ಅತ್ಯಂತ ಬಡತನದಲ್ಲಿ ಕಷ್ಟ ಪಟ್ಟು ಮುಂದೆ ಬಂದು ಬೆಂಗಳೂರು ಎನ್ನುವ ಮಾಯಾನಗರಿಯಲ್ಲಿ ಕಾರ್ಮಿಕನಾಗಿ ಮುಂದೆ ಮಹಾನಗರ ಪಾಲಿಕೆ ಸದಸ್ಯ ಶಾಸಕ ರಾಜ್ಯ ಸರ್ಕಾರ ಮಂತ್ರಿ ಸಂಸದ ಕೇಂದ್ರೀಯ ಮಂತ್ರಿ ಹೀಗೆ ವಿ ಸೋಮಣ್ಣ ಅವರ ಬದುಕಿನ ಯಶೋಗಾಥೆಯನ್ನು ಒಮ್ಮೆ ಅವಲೋಕಿಸೋಣ.
ವೀರಣ್ಣ ಸೋಮಣ್ಣ ಒಬ್ಬ ಕರ್ನಾಟಕದ ಪ್ರಬುದ್ಧ ರಾಜಕಾರಣಿಯಾಗಿದ್ದು, ಪ್ರಸ್ತುತ ಭಾರತ ಸರ್ಕಾರದ ರೈಲ್ವೆ ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯದಲ್ಲಿ ಕೇಂದ್ರ ರಾಜ್ಯ ಸಚಿವರಾಗಿ (MoS) ಸೇವೆ ಸಲ್ಲಿಸುತ್ತಿದ್ದಾರೆ .
ಈ ಹಿಂದೆ ಅವರು ಅವರು ಆಗಸ್ಟ್ 4, 2021 ರಿಂದ ಮೇ 13, 2023 ರವರೆಗೆ ಕರ್ನಾಟಕದ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸಚಿವರಾಗಿದ್ದರು. ಅವರು ಮೇ 2018 ರಿಂದ ಮೇ 13, 2023 ರವರೆಗೆ ಗೋವಿಂದರಾಜ್ ನಗರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು .ಜೂನ್ 10, 2016 ರಂದು, ಅವರು ಕರ್ನಾಟಕ ವಿಧಾನ ಪರಿಷತ್ತಿಗೆ ಮರು ಆಯ್ಕೆಯಾದರು .
ಮಾರ್ಚ್ 2024 ರಲ್ಲಿ, ಅವರನ್ನು ಬಿಜೆಪಿ ಪಕ್ಷದ ಹೈ ಕಮಾಂಡ್ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ವಿ. ಸೋಮಣ್ಣ ಅವರನ್ನು ತುಮಕೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಯಿತು . ಅವರು ತುಮಕೂರಿನಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದರು ಮತ್ತು ನಂತರ ರೈಲ್ವೆ ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರಾಗಿ ನೇಮಕಗೊಂಡರು .
*ಕೌಟುಂಬಿಕ ಜೀವನ*
ಸೋಮಣ್ಣ ಅವರು ಕರ್ನಾಟಕದ ಬೆಂಗಳೂರು ದಕ್ಷಿಣ ಜಿಲ್ಲೆಯ ದೊಡ್ಡಮರಳವಾಡಿಯಲ್ಲಿ ಲಿಂಗಾಯತ ಕುಟುಂಬದಲ್ಲಿ ವೀರಣ್ಣ ಮತ್ತು ಕೆಂಪಮ್ಮ ದಂಪತಿಗಳಿಗೆ 20 ಜುಲೈ 1951 ರಂದು ಜನಿಸಿದರು .ಮುಂದೆ ಶೈಲಜಾ ಎಂಬುವವರನ್ನು ಮದುವೆಯಾದರು. ಅವರಿಗೆ ಮೂವರು ಮಕ್ಕಳು
*ನಿರ್ವಹಿಸಿದ ಹುದ್ದೆಗಳು*
1983 – 1987: ಬೆಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆ 1994 – ಜನತಾ ದಳದ ಟಿಕೆಟ್‌ನಲ್ಲಿ ಬಿನ್ನಿಪೇಟೆಯ ಶಾಸಕರು.1996ರಿಂದ 1999: ಕಾರಾಗೃಹ ಸಚಿವ, ಬೆಂಗಳೂರು ನಗರಾಭಿವೃದ್ಧಿ ಸಚಿವ. 1999 – ಬಿನ್ನಿಪೇಟೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆ. 2004 ರಲ್ಲಿ – ಕಾಂಗ್ರೆಸ್ ಟಿಕೆಟ್‌ನಲ್ಲಿ ಮೂರನೇ ಬಾರಿಗೆ ಆಯ್ಕೆಯಾದರು.2008 – ಕಾಂಗ್ರೆಸ್ ಟಿಕೆಟ್‌ನಲ್ಲಿ ಗೋವಿಂದರಾಜನ್ ನಗರದಿಂದ ಆಯ್ಕೆ.2010ರಿಂದ 2018: ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು. 20018–ಇಂದಿನವರೆಗೆ: ಬಿಜೆಪಿ ಟಿಕೆಟ್‌ನಲ್ಲಿ ಎರಡನೇ ಬಾರಿಗೆ ಆಯ್ಕೆಯಾದರು..2019 – 2020: ತೋಟಗಾರಿಕೆ ಮತ್ತು ರೇಷ್ಮೆ ಸಚಿವರು.2021 -2023: ವಸತಿ ಸಚಿವರು ಮತ್ತು ಮೂಲಸೌಕರ್ಯ ಮತ್ತು ಅಭಿವೃದ್ಧಿ ಸಚಿವರು. ಮೋದಿ ಅವರ ಮೂರನೇ ಸಚಿವಾಲಯದ ರೈಲ್ವೆ ಇಲಾಖೆಯಲ್ಲಿ ಮಂತ್ರಿಗಳಾಗಿ ಒಳ್ಳೆಯ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ.
