ಶಾಸಕ ಮನಗೂಳಿ ಕಾರ್ಯ ಶ್ಲಾಘಿಸಿದ ಸಚಿವ ಎಂಬಿಪಾ

Must Read

ಸಿಂದಗಿ- ಸಿಂದಗಿ ಮತ ಕ್ಷೇತ್ರ ಜಿಲ್ಲೆಯಲ್ಲಿಯೆ ಹೆಚ್ಚು ಅಭಿವೃದ್ದಿಯಾಗುತ್ತಿರುವ ಕ್ಷೇತ್ರವಾಗುತ್ತಿರುವುದು ಅತ್ಯಂತ ಸಂತಸ ತಂದಿದೆ. ಈ ಕ್ಷೇತ್ರದ ಅಭಿವೃದ್ದಿಗೆ ನಿತ್ಯ ಪರಿಶ್ರಮ ಪಡುತ್ತಿರುವ ಶಾಸಕ ಅಶೋಕ ಮನಗೂಳಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪ್ರಶಂಸೆ ವ್ಯಕ್ತ ಪಡಿಸಿದರು.

ಅವರು ಪಟ್ಟಣದಲ್ಲಿ ನೂತನ ಗಾಂಧಿ ಪುತ್ಥಳಿ ಅನಾವರಣ, ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭ, ನಗರಸಭೆ ಕಾರ್ಯಾಲಯ, ಸರಕಾರಿ ಆಸ್ಪತ್ರೆಗೆ ನೂತನ ಹೈಟೆಕ್ ಅಂಬುಲೆನ್ಸ್ ಮತ್ತು ಡಯಾಲಿಸಿಸ್ ಸೆಂಟರ್, ಪಿಡಿಯಾಡ್ರಿಕ್ ಐ.ಸಿ.ಯು ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.

ಸಿಂದಗಿ ಶಾಸಕ ಹಟವಾದಿ. ಒಮ್ಮೆ ಹಿಡಿದ ಕೆಲಸವನ್ನು ಯಾವತ್ತು ಬಿಟ್ಟ ಉದಾರಹಣೆಗಳೆ ಇಲ್ಲ. ದಿ.ಎಮ್.ಸಿ.ಮನಗೂಳಿ ಅವರ ಕನಸುಗಳನ್ನು ಸಾಕಾರ ಮಾಡುವಲ್ಲಿ ಕ್ಷೇತ್ರದ ತುಂಬೆಲ್ಲ ನಿತ್ಯ ದುಡಿಯುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಕಳೆದ ಬಾರಿ ಅನೇಕ ಅಭಿವೃದ್ದಿ ಪರ ಕಾರ್ಯ ಮಾಡಿದ್ದೇನೆ ಆದರೆ ರಾಜ್ಯ ಸರ್ಕಾರದ ಇಂತಹ ಪರಿಸ್ಥಿತಿಯಲ್ಲಿ ಪ್ರಸ್ತುತ ನನ್ನ ಕ್ಷೇತ್ರದಲ್ಲಿ ನಾನು ಇಷ್ಟು ಕಾರ್ಯ ಮಾಡಿಲ್ಲ.
ಶಾಸಕ ಅಶೋಕ ಮನಗೂಳಿ ಸಂಬಂಧಿಸಿದ ಇಲಾಖೆಗಳಿಗೆ, ಸಚಿವರಿಗೆ ಭೇಟಿ ನೀಡಿ ಅಭಿವೃದ್ದಿಗೆ ಅನುದಾನ ತರುತ್ತಲೆ ಇದ್ದಾರೆ ಇದು ಅವರ ಸೃಜನಾತ್ಮಕ ಕಾರ್ಯವಾಗಿದೆ.
ಭಾರತದ ಸಂವಿಧಾನ ಯಾವುದೇ ಜಾತಿ, ಧರ್ಮಕ್ಕೆ ಸೇರಿರುವುದಲ್ಲ ಭಾರತ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಡಾ. ಬಿ.ಆರ್.ಅಂಬೇಡ್ಕರ ಹಾಗೂ ಗಾಂಧಿಜಿ ಅವರ ಕೊಡುಗೆ ಈ ದೇಶಕ್ಕೆ ಅಪಾರವಾಗಿದೆ. 77 ನೇ ಗಣರಾಜ್ಯೋತ್ಸವ ದಿನ ಗಾಂಧಿ ಅವರ ಪುತ್ಥಳಿ ಮತ್ತು ರಾಷ್ಟ್ರ ಲಾಂಛನ ಅಶೋಕ ಸ್ತಂಭ ಅನಾವರಣಗೊಳಿಸಿದ್ದರು ಗಾಂಧಿ ಮತ್ತು ಅಂಬೇಡ್ಕರ್ ಅವರಿಗೆ ನೀಡಿದ ಗೌರವಾಗಿದೆ.
ಈ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದಂತ ಅಶೋಕ ಸ್ತಂಭ ಸಿಂದಗಿಯಲ್ಲಿ ನಿರ್ಮಾಣವಾಗಿದ್ದು ಸಂತಸ ಎಂದ ಅವರು ವಿಜಯಪುರ ಜಿಲ್ಲೆ ಕೈಗಾರಿಕಾ ವಲಯದಲ್ಲಿ, ಆರೋಗ್ಯ , ಶಿಕ್ಷಣ, ಮೂಲಭೂತ ಸೌಕರ್ಯಗಳಲ್ಲಿ ಇನ್ನು ಹೆಚ್ಚು ಹೆಚ್ಚು ಅಭಿವೃದ್ದಿಯಾಗಬೇಕಿದೆ. ಈ ಜಿಲ್ಲೆನ್ನು ಮಾದರಿ ಜಿಲ್ಲೆಯಾಗುವ ನಿಟ್ಟಿನಲ್ಲಿ ಸರ್ಕಾರಕ್ಕೆ ಹೆಚ್ಚು ಒತ್ತಡ ಹಾಕುತ್ತಿದ್ದೇವೆ. ಸಿಂದಗಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ನಾನು ಮತ್ತು ಶಾಸಕರು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕುತ್ತೇವೆ ಎಂದರು.

ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ನಾನು ಈ ಕ್ಷೇತ್ರವನ್ನು ಇನ್ನು ಹೆಚ್ಚು ಅಭಿವೃದ್ದಿ ಮಾಡುವ ಕನಸು ಹೊತ್ತಿದ್ದೇನೆ . ಸಿಂದಗಿಯಲ್ಲಿನ ಬಸ್ ನಿಲ್ದಾಣ ಇಕ್ಕಟ್ಟಾಗುತ್ತಿದೆ ಗೋಲಗೇರಿ ರಸ್ತೆಯಲ್ಲಿ 2ಎಕರೆ ಜಮೀನಿನಲ್ಲಿ ಸ್ಟ್ರೀಟ್ ಲೈಟ್ ಬಸ್ ನಿಲ್ದಾಣ ಮಾಡುವ ಕನಸು ಹೊತ್ತು ನಿಂತಿದ್ದೇನೆ. ಜೊತೆಗೆ ಆರೋಗ್ಯ ಸೇವೆಗೆ ನಾನು ಸದಾ ಸಿದ್ಧ ರಾಜ್ಯದ ಯಾವುದೆ ಸರ್ಕಾರಿ ಆಸ್ಪತ್ರೆಯಲ್ಲಿ ಇರದೆ ಇರುವ ಹೈಟೆಕ್ ಅಂಬುಲೇನ್ಸ್ ತಂದಿರುವುದು ಸಂತಸ ತಂದಿದೆ. ಸಿಂದಗಿ ಪಟ್ಟಣದ 54 ಸಾವಿರ ಜನರ ಬಹುದಿನಗಳ ಬೇಡಿಕೆಯಾಗಿರುವ ಸಿಂದಗಿ ಪುರಸಭೆಯನ್ನು ನಗರಸಭೆ ಮಾಡುವುದಾಗಿತ್ತು ಅದು ನಮ್ಮ ಸರ್ಕಾರ ಒದಗಿಸಿದೆ. ಡಯಾಲಿಸಿಸ್ ಗಾಗಿ ನಮ್ಮ ಭಾಗದ ಜನತೆ ದೂರದ ವಿಜಯಪುರ, ಸೋಲಾಪುರ ನಗರಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು ಇಂದು ಸಿಂದಗಿ ಆಸ್ಪತ್ರೆಯಲ್ಲಿಯೆ ಅದು ಸಿಗುವಂತಾಗಿದೆ ಕ್ಷೇತ್ರದ ಜನತೆ ನನ್ನ ಕಾರ್ಯಗಳಿಗೆ ಸದಾ ಸಹಕಾರ ನೀಡಿ ಎಂದರು.

ಈ ವೇಳೆ ಸಾನಿಧ್ಯ ವಹಿಸಿದ ಸೊನ್ನ ದಾಸೋಹ ವಿರಕ್ತ ಮಠದ ಡಾ. ಶಿವಾನಂದ ಮಹಾಸ್ವಾಮಿಗಳು , ಸಿಂದಗಿ ಬುದ್ದವಿಹಾರದ ಶ್ರೀ ಸಂಘಪಾಲ ಭಂತೇಜಿ, ಹುಲಜಯಂತಿಯ ಶ್ರೀ ಮಾಳಿಂಗರಾಯ ಮಹಾರಾಜರು ಮಾತನಾಡಿದರು.

ವೇದಿಕೆ ಮೇಲೆ ಕಾಂಗ್ರೆಸ್ ಮುಖಂಡರಾದ ಅಶೋಕ ವಾರದ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಕಾಂಬಳೆ, ಶ್ರೀಶೈಲ ಕವಲಗಿ, ಸಾಧಿಕ ಸುಂಬಡ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here

Latest News

ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು...

More Articles Like This

error: Content is protected !!
Join WhatsApp Group