ಬೆಂಗಳೂರು ನಗರದ ಲಾಲ್ ಬಾಗ್ ನಲ್ಲಿ ಜನವರಿ 15 ರಿಂದ 26ರ ವರೆಗೆ ಏರ್ಪಡಿಸಲಾಗಿರುವ ಫಲ ಪುಷ್ಪ ಪ್ರದರ್ಶನವನ್ನು ಡಿ. ಕೆ. ಶಿವಕುಮಾರ್ ಅವರು ಬುಧವಾರ ಉದ್ಘಾಟಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತ, ಪೂರ್ಣ ಚಂದ್ರ ತೇಜಸ್ವಿ ಅವರ ಸಿದ್ಧಾಂತ ಮೌಲ್ಯಗಳ ಪ್ರತಿಬಿಂಬ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನವಾಗಿದೆ. ಬೆಂಗಳೂರು ನಗರ ಉದ್ಯಾನ ನಗರಿ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆದಿದೆ ಎಂದು ನುಡಿದರು.
ಬೆಂಗಳೂರಿನ ಲಾಲ್ ಬಾಗ್ ನಲ್ಲಿ 219ನೇ
ಫಲ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಾಗಿದೆ , ಇದು ಬಹಳ ಐತಿಹಾಸಿಕ ಉದ್ಯಾನವಾಗಿದ್ದು , ಕರ್ನಾಟಕ ರಾಜ್ಯದ ಆಸ್ತಿಯಾಗಿದೆ. ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ತೋಟಗಾರಿಕೆ ಇಲಾಖೆಯಿಂದ ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ಈ ಫಲ ಪುಷ್ಪ ಪ್ರದರ್ಶನ ನಡೆಯಲಿದೆ ಎಂದು ನುಡಿದರು.
ನಮ್ಮ ರಾಜ್ಯದಿಂದ ಹೊರದೇಶಗಳಿಗೆ ಪ್ರತಿ ವಾರ 17ವಿಮಾನದಷ್ಟು ಹೂ , ತರಕಾರಿ ರಫ್ತು ಆಗುತ್ತಿದೆ,ಅದರಿಂದ ಅಂತಾರಾಷ್ಟ್ರೀಯ ಮಟ್ಟದ ಹೂ , ತರಕಾರಿ ಮಾರುಕಟ್ಟೆ ನಿರ್ಮಿಸಲು ಮುಂದಾಗಿದ್ದೇವೆ ಎಂದು ನುಡಿದರು.
ಬೆಂಗಳೂರಿನ ನಾಗರಿಕರು , ಶಾಲಾ ಮಕ್ಕಳು, ವಿದ್ಯಾರ್ಥಿಗಳು 10ದಿನಗಳ ಫಲ ಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಇದಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.
ಈ ಉತ್ತಮ ಕೆಲಸ ಮಾಡಿ ಕೊಂಡು ಬಂದಿರುವ ಸ್ಥಳೀಯ ಶಾಸಕರು, ಸಚಿವರಾದ ರಾಮಲಿಂಗ ರೆಡ್ಡಿ , ಯುವರಾಜ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಲಾಲ್ ಬಾಗ್ ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಅನೇಕ ಜನ ಪರಿಸರ ಪ್ರೇಮಿಗಳು ಹಾಗೂ ಪೂರ್ಣ ಚಂದ್ರ ತೇಜಸ್ವಿ ಅವರ ಅಭಿಮಾನಿಗಳು ಇಂದಿನ ಫಲ ಪುಷ್ಪ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಲ ಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು.
ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ

