ಕವನ : ನೆಲದ ನಾಲಿಗೆ ಮೇಲೆ

Must Read

ನೆಲದ ನಾಲಿಗೆ ಮೇಲೆ

​ಆ ಗುಡಿಸಲೊಳಗೆ
ಬರೀ ಬಿಕ್ಕಳಿಕೆಗಳೆ
ಸುಕ್ಕುಗಟ್ಟಿವೆ,
ನೆತ್ತರು ಮೆತ್ತಿದ
ಪ್ರಶ್ನೆಗಳು-
ಇನ್ನೂ ಉಸಿರಿಡಿದಿವೆ.

​ಈ ಅರಮನೆಯೊಳಗೆ ಬರೀ ಸೊಕ್ಕುಗಳೆ
ತೊಟ್ಟಿಕ್ಕುತ್ತಿವೆ;
ಹಾಲಾಹಲದ ನಂಜುಂಡು,
ಬಡಿವಾರದಲಿ ಗರ ಬಡಿದಂತೆ
ಹಾಸಿದೆ ಬೆಳಕು.

​ಆ ಗುಡಿಸಲೊಳಗೆ ಸುಖದ ಹಾದಿ ರಜೆ ಪಡೆದು,
ಬಾಳು ಸಜೆ ಹಡೆದು;
ಎಂದೋ ಶವ ಸುಟ್ಟಂತಾಗಿದೆ
ಒಲೆಯ ಬೂದಿ.

​ಈ ಅರಮನೆಯೊಳಗೆ ಮುಗ್ಧರ ರಕ್ತದಲಿ
ಮುಖ ತೊಳೆದು,
ಅಮೃತದ ಮಳೆ ಸುರಿದು
ಕಾಮನೆಯ ಫಸಲು
ನಿಡುಸುಯಿದು…

​ಆ ಗುಡಿಸಲೊಳಗೆ ಹೊಟ್ಟೆಯ ಬಟ್ಟಲು ತುಂಬ
ಹಸಿವಿನ ಚಿತೆಯ ಬಿಂಬ;
ನೇಗಿಲ ತುಟಿ ತಾಗಿದರೂ
ಈ ನೆಲದ ನಾಲಿಗೆ ಬಡವರ ಬಾಳನ್ನೇ ನಲುಗಿಸಿದೆ
••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

LEAVE A REPLY

Please enter your comment!
Please enter your name here

Latest News

ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು...

More Articles Like This

error: Content is protected !!
Join WhatsApp Group