ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.
ಅವರು ಪಟ್ಟಣದ ಶ್ರೀ ಸಾತವೀರೇಶ್ವರ ಸಭಾಭವನದಲ್ಲಿ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಪದ್ಮರಾಜ ಪಬ್ಮಿಕ್(ಸಿಬಿಎಸ್‌ಸಿ)ಶಾಲೆ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಹೆಚ್ಚು ಸಂಸ್ಕಾರ ಕೊಡಲು ಮುಂದಾಗಬೇಕು.ಶಿಕ್ಷಣದ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವುದು, ದಲೈಲಾಮಾ, ಮದರ ಥೇರೆಸಾ, ಅಬ್ದುಲ್ ಕಲಾಂ ಸೇರಿದಂತೆ ದಾರ್ಶನಿಕರು ತೋರಿಸಿದ ಮಾನವೀಯ ಕಾರ್ಯಗಳನ್ನು ಮಕ್ಕಳಿಗೆ ಕಥೆಗಳ ರೂಪದಲ್ಲಿ ತಿಳಿ ಹೇಳಬೇಕು.ಶಿಕ್ಷಕರು ಮಕ್ಕಳಿಗೆ ಆಟದೊಂದಿಗೆ ಪಾಠ ಕಲಿಸುವ ಪ್ರವೃತ್ತಿ ಮೈಗೂಡಿಸಿಕೊಂಡು ಬೋಧಿಸಿದಾಗ ತಮಗೂ ಶಿಕ್ಷಣದ ಮಹತ್ವ ತಿಳಿಯುವುದರ ಜೊತೆಗೆ ಸರಳ ಬೋಧನೆಗೆ ಸಹಕಾರಿಯಾಗಲಿದೆ. ಪಾಲಕರು ಮಗುವಿನ ಸರ್ವಾಂಗಿಣ ಅಭಿವೃದ್ದಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡುವುದು ಅವಶ್ಯಎಂದರು.
ಈ ವೇಳೆ ಸಾನಿಧ್ಯವಹಿಸಿದ ಸಾರಂಗಮಠದ ಪೂಜ್ಯ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ನಮ್ಮ ಜ್ಞಾನದಿಂದಲೆ ಸಮಾಜ ನಮ್ಮನ್ನು ಗುರುತಿಸುತ್ತದೆ. ಓದುವ ಹವ್ಯಾಸ ರೂಡಿಸಿಕೊಂಡರೆ ಆ ಓದು ನಮ್ಮನ್ನು ಮೇಲೆತ್ತುತ್ತದೆ.ಇಂದು ಮಕ್ಕಳಲ್ಲಿ ಜ್ಞಾನದ ಹಸಿವು ಕಡಿಮೆಯಾಗುತ್ತಿದೆ.ಶಾಲಾ ಕಾಲೇಜುಗಳು ಶಿಕ್ಷಣ ಮತ್ತು ಸಂಸ್ಕಾರದ ಕಡೆಗೆ ಹೆಚ್ಚು ಒತ್ತು ನೀಡಬೇಕುಎಂದರು.
ಈ ಸಂಧರ್ಭದಲ್ಲಿ ಶಾಲೆಯ ಪ್ರಾಚಾರ್ಯ ದಾನಯ್ಯ ನಂದಿಕೋಲ ವಾರ್ಷಿಕ ವರದಿ ಮಂಡಿಸಿದರು.ವೇದಿಕೆ ಮೇಲೆ ಕಾರ್ಯಾಧ್ಯಕ್ಷೆ ರಾಣಿ ಜೋಗೂರ, ವಿದ್ಯಾರ್ಥಿ ಪ್ರತಿನಿಧಿಗಳಾದ ಪೂಜಾ ಮಠ, ಅನುಪ ವಮ್ಮಾಇದ್ದರು.ನಂತರ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಈ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿಗಳಾದ ರೇಖಾ ಬಮ್ಮಣ್ಣಿ, ಅಕ್ಷತಾ ಕಿಣಗಿ, ಕಲಾವತಿ ಹಿರೇಮಠ, ಭಾರತಿ ಹಿರೇಮಠ, ಎಸ್.ಆರ್.ಹಾಲಕೇರಿ, ಎಸ್.ಎಸ್.ಪೊದ್ದಾರ, ವಿಜಯಲಕ್ಷ್ಮಿ ಚೌಧರಿ, ಅರುಣಾ ಕವಲಗಿ, ಶಶಿಕಲಾ ಹೂಗಾರ, ಸಂತೃಪ್ತಿ ಕಲಬುರ್ಗಿ, ಎಸ್.ಎಸ್.ಮಲ್ಲೇದ, ಅಭಿಷೇಕ ಬಿರಾದಾರ, ಸುರೇಶ ಸುಣಗಾರ, ಆಶೀಪ ಕೊಂಕಣಿ, ಶಿವಪುತ್ರ ಭಾಸಗಿ ಸೇರಿದಂತೆ ಪಾಲಕರು ಮಕ್ಕಳು ಇದ್ದರು.

