ಮೂಡಲಗಿ- ವಿದ್ಯಾರ್ಥಿಗಳು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡುವುದರೊಂದಿಗೆ ಗುಣ ಮಟ್ಟದ ಶಿಕ್ಷಣ ಪಡೆದು ಮಾನವೀಯ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗುಣಮಟ್ಟದ ಸ್ಥಾನ ಪಡೆಯಲು ಸಾಧ್ಯ ಅಕ್ಷರದ ಜ್ಞಾನ ಗುರು ನೀಡಿದರೆ, ಸಂಸ್ಕಾರ ಹೆತ್ತವರು ನೀಡುತ್ತಾರೆ. ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ನಡೆದು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಒಳ್ಳೆಯ ಪ್ರಜೆಯಾದರೆ ಮಾತ್ರ ಗುರು, ತಂದೆ ತಾಯಿಯ ಋಣ ತೀರಿಸಿದಂತ್ತಾಗುತ್ತದೆ ಸಮಾಜದಲ್ಲಿ ಸಾಧನೆ ಮಾಡಿ ಒಳ್ಳೆಯ ಹೆಸರು ಪಡೆದರೆ ಹೆತ್ತವರಿಗೆ ಸಂತೋಷವಾಗುತ್ತದೆಂದು ಗೋಕಾಕ ಪ್ರೌಢ ಶಾಲೆಯ ಶಿಕ್ಷಕರಾದ ರಾಮಚಂದ್ರ ಕಾಕಡೆ ಹೇಳಿದರು.
ಅವರು ಮೂಡಲಗಿ ಶಿವರಾಮದಾದಾ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಂಭ್ರಮ ಮತ್ತು ಪ್ರಥಮ ವರ್ಷದ 10 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಅಶ್ಲೀಲ ಪದ , ಹಾಡುಗಳನ್ನು ಕೇಳಬಾರದೆಂದು ಹೇಳಿದರು.
ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ತಂದೆ ತಾಯಿಗಳು ಮಕ್ಕಳಿಗೆ ಜನ್ಮ ನೀಡಿದರೆ ಸಾಲದು ಮಕ್ಕಳಿಗೇ ಆಸ್ತಿ ಅಂತಸ್ತು ಮಾಡದೆ ಒಳ್ಳೆಯ ಶಿಕ್ಷಣ ಸಂಸ್ಕಾರ ಕಲಿಸಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಮಗುವಿನ ಮೇಲೆ ಸದಾ ಕಾಲ ನಿಗಾವಿಟ್ಟಾಗ ಮಾತ್ರ ವಿದ್ಯಾವಂತರಾಗಿ ಉನ್ನತ ಅಧಿಕಾರಿಗಳು ಆಗುತ್ತಾರೆ.ವಿದ್ಯಾರ್ಥಿಗಳು ಟಿವಿ ಮೋಬೈಲ್ ಮಾದಕ ವಸ್ತುಗಳ ಬಳಕೆಯಿಂದ ದೂರವಿದ್ದು ಶಿಕ್ಷಕರು ಹೇಳಿದ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ನಸುಕಿನ ಜಾವದಲ್ಲಿ ಅಭ್ಯಾಸ ಮಾಡಿದರೆ ತಲೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆಂದು ಹೇಳಿದರು.
ಅಥಿತಿಗಳಾಗಿ ಆಗಮಿಸಿದ ನಾಗರಾಜ ಗದಾಡಿ ಮಾತನಾಡಿ ಗುರುವಿಗೆ ಅತೀ ಅಮೂಲ್ಯವಾದ ಸ್ಥಾನವಿದ್ದು ಗುರುವಿನ ಮೂಲಕ ಶಿಕ್ಷಣ ಮತ್ತು ಜ್ಞಾನ ಪಡೆದು ಉತ್ತಮ ಸಾಧನೆಗೈದು ಸಮಾಜಕ್ಕೆ ಶಿವರಾಮದಾದಾ ಶಿಕ್ಷಣ ಸಂಸ್ಥೆ ಗೆ ಉತ್ತಮ ಕೊಡುಗೆ ನೀಡಿದಾಗ ಮಾತ್ರ ವಿದ್ಯೆ ಕಲಿಸಿದ ಗುರುವಿಗೆ ನೀಡುವ ಗೌರವ ಎಂದರು
ಮಂಜುಳಾ ಕಾಳಪ್ಪಗೊಳ, ಪ್ರಿಯಾಂಕಾ ಮಾನಗಾಂವಿ, ಮೈರಜ್ ಪಠಣ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರೊಂದಿಗೆ ಒಡನಾಟದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಭಾರತಿ ಬೆಳಗಲಿ ವರದಿ ವಾಚನ ಮಾಡಿದರು
ಈ ಸಮಯದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಾಯಿನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುನೀತಾ ವಿ ಹೊಸೂರ, ಲಾಯನ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವು ವಿ ಹೊಸೂರ,ಸಮೀರ ದಬಾಡಿ, ಶಿಕ್ಷಕರಾದ ವೆಂಕಟೇಶ ಕಮಲ, ಲಕ್ಷ್ಮೀ ಕುರಬಗಟ್ಟಿ, ಜ್ಯೋತಿ ಕವನಿ, ಈರವ್ವ ಸಿದ್ನಾಳ, ಬಿ ಡಿ ಬಳಿಗಾರ, ಶಿವಾನಂದ ರಡರಟ್ಟಿ, ಅಕ್ಷತಾ ಬಾನಿ, ಅನಿತಾ ಸತರಡ್ಡಿ, ಸವಿತಾ ಕುರಿ ಸೇರಿದಂತೆ ವಿದ್ಯಾರ್ಥಿಗಳು ಪಾಲಕರಿದ್ದರು.
ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯ ರಾಜು ತಳವಾರ ಸ್ವಾಗತಿಸಿ, ಲಕ್ಷ್ಮೀ ಪೂಜೇರಿ ನಿರೂಪಿಸಿ, ಸರಸ್ವತಿ ಬೆಳಕೂಡ ವಂದಿಸಿದರು.

