ಅಭಿಪ್ರಾಯ : ಪ್ರಸಕ್ತ ಇರುವುದು ಕೆಟ್ಟ ಭ್ರಷ್ಟ ಸರಕಾರ

Must Read

ಸಮಾಜವಾದ ಬುದ್ಧ ಬಸವ ಬಾಬಾಸಾಹೇಬ ಅವರ ಚಿಂತನೆ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳ ಹೆಸರಿನಲ್ಲಿ ಮುಖ್ಯಮಂತ್ರಿ ಪದವಿ ಸ್ವೀಕರಿಸಿ ಮುಂದೆ ಇಡೀ ಕರ್ನಾಟಕದ ಜನತೆಗೆ ಮೋಸ ಮಾಡಿದ ಅತ್ಯಂತ ಕೆಟ್ಟ ಭ್ರಷ್ಟ ಸರಕಾರ ಇದೆ ಎನ್ನುವುದು ದುರಂತದ ಸಂಗತಿಯಾಗಿದೆ.

ಮಿತಿ ಮೀರಿದ ಭ್ರಷ್ಟಾಚಾರ

ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಹಗರಣಗಳು ಸೇರಿದಂತೆ ನೂರಾರು ಹಗರಣಗಳು ಬಯಲಿಗೆ ಬರುತ್ತಿವೆ. ದುಡ್ಡು ಕೊಟ್ಟರೆ ಕೆಲಸ ಆಗುತ್ತದೆ ಎಂಬ ಮಾತು ನಿರ್ಮಾಣವಾಗಿದೆ.

ಸಹಕಾರಿ ಸಂಘ ಸಂಸ್ಥೆ ಮಣ್ಣು ಮಾಡಿದ ಸರಕಾರ

ರಾಘವೇಂದ್ರ ಸಹಕಾರಿ ಸಂಘ ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಸಹಕಾರಿ ಸೊಸೈಟಿಯಲ್ಲಿ ಇಟ್ಟಿದ್ದ ಐನೂರು ಕೋಟಿ ರೂಪಾಯಿ ಹಣವನ್ನು ಠೇವಣಿದಾರರಿಗೆ ಕೊಡಲಾಗದೆ ಪೀಡಿಸುತ್ತಿರುವ ಸರ್ಕಾರ. ಆನಂದ ಅಪ್ಪುಗೋಳ ತಮ್ಮ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕೆ ರಕ್ಷಣೆ ನೀಡಿದೆ

ಬೈಲಹೊಂಗಲ ಸಾಧುನವರ ಕಾಂಗ್ರೆಸ್ ಮುಖಂಡ ಎನ್ನುವ
ಕಾರಣಕ್ಕೆ ಅವರು ಜನರಿಗೆ ಸಾವಿರಾರು ಕೋಟಿ ರೂಪಾಯಿ ಮೋಸ ಮಾಡಿದ್ದಾರೆ ಎಂದು ಗೊತ್ತಿದ್ದರು ಸಾಧುನವರ ಅಪ್ಪ ಮಗನನ್ನು ಬಂಧಿಸದ ಸರಕಾರ.

ಪಿಎಸ್ಐ ಹಗರಣ ಎಲ್ಲಿಗೆ ಬಂತು ?
ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಭ್ರಷ್ಟತೆಯ ಪಿಎಸ್ಐ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ಎಲ್ಲಿಗೆ ಬಂತು ಎಂಬುದೇ ಗೊತ್ತಾಗುತ್ತಿಲ್ಲ. ರಾಜ್ಯ ಸರ್ಕಾರವೇ ಮುಚ್ಚಿ ಹಾಕಿರುವ ಸಾಧ್ಯತೆ ದಟ್ಟವಾಗಿದೆ

40% ಕಮಿಷನ್ ಹಣ ನುಂಗಿದ ಬಿಜೆಪಿ ಸರಕಾರದ ವಿರುದ್ಧ ತನಿಖೆ ಎಲ್ಲಿಗೆ ಬಂದಿದೆ ?

ರಸ್ತೆ ನೀರು ಸಾರಿಗೆ ಹೀಗೆ ಎಲ್ಲದರಲ್ಲಿ ಮಿತಿಮೀರಿದ ವ್ಯಾಪಕ ಪ್ರಮಾಣದಲ್ಲಿ ಭ್ರಷ್ಟಾಚಾರವನ್ನು ಸರಕಾರ ನಡೆಸಿಕೊಂಡು ಬಂದಿದೆ. ನಿರುದ್ಯೋಗ ಸಮಸ್ಯೆ ; ಸಾವಿರಾರು ಪ್ರೊಫೆಸರ್ ಹುದ್ದೆ ವಿಶ್ವ ವಿದ್ಯಾಲಯದ ಆವರಣದಲ್ಲಿ ಖಾಲಿ ಇವೆ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಸರಕಾರಿ ನೌಕರರಿಗೆ ಮೂಗಿಗೆ ತುಪ್ಪ ಸವರಿ ಪೆನ್ಷನ್ ಕೊಡದೆ ಲಕ್ಷಾಂತರ ಬಡ ಶಿಕ್ಷಕರಿಗೆ ಮೋಸ ಮಾಡಿದೆ. ಎಲ್ಲಾ ಮಂತ್ರಿ ಮಹೋದಯರು ದುಡ್ಡು ತಿಂದು ತೇಗುತ್ತಿದ್ದಾರೆ.ಕೆಲ ಬಿಟ್ಟಿ ಗ್ಯಾರಂಟಿ ಕೊಟ್ಟು, ಎಲ್ಲಾ ದರಗಳನ್ನು ಹೆಚ್ಚು ಮಾಡಿ ಕರ್ನಾಟಕವನ್ನು ಲೂಟಿ ಮಾಡುತ್ತಿರುವ ಅತ್ಯಂತ ದೊಡ್ಡ ಪ್ರಮಾಣದ ಭ್ರಷ್ಟ ಸರಕಾರ ಇವತ್ತಿನ ಕರ್ನಾಟಕದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಎಂದರೇ ತಪ್ಪಾಗುವುದಿಲ್ಲ.

ಬಡವರನ್ನು ರೈತರನ್ನು ಕಾರ್ಮಿಕರನ್ನು ಕೊಂದು ತಿನ್ನುವ ನೀಚ ಸರಕಾರಕ್ಕೆ ನಮ್ಮ ಧಿಕ್ಕಾರವಿದೆ.
_______________________

ಪ್ರಕಾಶ ಗುಮ್ಮಗೋಳ, ಧಾರವಾಡ

LEAVE A REPLY

Please enter your comment!
Please enter your name here

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group