ಜೀವನದ ಪಾಠ
ಸಣ್ಣವರು, ಬಡವರು ಎಂದು ನಿಕೃಷ್ಟ ಮಾಡದಿರಿ
ಕಸ ದೂಳು ಎಂದು ತಿಳಿಯದಿರಿ
ಅಹಂಕಾರದಿಂದ ತುಳಿದು ಹೋಗದಿರಿ
ಅದು ನಿನ್ನನೇ ಅಳಿಸುತ್ತದೆ ಒಂದು ದಿನ
ಗೊತ್ತಾಗುವುದು ಧೂಳು ಕಣ್ಣುಗಳಿಗೆ ಬಿದ್ದ ದಿನ
ಗೌರವ ಕೇಳಿ ಪಡೆಯುವುದಲ್ಲರೀ
ಬದಲಾಗಿ ಅದು ತಾನಾಗಿಯೆ ಬರಬೇಕರೀ
ನಾವು ಯಾರನ್ನೂ ಕೀಳಾಗಿ ನೋಡಬಾರದು ರೀ
ಪ್ರತಿಯೊಬ್ಬರಿಗೂ ಗೌರವ ಕೊಡಬೇಕರೀ
ನಿರ್ಮಲ ಮನದ ಮಾತು ಕೇಳಿ ನಡೆಯೋಣ
ಸಮಾಜದಲ್ಲಿ ಶಾಂತಿ ಮತ್ತು ಸುಖವನ್ನು ತರೋಣ
ಗೌರವ ಮತ್ತು ಪ್ರೀತಿಯಿಂದ ಬಾಳೋಣ
ಒಗ್ಗಟ್ಟಾಗೋಣ, ಸಮಾಜವನ್ನು ಸುಧಾರಿಸೋಣ.
ಎಚ್ಚರವಾಗಿ ಎದ್ದೇಳಿ
ಕಳೆದು ಹೋಗಿವೆ ಮಕ್ಕಳು ಈಗಾಗಲೇ,
ಶಾಲೆಯ ಪುಸ್ತಕಗಳಲ್ಲಿ, ಅಂಕಗಳ ಪೈಪೋಟಿಯಲ್ಲಿ.
ಹಿರಿಯರ ಹಣದ ದಾಹದಲ್ಲಿ, ಪೋಷಕರ ಸಮಯದ ಅಭಾ ವದಲ್ಲಿ,
ವಿಷಪೂರಿತ ಕಲಬೆರಕೆ ಆಹಾರ ನೀರು ಗಾಳಿ ಸೇವಿಸುವ ಪರಿಸರದಲ್ಲಿ.
ಮೌಲ್ಯಗಳು, ಸಂಬಂಧಗಳು ಶಿಥಿಲವಾದ ಕಾಲದಲ್ಲಿ,
ಭಾವನೆಗಳು, ಆತ್ಮೀಯ ಒಡನಾಟಗಳು, ಸಂಸ್ಕಾರಗಳು ಮರೆಯಾದ ಸಮಯದಲ್ಲಿ,
ಭಯೋತ್ಪಾದಕರ, ಮತಾಂಧರ, ಜಾತಿವಾದಿಗಳ ವಿಷ ಚಕ್ರದಲ್ಲಿ,
ಭ್ರಷ್ಟ ರಾಜಕೀಯ, ಆಡಳಿತಶಾಹಿ ಮೌಢ್ಯ ತುಂಬಿದ ಮನಸ್ಸುಗಳಲ್ಲಿ.
ಮೊಬೈಲ್ ನಲ್ಲಿ ಕಳೆದು ಹೋಗಿವೆ ಮಕ್ಕಳ ಬದುಕು,
ಗೇಮ್ಸ್ ಮತ್ತು ವಿಡಿಯೋಗಳಲ್ಲಿ ಮುಳುಗಿವೆ ಮನಸ್ಸು,
ಅಜ್ಞಾನ ಮತ್ತು ಭಯದಲ್ಲಿ ಸಿಲುಕಿವೆ ಜೀವನ,
ನೆಮ್ಮದಿ ಮತ್ತು ಶಾಂತಿ ಕಳೆದು ಹೋಗಿವೆ.
ಬದಲಾಗಬೇಕಿದೆ – ಬದಲಾಗೋಣ,
ಹೊಸ ನಾಗರಿಕ ಸಮಾಜಕ್ಕೆ ಮುನ್ನುಡಿ ಬರೆಯೋಣ.
ಕಳೆದು ಹೋದ ಮಕ್ಕಳನ್ನು ಹುಡುಕಿ ತರೋಣ,
ನೆಮ್ಮದಿಯ ಸಮಾಜ ಕಟ್ಟೋಣ.
ಪಾರ್ವತಿ ದೇವಿ. ಎಂ. ತುಪ್ಪದ. ಬೆಳಗಾವಿ