ಶ್ರೀ ಸಿದ್ಧಗಂಗೆಯ ಶಿವಪುರುಷ ಡಾ ಶಿವಕುಮಾರ ಸ್ವಾಮೀಜಿ ಅವರ ಪರಮ ಶಿಷ್ಯರಲ್ಲಿ ವಿ ಸೋಮಣ್ಣ ಒಬ್ಬರಾಗಿದ್ದರು. ಧಾರ್ಮಿಕ ಭಕ್ತಿ ಶೃದ್ಧೆ ಅಪಾರ ಲಿಂಗಾಯತ ಮತ್ತು ಬಸವ ತತ್ವಗಳ ಪರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ತಮ್ಮ ಸಂಘ ಸಂಸ್ಥೆಯಿಂದ ಜನಪರ ಕಾರ್ಯಕ್ರಮದಲ್ಲಿ ಬಡವರಿಗೆ ಉಚಿತ ಆರೋಗ್ಯ ಸೇವೆ ಶಿಕ್ಷಣ ತರಬೇತಿ ಮುಂತಾದ ಅನೇಕ ಸೌಲಭ್ಯಗಳನ್ನು ನೀಡುತ್ತಾರೆ.
*ಅಜಾತಶತ್ರು ಸ್ನೇಹಪರ ರಾಜಕಾರಣಿ*
ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯನಾಗಿ ಆಯ್ಕೆಯಾಗುವುದರಿಂದ ಹಿಡಿದು ವಿಧಾನ ಸಭೆ ವಿಧಾನ ಪರಿಷತ್ ಲೋಕಸಭೆಗೆ ಹೋದಂತ ಅತ್ಯಂತ ಅಪರೂಪದ ಪ್ರಬುದ್ಧ ರಾಜಕಾರಣಿ. ಇವರು ತಮ್ಮ ರಾಜಕೀಯ ಆರಂಭವನ್ನು ಜನತಾದಳ ಪಕ್ಷದಿಂದ ಆರಂಭಿಸಿ ಶಾಸಕರಾದರು. ಮುಂದೆ ಎರಡು ಬಾರಿ ಕಾಗ್ರೆಸ್ ಪಕ್ಷದ ಮೂಲಕ ಶಾಸಕರಾದ ವಿ ಸೋಮಣ್ಣ ಎರಡು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನ ಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇದು ಇವರ ಜನಪ್ರಿಯತೆಯನ್ನು ತೋರಿಸುತ್ತದೆ.ಎಲ್ಲರೊಂದಿಗೆ ನಗುತ್ತಲೇ ವ್ಯವಹರಿಸುವ ವಿ ಸೋಮಣ್ಣ ಅವರು ರಾಜಕೀಯ ಮುತ್ಸದ್ಧಿ ಶುದ್ಧ ಹಸ್ತರೆಂದು ಹೆಹೆಸರುವಾಸಿಯಾಗಿದ್ದಾರೆ ಇವರಿಂದ ನಾಡಿಗೆ ರಾಷ್ಟ್ರಕ್ಕೆ ಅನೇಕ ಜನಪರ ಕಾರ್ಯಗಳು ಜರುಗಲಿ ಎಂದು ಹಾರೈಸುತ್ತೇನೆ.
ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಎನ್ನುವ ಗಾದೆಮಾತು ಕೇಂದ್ರ ಮಂತ್ರಿ ವಿ ಸೋಮಣ್ಣ ಅವರಿಗೆ ಸಲ್ಲುತ್ತದೆ.
ಡಾ.ಶಶಿಕಾಂತ ಪಟ್ಟಣ ರಾಮದುರ್ಗ, ಪುಣೆ

