ಬೀದರ – ತಿತಲಿ ಪಂಚಿ ಎಂದು ಕರೆಯಲ್ಪಡುವ ಜೂಜಾಟ ರಾಜಾರೋಷವಾಗಿ ಬೀದರ ಜಿಲ್ಲೆಯಲ್ಲಿ ನಡೆಯುತ್ತಿದೆ.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ತೂಗಾಂವ್ (ಎಚ್) ಗ್ರಾಮದ ಮಹಾಲಕ್ಷ್ಮಿ ಜಾತ್ರೆಯಲ್ಲಿ ತಿತಲಿ ಪಂಚಿ ಜೂಜಾಟ ಜೋರಾಗಿದ್ದು ಜಾತ್ರೆಯಲ್ಲಿ ಯುವತಿಯರ ಡಾನ್ಸ್ ಕಾರ್ಯಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ.
ಜ.೧೪ ರಿಂದ ೧೯ ರ ವರೆಗೆ ಜಾತ್ರೆ ಇಂದು ಸಂಪನ್ನಗೊಂಡಿತು. ಜಾತ್ರೆಯಲ್ಲಿ ೨೦ ಕ್ಕೂ ಹೆಚ್ಚು ತಿತಲಿ ಪಂಚಿ ಜೂಜಾಟದ ಟೆಂಟ್ ಗಳು ತಲೆಯೆತ್ತಿವೆ. ಅವುಗಳಲ್ಲಿ ಮಹಾರಾಷ್ಟ್ರದ ಯುವತಿಯರನ್ನು ಕರೆಸಿ ಡಾನ್ಸ್ ಮಾಡಿಸಲಾಗುತ್ತದೆ. ೫ ನಿಮಿಷದ ಡಾನ್ಸ್ ನೋಡಲು ೫೦-೧೦೦ ರೂ ಪ್ರವೇಶ ಶುಲ್ಕ ವಿಧಿಸಲಾಗುತ್ತದೆ.
ಮೆಹಕರ್ ಪೊಲೀಸ್ ಠಾಣಾ ವ್ಯಾಪ್ತಿಯ ತೂಗಾಂವ್ ಗ್ರಾಮದಲ್ಲಿ ಈ ಜೂಜಾಟ ರಾಜಾರೋಷವಾಗಿ ನಡೆಯುತ್ತದೆ.
ವರದಿ : ನಂದಕುಮಾರ ಕರಂಜೆ, ಬೀದರ

