ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ ಅಧ್ಯಯನ ವಿಷಯದಲ್ಲಿ ಸಲ್ಲಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ದೊರೆತ ಪ್ರಯುಕ್ತ ಬಾಗಲಕೋಟೆಯ
ಡಾ.ಪ್ರಹ್ಲಾದ್ ಬಸಪ್ಪ ಬೋವಿ. ಬದಾಮಿಯ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶಿವಾನಂದ ಹಿರೇಮಠ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಗೀತಾ ಹೂಗಾರ, ಹನಮವ್ವ ಹೂಗಾರ, ಗಂಗವ್ವ ಕಡಕೋಳ, ಶಿವಲೀಲಾ ಕಡಕೋಳ, ಆತ್ಮಾನಂದ ಕಡಕೋಳ, ಪ್ರಜ್ವಲ್ ಕಡಕೋಳ ಉಪಸ್ಥಿತರಿದ್ದರು.

