ಮೂಡಲಗಿ:- ಯಾದವಾಡ ಗ್ರಾಮದಲ್ಲಿ ಶಿರಸಂಗಿ ತ್ಯಾಗವೀರ ಲಿಂಗರಾಜ ದೇಸಾಯಿ ಅವರ ಮೂರ್ತಿಗೆ ಪೂಜೆಮಾಡಿ 165ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಶ್ರೀ ಅಭಿನವ ಚೌಕೇಶ್ವರ ದೇವರು ತ್ಯಾಗವೀರ ಲಿಂಗರಾಜರ ಮೂರ್ತಿಗೆ ಪುಷ್ಪಾರ್ಚಣೆ ಮಾಡಿ ಲಿಂಗರಾಜರ ತ್ಯಾಗ ಮತ್ತು ಔದಾರದ ಕುರಿತು ಎಷ್ಟು ಹೇಳಿದರು ಕಡಿಮೆ. ಲಿಂಗರಾಜರು ತಮ್ಮ ಇಚ್ಚಾಪತ್ರದಲ್ಲಿ ತಮ್ಮ ಎಲ್ಲ ಆಸ್ತಿ ಮತ್ತು ಸಂಪತ್ತನ್ನು ಶೈಕ್ಷಣಿಕ ಸೇವೆಗೆ ಮತ್ತು ಮಠ ಮಾನ್ಯಗಳಿಗೆ ದಾನ ಮಾಡಿದ್ದರು. ಲಿಂಗರಾಜರು ಉತ್ತರ ಕರ್ನಾಟಕದ ಶೈಕ್ಷಣಿಕ ಹರಿಕಾರ ಎಂದರು ತಪ್ಪಾಗಲಾರದು ಎಂದರು
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಲಿಂಗಾಯತ ಕುಡು-ವಕ್ಕಲಿಗ ಜಿಲ್ಲಾಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡರ, ಧರ್ಮರಾಜ ಚಿಪ್ಪಲಕಟ್ಟಿ, ಎ.ಎಮ್.ಚಿಕ್ಕಲಗೌಡರ, ಸೋಮಪ್ಪ ಕೇಂಜೋಳ, ಬಸಲಿಂಗಪ್ಪ ಉಂಡೋಡಿ, ಶಂಕರ ಹುಗ್ಗಿ, ಲಕ್ಷ್ಮಣ ಮಂಟೂರ, ಮಲ್ಲಪ್ಪ ಚಿಪ್ಪಲಕಟ್ಟಿ, ಮಂಜು ಡೊಳ್ಳಿ, ಯಲ್ಲಪ್ಪ ಕನ್ನಾಳಿ, ತಮ್ಮಣ್ಣ ಯಾದವಾಡ, ಸುರೇಶ ಸಾವಳಗಿ, ಕಲ್ಮೇಶ ಗಾಣಗಿ, ಶಿವಾನಂದ ಪಾಸೋಡಿ, ಚೇತನ ತಕ್ಕಡಿ, ವಿಠಲ ಸಾವಳಗಿ, ಬಸವರಾಜ ಕೆಂಜೋಳ, ಕಲ್ಲಪ್ಪ ಶಿರೋಳ, ಮಲ್ಲಪ್ಪ ಮಾಳೇದ, ಶಿವಪ್ಪ ಅವರಾದಿ, ದುಂಡಪ್ಪ ಹ್ಯಾಗಾಡಿ, ಈಶ್ವರ ಬಾಗಿ, ಶಿವಾನಂದ ಸಾವಳಗಿ, ಸುನೀಲ ನ್ಯಾಮಗೌಡರ, ಆನಂದ ಕಂಕನೋಡಿ , ಶಿವಪ್ಪ ತುಪಲಿ, ರಾಜಶೇಖರ್ ಕಲ್ಯಾಣಿ., ನಾಗರಾಜ್ ಬಳಿಗಾರ, ಬಸವರಾಜ ಹಿಡಕಲ್. ಶಿವಪ್ಪ ನಂದಾಗಾಂವಿ , ರವಿ ಚಿಪ್ಪಲಕಟ್ಟಿ ಇನ್ನು ಅನೇಕ ಗ್ರಾಮದ ಎಲ್ಲ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

