ಹಬ್ಬ ಹಬ್ಬ ಮಕ್ಕಳ ಹಬ್ಬ
ಕಲಿಕಾ ಹಬ್ಬ ಮಕ್ಕಳ ಹಬ್ಬ
ಆಡಿ ನಲಿವ ಹಬ್ಬ
ನೋಡಿ ಕಲಿವ ಹಬ್ಬ
ಮಾಡಿ ತಿಳಿವ ಹಬ್ಬ
ಮಕ್ಕಳ ನಗುವಿನ ಹಬ್ಬ .
ಸುಂದರ ಹಬ್ಬ ಕನ್ನಡ ಹಬ್ಬ ಚೆಲುವಿನ ಹಬ್ಬ ಒಗ್ಗಟ್ಟಿನ ಹಬ್ಬ ಗೆಳೆಯರ ಸುಂದರ ನಂದನ ಹಬ್ಬ..!
ಕಲಿಕೆಗೆ ಚೇತನ ಕೊಡುವ ಹಬ್ಬ.ಮಕ್ಕಳ ಅಭಿವ್ಯಕ್ತಿಯ ಪ್ರೇರೇಪಿಸುವ ಹಬ್ಬ .ಮಕ್ಕಳ ಕಲೆಯ ಉತ್ತೇಜಿಸುವ ಹಬ್ಬ
ಹರಟೆ,ಮೋಜು, ಕುಣಿತದ ಹಬ್ಬ…!
ಮಕ್ಕಳ ಕನಸು ನನಸು ಮಾಡುವ ಹಬ್ಬ .ಮೇಲು, ಕೀಳು ತೊರೆಯುವ ಮಕ್ಕಳ ಹಬ್ಬ.ಭಾಷೆ ಬೆಡಗುಅಕ್ಷರ ಜಾತ್ರೆಯ ಹಬ್ಬ.ನಾಡು-ನುಡಿಯ ಹಿರಿಮೆ ಗರಿಮೆಯ ಹಬ್ಬ …!
ಜ್ಞಾನವ ಬಿತ್ತಿ ಬುದ್ಧಿಯ ಬುತ್ತಿ ಹಂಚುವ ಹಬ್ಬ .ಕಥೆ ಹೆಣೆದು ಕವನ ಕಟ್ಟಿ ಕುಣಿಯುವ ಹಬ್ಬ.
ಸಂತಸ ಗಣಿತ ನಿಧಿ ಹುಡುಕಾಟದ ಹಬ್ಬ .ರಸಪ್ರಶ್ನೆ ಸೃಜನಾತ್ಮಕ ಚಟುವಟಿಕೆಯ ಹಬ್ಬ…!
ಊರುಕೇರಿ ಸುತ್ತಿ ಚಕ್ಕಡಿ ಬಂಡಿ ಹತ್ತಿ .ಹೂಡಿ ಟ್ರ್ಯಾಕ್ಟರ್ ಗಾಡಿ ಮಕ್ಕಳ ಸಂತಸ ನೋಡಿ.ತರತರದ ಛದ್ಮ ವೇಷ ತೊಟ್ಟ ಮಕ್ಕಳ ನೋಡಿ.ಉಡುಪಿನಿಂದ ಬರುವ ಮಕ್ಕಳ ಜೋಡಿ….!
ಮಕ್ಕಳ ಕಲಿಕಾ ಹಬ್ಬ ಹಿರಿಯರ ಕಿರಿಯರ ಹಬ್ಬ. ವಾದ್ಯ ಮೇಳ ಸದ್ದು ಗದ್ದಲ ಹಬ್ಬ ಕರುನಾಡಿನ ಕಣ್ಮಣಿ ಕಂದರ ಹಬ್ಬ.ಕಲಿಕಾ ಹಬ್ಬ .
ಹಬ್ಬ ಹಬ್ಬ ಮಕ್ಕಳ ಹಬ್ಬ ಕಲಿಕಾ ಹಬ್ಬ ಹಬ್ಬFLN ಕಲಿಕಾ ಹಬ್ಬ.ಮಕ್ಕಳ ಹಬ್ಬ….!
ಮುದ್ದುಕೃಷ್ಣ….!
ನನ್ನ ಮುದ್ದು ಕೃಷ್ಣ
ಆಡುತಲಿದ್ದರೆ.
ಬಿದಿಗೆ ಚಂದ್ರ ಆಗಸದಲ್ಲಿ ತಂಪೆರೆಯುವಂತೆ….!
ನನ್ನ ಮುದ್ದು ಕೃಷ್ಣ
ಓಡುತಲ್ಲಿದ್ದರೆ .
ಶ್ವೇತವರ್ಣದ ಹಂಸ ನೀರಿನಲ್ಲಿ ಮಂದಹಾಸದಿಂದ ಈಜಿದಂತೆ ….!
ನನ್ನ ಮುದ್ದು ಕೃಷ್ಣ
ಕುಣಿಯುತಲ್ಲಿದ್ದರೆ .
ಸಹಸ್ರಾಕ್ಷ ನವಿಲು
ಸಿಂಗಾರಗೊಂಡು ನರ್ತಿಸಿದಂತೆ….!
ನನ್ನ ಮುದ್ದು ಕೃಷ್ಣ
ನಗುತಲಿದ್ದರೆ
ಕಾಮನಬಿಲ್ಲು ಮುಗಿಲಂಚಿನಲ್ಲಿ ಮೋಹಕವಾಗಿ ಮೂಡಿದಂತೆ….!
ನನ್ನ ಮುದ್ದು ಕೃಷ್ಣ
ಹಾಡುತಲಿದ್ದರೆ
ವನದಲ್ಲಿ ಕೂಗುವ ಇಂಪಾಗಿ ಹಾಡುವ ಕೋಗಿಲೆಯಂತೆ
ನನ್ನ ಮುದ್ದುಕೃಷ್ಣ
ಕಣ್ಣರಳಿಸಿ ನೋಡುತ್ತಿದ್ದರೆ.
ಸುಗಂಧ ಸೂಸುವ ಮಲ್ಲಿಗೆ ಹೂ ಬಳ್ಳಿಯಲ್ಲಿ ಅರಳಿದಂತೆ….!
ನನ್ನ ಮುದ್ದು ಕೃಷ್ಣ ಮಾತನಾಡತಲಿದ್ದರೆ .
ಸೂರ್ಯ, ಚಂದ್ರ , ಚುಕ್ಕೆಗಳು
ಪಕಪಕನೆ ಹೊಳೆದಂತೆ….!
ಶ್ರೀಮತಿ ಶ್ಯಾಮಲಾ ಬಸನಗೌಡ ಪಾಟೀಲ

