ಮುಧೋಳ – ತಾಲೂಕಿನ ಪುಣ್ಯಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಕಳೆದ 30 ವರ್ಷಕ್ಕೂ ಹೆಚ್ಚು ಕಾಲ ಶ್ರೀ ಮಠದ ಸಂಸ್ಥಾಪಕರಾದ ಶಂಕರಾನಂದ ಶ್ರೀಗಳ ಸಮ್ಮುಖದಲ್ಲಿ ನಿರಂತರ ಜ್ಞಾನ ದಾಸೋಹ, ಅನ್ನದಾಸೋಹ, ಸಾಂಸ್ಕೃತಿಕ ಸುಧೆಯನ್ನು ಉಣಬಡಿಸುತ್ತ ಬಂದಿರುವ ಆರೂಢ ಪರಂಪರೆ ಮಠಗಳಲ್ಲಿ ಕುಳಲಿಯ ಸದ್ಗುರು ಶ್ರೀ ಗುರುನಾಥಾರೂಢರ ಮಠವು ಒಂದು. ಈಗ ಈ ಕ್ಷೇತ್ರದಲ್ಲಿ ಅಖಿಲ ಭಾರತ 20 ನೇ ವೇದಾಂತ ಪರಿಷತ್ತನ್ನು ಹಾಗೂ ರಾಜ್ಯ ಮಟ್ಟದ ಜನಪದ ಸಂಗೀತೋತ್ಸವವನ್ನು ಆಚರಿಸಲು ಸನ್ನದ್ಧವಾಗಿದೆ. ಇದೆ ಗುರುವಾರ ದಿ 15 ರಿಂದ ಶನಿವಾರ ದಿ.24 ರ ವರೆಗೆ ಉತ್ಸವವು ಜರುಗಲಿದೆ.
ದಿ 15 ಮುಂಜಾನೆ 10-30 ಕ್ಕೆ ಬಸವೇಶ್ವರ ಪ್ಲಾಟದ ಹನುಮಾನ ದೇವಾಲಯದಿಂದ ಸದ್ಗುರು ಗುರುನಾಥಾರೂಢರ ಮಠದ ವರೆಗೆ ಶ್ರೀ ಸಿದ್ಧಾರೂಢರ ಗ್ರಂಥ ಮೆರವಣಿಗೆ ನಡೆಯಲಿದ್ದು ನಂತರ ಜಾತ್ಯತೀತ ಜಗದ್ಗುರು ಸಿದ್ಧಾರೂಢರ ಕಥಾಮೃತ ಪುರಾಣ ಕಾಯ೯ಕ್ರಮಕ್ಕೆ ಹಾಗೂ ರಾಜ್ಯ ಮಟ್ಟದ ಜನಪದ ಸಂಗೀತೋತ್ಸಕ್ಕೆ ಚಾಲನೆ ನೀಡಲಾಗುವುದು .ಅಖಿಲ ಭಾರತ ವೇದಾಂತ ಪರಿಷತ್ತು ಇದೆ 2026 ಜನವರಿ ಗುರುವಾರ ದಿ. 22ರಿಂದ ಶನಿವಾರ 24ರ ವರೆಗೆ 3 ದಿನಗಳ ಕಾಲ ಸಾಧು ಚಕ್ರವರ್ತಿ ಶ್ರೀ ಶಿವಾನಂದ ಭಾರತಿ ಶ್ರೀಗಳ ಸಾನಿಧ್ಯದಲ್ಲಿ ಅಖಿಲ ಭಾರತ 20ನೇ ವೇದಾಂತ ಪರಿಷತ್ ನಡೆಯಲಿದೆ ಎಂದು ಪರಿಷತ್ತಿನ ಸಂಚಾಲಕರು ಹಾಗೂ ಪುರಾಣಿಕರಾದ ಮುಗಳಖೋಡದ ಶರಣಬಸವ ಶಾಸ್ತ್ರಿಗಳು ಹೇಳಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಗುರುವಾರ ದಿನಾಂಕ 15 ರಂದು ಬೆಳಿಗ್ಗೆ 10.30 ಕ್ಕೆ ನಂತರ 11 ಗಂಟೆಗೆ ಶ್ರೀಮಠದ ಶಂಕರಾನಂದ ಶ್ರೀಗಳ ಸಾನಿಧ್ಯದಲ್ಲಿ ಜಗದ್ಗುರು ಶ್ರೀ ಸಿದ್ಧಾರೂಢರ ಪುರಾಣ ಪ್ರವಚನದ ಹಾಗೂ ರಾಜ್ಯಮಟ್ಟದ ಜನಪದ ಸಂಗೀತೋತ್ಸವದ ಉದ್ಘಾಟನಾ ಕಾರ್ಯಕ್ರಮವು ಜರುಗಲಿದ್ದು ಉದ್ಘಾಟನೆಯನ್ನು ವಚನ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಕಲ್ಲಪ್ಪ ಸಬರದ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಸಿದ್ದು ದಿವಾನ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ನಿವೃತ್ತ ತಹಸಿಲ್ದಾರ್ ಶಾಮ ಸುಂದರ್. ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿದ್ದಣ್ಣ ಬಾಡಿಗಿ. ಹಿರಿಯ ಸಾಹಿತಿಗಳಾದ ಚಂದ್ರಶೇಖರ ದೇಸಾಯಿ ಕಲಾವಿದರಾದ ರಾಮಣ್ಣಗೌಡ ವಜ್ಜರಮಟ್ಟಿ. ಉತ್ತೂರಿನ ವಿಠ್ಠಲ ಮಹಾರಾಜ ಬಂಡಿ. ವಚನ ಸಾಹಿತ್ಯ ಪರಿಷತ್ತಿನ ಮಹದೇವಪ್ಪ ಮಡಿವಾಳ .ಹಿರಿಯ ಕಲಾವಿದರಾದ ಶ್ರೀಶೈಲ್ ಪಟ್ಟಣಶೆಟ್ಟಿ ಮುಂತಾದವರು ಪಾಲ್ಗೊಳ್ಳುವರು.
10 ದಿನಗಳ ಕಾಲ ಆಗಮಿಸಿದ ನಾಡಿನ ಕಲಾವಿದರಿಂದ ಶಿವ ಭಜನೆ, ಜನಪದ ಸಂಗೀತ ಡೊಳ್ಳಿನ ಪದಗಳು, ಸೋಬಾನೆಪದ, ಚೌಡಕಿ ಪದ, ಗೀಗಿ ಪದ, ರಿವಾಯಿತ .ಲಾವಣಿ. ಹಂತಿ ಹಾಡು. ಡೊಳ್ಳಿನ ಪದ. ಡೊಳ್ಳಿನವಾಲಗ. ಹಲಗೆ ವಾದನ .ಕರಡಿ ವಾದನ ಸಂಬಾಳವಾದನ ಮುಂತಾದ ಕಲಾವಿದರಿಂದ ಕಲಾ ಪ್ರದರ್ಶನ ಜರುಗುವುದು
ಭಾಗವಹಿಸಿದ ಕಲಾವಿದರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು . ಸಾಧಕರಿಗೆ ಗುರು ಸೇವಾರತ್ನ . ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪುರಸ್ಕಾರ. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ. ಆರೂಢ ಜ್ಯೋತಿ. ಶಿವಾದ್ವೈತ ಭೂಷಣ. ಜನಪದ ಭೂಷಣ. ಜನಪದ ಮಿತ್ರ. ಗಾನ ಗಾರುಡಿಗ. ಮಾಧ್ಯಮ ಮಿತ್ರ. ಸಾಧನಾ ಸಂಪನ್ನ. ಸಮಾಜ ಸೇವ ರತ್ನ. ಸಮಾಜ ಸೇವಾ ಧುರೀಣ. ಸೇರಿದಂತೆ ವಿವಿಧ ಗೌರವ ಪ್ರಶಸ್ತಿಗಳನ್ನು ನೀಡಲಾಗುವುದು . ಪ್ರತಿದಿನ ಸಂಜೆ 7:30 ರಿಂದ 8:30ರ ವರೆಗೆ ಪುರಾಣ ಪ್ರವಚನ ಕಾರ್ಯಕ್ರಮ ಜರುಗುವುದು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ರಮೇಶ ತಳಪಟ್ಟಿ, ಕಲಾವಿದರಾದ ರಮೇಶ ಸೋಲೋನಿ, ಲಕ್ಷ್ಮೀ ಗಾಜಿ, ಪಿ.ಕೆ.ಪಿ.ಎಸ್. ಸದಸ್ಯ ಪಿ. ಮುತ್ತಣ್ಣ, ಶಿವಾನಂದ ಬಾಡಗಿ [ಜನವಾಡ] ಮುತ್ತಣ್ಣ ಗಾಜಿ[ಯಂಕಂಚಿ] ಇದ್ದರು

