ಲೇಖಕಿಯರ ಸಂಘದಿಂದ ದತ್ತಿನಿಧಿ ಕಾರ್ಯಕ್ರಮ ಹಾಗೂ ಕವಿಗೋಷ್ಠಿ
ಬೆಳಗಾವಿ – ಪ್ರತಿ ಕವಿಯ ಕವಿತೆಗೆ ಒಂದು ಮೌಲ್ಯವಿದೆ ಅದನ್ನು ಆಸಕ್ತಿಯಿಂದ ಕೇಳುವ ಹಾಗೂ ಅದಕ್ಕೆ ಸ್ಪಂದಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಕವನ ರಚನೆ ಎನ್ನುವುದು ಮರುಸೃಷ್ಟಿಯಂತೆ
ಬದುಕಿಗೆ ಹೊಸ ಮಾರ್ಗಸೂಚಿ ಆಗಬಲ್ಲದು. ಹಿರಿಯರ ಬದುಕೆನ್ನುವುದೆ ಒಂದು ತೆರೆದ ಪುಸ್ತಕದ ಬರಹದಂತೆ ಅದನ್ನು ಗಂಭೀರವಾಗಿ ಓದಿ ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗಲೆ ಬದುಕು ಹಾಗು ಬರಹ ಸಾರ್ಥಕಗೊಳ್ಳುವುದು ಎಂದು ಶ್ರೀಮತಿ ಸುಮಾ ಕಿತ್ತೂರ ಹೇಳಿದರು.
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ದತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ದತ್ತಿ ದಾನಿಗಳಾದ ಕಸಾಪ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ ಅವರ ಬೈಲಹೊಂಗಲದ ಸ್ವಗೃಹದಲ್ಲಿ ಆಯೋಜಿಸಲಾಗಿತ್ತು.
ದಿ.ರೇವಣಸಿದ್ದಪ್ಪ ಲಂಬಿ ಹಾಗೂ ದಿ.ಮೀನಾಕ್ಷಿ ಲಂಬಿ ದತ್ತಿ
ಶ್ರೀಮತಿ ಸುಮಿತ್ರಾ ಪ್ರಭುಲಿಂಗಯ್ಯ ಚರಂತಿಮಠ ದತ್ತಿ
ಶ್ರೀಮತಿ ಸುನಂದಾ ಸಿದ್ದಪ್ಪಾ ಮುಳೆ ದತ್ತಿ
ಇವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಉಪಸ್ಥಿತ ದಾನಿಗಳಾದ
ಶ್ರೀಮತಿ ಮಂಗಲಾ ಮೆಟಗುಡ್ಡ ಜಿಲ್ಲಾಧ್ಯಕ್ಷರು ಕ ಸಾ ಪ, ಡಾ.ಭಾರತಿ ಮಠದ ಹಿರಿಯ ಸಾಹಿತಿಗಳು, ಶ್ರೀಮತಿ ಸುನಂದಾ ಸಿದ್ದಪ್ಪಾ ಮುಳೆ ಹಿರಿಯ ಸಾಹಿತಿಗಳು ಇವರು ಕೂಡಾ ತಮ್ಮ ದತ್ತಿ ದಾನದ ಉದ್ದೇಶ ತಿಳಿಸಿ ಮಾತನಾಡಿದರು.
ಮಂಗಲಾ ಮೆಟಗುಡ್ ಅವರು ತಮ್ಮ ತಂದೆ ತಾಯಿಯವರ ಸಾತ್ವಿಕ ಬದುಕು ಅವರು ಮಾಡಿದ ಸಹಾಯ ಸಮಾಜಸೇವೆ ದೈವಭಕ್ತಿಯ ಕುರಿತು ಮಾತನಾಡುತ್ತಾ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.
ಇನ್ನೀರ್ವರು ದಾನಿಗಳಾದ ಡಾ.ಭಾರತಿ ಮಠದ ಹಾಗೂ ಸುನಂದಾ ಮುಳೆ ಅವರು ಮಾತನಾಡಿ ಕರ್ತವ್ಯ ಪ್ರಜ್ಞೆಯಿಂದ ಬದುಕಿದರೆ ಬದುಕು ಸಾರ್ಥಕವಾಗುವುದು .ಎಲ್ಲರೂ ತಮ್ಮ ತಾಯಿಯನ್ನು ಸ್ಮರಿಸುವುದು ಒಂದು ಉತ್ಸವದಂತೆ ಸಂತೋಷ ಕೊಡುತ್ತದೆ. ದತ್ತಿದಾನಿಗಳು ಹೆಚ್ಚಾದಂತೆ ಸಂಘದ ಆರ್ಥಿಕ ಭದ್ರತೆಯು ಹೆಚ್ಚುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಹಿಳಾ ಒಕ್ಕೂಟದ ವತಿಯಿಂದ ಶ್ರೀಮತಿ ಮಂಗಲಾ ಮೆಟಗುಡ್ ಅವರಿಗೆ *ಧಾರಿಣಿ ಪ್ರಶಸ್ತಿ* ನೀಡಿ ಗೌರವಿಸಲಾಯಿತು. ಕರ್ನಾಟಕ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘವು ಸಹಯೋಗ ನೀಡಿತ್ತು.ಜಿಲ್ಲಾ ಲೇಖಕಿಯರ ಸಂಘದ ೩೦ ಕವಯಿತ್ರಿಯರು ತಮ್ಮ ಸ್ವರಚಿತ ಕವನ ವಾಚನ ಮಾಡಿದರು.
ಸಹಭೋಜನ ದೊಂದಿಗೆ ಸುಂದರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸಾಹಿತಿಗಳಾದ ಶ್ರೀಮತಿ ನೀಲಗಂಗಾ ಚರಂತಿಮಠ, ಪ್ರೇಮಾ ಅಂಗಡಿ, ಶ್ವೇತಾ ನರಗುಂದ, ಸುನಂದಾ ಎಮ್ಮಿ,ವಾಸಂತಿ ಮೇಳೆದ, ಶೈಲಜಾ ಭಿಂಗೆ, ಜ್ಯೋತಿ ಬದಾಮಿ, ವಿದ್ಯಾ ಹುಂಡೇಕರ, ಲಲಿತಾ ಪರ್ವತರಾವ, ಕಸಾಪ ಕಾರ್ಯದರ್ಶಿ ಎಮ್ ವಾಯ್ ಮೆಣಸಿನಕಾಯಿ, ಶ್ರೀಯುತ ಅಂಗಡಿ,ಕಸಾಪ ತಾಲೂಕು ಅಧ್ಯಕ್ಷರಾದ ಸುರೇಶ ಹಂಜಿ ,ಕವಿ ಬಸಪ್ಪ ಶೀಗಿಹಳ್ಳಿ, ಅನ್ನಪೂರ್ಣ ಹಿರೇಮಠ ಮುಂತಾದವರಿದ್ದರು.
ಲೇಖಕಿ ಗೌರಿ ಕರ್ಕಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶ್ರೀಮತಿ ಆಶಾ ಎಸ್ ಯಮಕನಮರಡಿ ಪ್ರಾಸ್ತಾವಿಕ ಮಾತನಾಡಿ ಕವಿಗೋಷ್ಠಿ ಯಮುನಾ ಪ್ರಾರ್ಥನೆಸಲ್ಲಿಸಿದರು, ದಾನಮ್ಮ ಈಟಿ ನಿರೂಪಣೆ ಮಾಡಿದರು.

