ಮುಧೋಳ – ತಾಲೂಕಿನ ಸುಕ್ಷೇತ್ರ ಮುಗಳಖೋಡದಲ್ಲಿ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ [ರಿ] ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ವಾರಾಚರಣೆ ನಿಮಿತ್ತ ಗ್ರಾಮದೇವತಾ ಆರಾಧನೆ, ಶ್ರೀದೇವಿ ಪಾರಾಯಣ -ಪುರಾಣ ಕಾರ್ಯಕ್ರಮವು ಇದೇ ಜನವರಿ ದಿ .30 ಶುಕ್ರವಾರ ಬೆಳಗ್ಗೆ 8.30 ಕ್ಕೆ ಪ್ರಾರಂಭಗೊಳ್ಳಲಿದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಕುಮಾರ ಗುರುಪ್ರಸಾದ್ ಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರುವರಿ ದಿ .6 ಶುಕ್ರವಾರದ ವರೆಗೆ ನಡೆಯುವ ಗ್ರಾಮದೇವತಾ ಆರಾಧನೆ – ಶ್ರೀದೇವಿ ಪುರಾಣ-ಪ್ರವಚನವು ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳಿಂದ ಪ್ರತಿದಿನ ಬೆಳಗ್ಗೆ 6 ರಿಂದ 7 ರ ವರೆಗೆ ಹಾಗೂ ಸಂಜೆ 8 ರಿಂದ 9 ರ ವರೆಗೆ ನಡೆಯಲಿದೆ. ಫೆಬ್ರುವರಿ 6 ಶುಕ್ರವಾರ ಬೆಳಗ್ಗೆ 8.30 ಕ್ಕೆ ನವದುಗಿ೯ಯರಿಗೆ ಉಡಿ ತುಂಬುವುದು. ಸೇವಾ ಧುರೀಣರಿಗೆ ಸತ್ಕಾರ ನಂತರ ವಿವಿಧ ಗ್ರಾಮಗಳ ವಿವಿಧ ಕಲಾತಂಡಗಳಿಂದ ಜನಪದ ಸಂಸ್ಕೃತಿ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು .
ಭಾಗವಹಿಸಿದ ಕಲಾ ತಂಡಗಳನ್ನು ಗೌರವಿಸಿ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.ಹೆಚ್ಚಿನ ಮಾಹಿತಿಗೆ 9972682938/9742915714-ಈ ಸಂಖ್ಯೆಗೆ ಸಂಪರ್ಕಿಸಲು ತಿಳಿಸಿದ್ದಾರೆ

