ವಿದ್ಯಾರ್ಥಿಗಳು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು – ಸಂತೋಷ ಬಂಡೆ

Must Read

ಸಿಂದಗಿ: ಇಂದಿನ ಯುವ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಸರಕಾರಿ ಉರ್ದು ಹಿರಿಯ ಪ್ರಾರ್ಥಮಿಕ ಶಾಲೆ ಹಿರೇರೂಗಿ ಶಾಲೆಯ ಶಿಕ್ಷಕ ಸಂತೋಷ ಎಸ್ ಬಂಡೆ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಶ್ರೀ ಪದ್ಮರಾಜ ಮಹಿಳಾ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ, ಪ್ರೋತ್ಸಾಹವನ್ನು ನೀಡುತ್ತಾ, ಉಪನ್ಯಾಸಕರು ಸೇವಾ ಮನೋಭವನೆಯಿಂದ ಕರ್ತವ್ಯವನ್ನು ನಿರ್ವಹಿಸಿ ತಮ್ಮ ವಿದ್ಯೆಯನ್ನು ಧಾರೆ ಎರೆಯುವವರಾಗಿದ್ದಾರೆ ಎಂದು ಸಂಸ್ಥೆ ಮತ್ತು ಕಾಲೇಜಿನ ಬಗ್ಗೆ ಹೆಮ್ಮೆಯಿಂದ ಹೇಳಿದರು.

ಇದೇ ಸಂದರ್ಭದಲ್ಲಿ ಸಮ್ಮುಖವಹಿಸಿರುವ ಪೂಜ್ಯ ಶ್ರೀ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶೈಕ್ಷಣಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಶಿಕ್ಷಣದ ಜೊತೆಗೆ ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಂಡು ಕೌಶಲ್ಯ ಆಧಾರಿತ ಉದ್ಯೋಗಗಳನ್ನು ಪಡೆದು ಉನ್ನತ ಸ್ಥಾನಕ್ಕೆ ಬರಬಹುದು ಎಂದು ಸಲಹೆ ನೀಡಿದರು.

ಪಾವನ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ ಆಶಿರ್ವಚನ ದಯಪಾಲಿಸಿದರು. ಪ್ರಾಚಾರ್ಯ ವ್ಹಿ.ಡಿ ಪಾಟೀಲ ಅಧ್ಯಕ್ಷೀಯ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಸಿಂದಗಿ ಆರ್.ಡಿ. ಪಾಟೀಲ ಕಾಲೇಜಿನ ದೈಹಿಕಶಿಕ್ಷಣ ನಿರ್ದೇಶಕ ಗವಿಸಿದ್ದಪ್ಪ ಆನೆಗುಂದಿ, ರಾಷ್ಟ್ರಮಟ್ಟದ ವ್ಹಾಲಿಬಾಲ್ ಕ್ರೀಡಾಪಟು ಕು. ರಜಿಯಾ ಬೇಗಂ ಮ್ಯಾಗೇರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಾಧ್ಯಕ್ಷೆ ವರ್ಷಾ ವಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ವೈಷ್ಣವಿ ಹಿರೇಕುರುಬರ, ಸಂಸ್ಥೆಯ ನಿರ್ದೇಶಕ ಅಶೋಕ ಬೂದಿಹಾಳ ವೇದಿಕೆಯ ಮೇಲಿದ್ದರು.

ವಿದ್ಯಾರ್ಥಿನಿ ಕುಮಾರಿ. ಭಾಗ್ಯಶ್ರೀ ಅಳ್ಳಗಿ ಮತ್ತು ಲಕ್ಷಿö್ಮಬಾಯಿ ಪೂಜಾರಿ ನಿರೂಪಿಸಿದರು. ಉಪನ್ಯಾಸಕರಾದ ಜಿ.ಎಸ್ ಕುಲಕರ್ಣಿ ಸ್ವಾಗತಿಸಿದರು. ಕುಮಾರಿ ನಜ್ಮಾ ನದಾಫ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಕುಮಾರಿ ವೈಷ್ಣವಿ ಹಿರೇಕುರುಬರ ವಂದಿಸಿದರು.

ಎಂ.ಎಸ್ ಹೈಯಾಳಕರ್, ಶಿವಮಾಂತ ಪೂಜಾರಿ, ವ್ಹಿ.ವಿ ಜಿರ್ಲಿ, ಬಿ.ಎಮ್. ಗೋಡಕಿಂಡಿಮಠ ಮಹಾವಿದ್ಯಾಲಯದ ಸಿಬ್ಬಂದಿಗಳಾದ ಜಿ.ಎ.ನಂದಿಮಠ, ಹೇಮಾ ಹಿರೇಮಠ, ಯು.ಸಿ ಪೂಜೇರಿ, ಎಂ.ಪಿ. ಸಾಗರ. ಎಸ್.ಎಸ್. ಸಜ್ಜನ, ಎ.ಎ. ಕೋಕಣಿ, ಎಸ್.ಜಿ. ಮಾರ್ಸನಳ್ಳಿ, ಆರ್.ಎ. ಹಾಲಕೇರಿ, ಸುರೇಖಾ ಎಸ್ ಸಿಂಗಾಡಿ, ಲಕ್ಷಿö್ಮ ಮಾರ್ಸನಳ್ಳಿ, ಹೇಮಾ ಕಾಸರ, ಬಸವರಾಜ ಸಿನ್ನೂರ, ಲಕ್ಷಿö್ಮ ಭಜಂತ್ರಿ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group