ಟ್ರಾಕ್ಟರ್ ದನಕರುಗಳು ಹಸು ಮೇಕೆ ಅವುಗಳಿಗೆ ಬೇಕಾದ ಮೇವು ಭಕ್ತರಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಹೊತ್ತು ಕೊಂಡು ಊರೂರು ತಿರುಗಿ ಸದ್ಭಾವನೆ ಸಾಮಾಜಿಕ ಸಾಮರಸ್ಯಗಳನ್ನು
ಮೂಡಿಸುವ ಭಜನೆ ಪ್ರಾರ್ಥನೆ ಕೀರ್ತನೆ ಏರ್ಪಡಿಸಿ ಮನುಷ್ಯರ ಮನವನ್ನು ತಿಳಿಗೊಳಿಸುತ್ತಿದ್ದರು. ಅಲ್ಲಿಯೇ ಸಾಮಾಜಿಕ ನ್ಯಾಯ ಬಗೆ ಹರಿಸುವುದು ವಾಡಿಕೆಯಾಗಿತ್ತು. ವಿನೋಬಾ ಭಾವೆಯವರ ತಾಯಿಯ ತವರು ಮನೆ ಜಮಖಂಡಿ ಅವರೂ ಸಹ  ಮಹದೇವಪ್ಪ ಮುರುಗೋಡ ಇವರ ಕಾರ್ಯಗಳ ಬಗ್ಗೆ ತಮ್ಮ ಅತೀವ ಸಂತಸ ವ್ಯಕ್ತ ಪಡಿಸಿದ್ದಾರೆ.

*ಬದುಕಿನ ತಪಸ್ಸಿಗೆ ಕೊನೆ ಹೇಳಿದ ಶಿವಯೋಗ ಸಾಧಕ*

ಬಾಲ ಬ್ರಹ್ಮಚಾರಿಯಾಗಿದ್ದ ಮಹಾದೇವರು ತದನಂತರ ದಿನಗಳಲ್ಲಿ ದೇವರು ಹಾಗೂ ಶ್ರೀ ಮಾಧವಾನಂದ ಪ್ರಭುಜೀ ಎಂದೆ ಪ್ರಚಲಿತರಾಗಿ ಭಕ್ತಿ ಪ್ರಚಾರದ ಜತೆಗೆ ಶ್ರೀ ಗುರು ಪುತ್ರೇಶ್ವರ ಮಹಾರಾಜರನ್ನು ತಮ್ಮ ಆಧ್ಯಾತ್ಮದ ಗರಡಿಯಲ್ಲಿ ಪಳಗಿಸಿ, ತಮ್ಮ ಬದುಕನ್ನು ಶೋಷಿತರ ಪರವಾಗಿ ನಿಂತು ನ್ಯಾಯ ಒದಗಿಸಿ ಭಾರತದ ಸ್ವಾತಂತ್ರ್ಯ ಹೋರಾಟ ಕರ್ನಾಟಕ ಏಕೀಕರಣ ಗೋವಾ ವಿಮೋಚನೆಗೆ ದುಡಿದು 1980 ರಲ್ಲಿ ದೈವಾಧೀನರಾದರು . ಬಯಲಲ್ಲಿ ಬಯಲಾದರು.
__________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group