ಮುನವಳ್ಳಿ : ಪಟ್ಟಣದ ಶ್ರೀ ವ್ಹಿ ಪಿ ಜೇವೂರ ಸ್ಮಾರಕ ಕಿವುಡು ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಪಾಲಕರ ಪೋಷಕರ ಸಭೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು ನಾಮದೇವ ಬಿಲಕರ ರವರು ಪಾಲಕರಿಗೆ ಮಕ್ಕಳ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಪಂಚಪ್ಪ ವಾಯ್ ಜಂಬಗಿಯವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು, ಕಾರ್ಯದರ್ಶಿಯಾದ ಸಂಜುಕುಮಾರ ಜಂಬಗಿ, ಪಂಚಪ್ಪ ಜಂಬಗಿ, ಪಾಲಕರ ಪ್ರತಿನಿಧಿ ಯಾಗಿ ವೀರಭದ್ರಪ್ಪ ಬಳಿಗಾರ, ಸಕ್ಕುಬಾಯಿ ಭೋಸಲೆ,ಮುಖ್ಯೊಪಾದ್ಯಾಯರಾದ ಎನ್ ಹರ್ಷಿತಾ, ಸಂಸ್ಥೆ ಯ ಹಿತೈಷಿಗಳಾದ ಸುಜಾತಾ ಜಂಬಗಿ ಯವರು ಮಕ್ಕಳಿಗೆ ಇನ್ನೂ ಹೆಚ್ಚಿನ ಸೌಕರ್ಯ ನಿಡೋಣ ಎಂದರು.
ಶಾಲಾ ಶಿಕ್ಷಕರಾದ ಶಿವು ಕಾಟಿ ಸ್ವಾಗತಿಸಿದರು. ನಿಂಗಮ್ಮ ಕೋಟಿ ನಿರೂಪಿಸಿದರು.ಶಾಲಾ ಶಿಕ್ಷಕಿಯರಾದ ಸುಜಾತಾ ಬಡ್ಲಿ, ಎ.ಎಮ್ ತಾಸೇದ . ಎಚ್ ಹನಮಂತ, ಆಯ್ ಡಿ ಅತ್ತಾರ, ಮಂಜುನಾಥ ಮಾವಿನಕಟ್ಟಿ, ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಮತ್ತು ಇತರರು ಇದ್ದರು.

