ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

Must Read

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು ಕಾಯಕಕ್ಕೆ ಮಹತ್ವ ಕೊಡೋಣ ದಾಸೋಹ ಮೌಲ್ಯಗಳಿಗೆ ಬೆಲೆ ಕೊಡೋಣ ಮಾನವೀಯತೆಗೆ ಮಹತ್ವ ನೀಡಬೇಕಾಗಿದೆೆ ಎಂದು ಎಚ್.ಜಿ.ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತದವತಿಯಿಂದ ಹಮ್ಮಿಕೊಂಡ ಕಾಯಕ ಶರಣರ ಜಯಂತಿಯಲ್ಲಿ ಉಪನ್ಯಾಸ ನೀಡಿ, ಜಾತಿಯ ವ್ಯವಸ್ಥೆಯಲ್ಲಿ ಶೋಷಣೆಗೊಳಗಾದ ಸಮುದಾಯಗಳಲ್ಲಿ ಆತ್ಮ ವಿಶ್ವಾಸವನ್ನು ಬಿತ್ತಿದಂತವರು. ಸಮಾಜದ ಕಟ್ಟಕಡೆಯ ಸಮುದಾಯಗಳ ಜನರನ್ನು ಮುಖ್ಯ ವಾಹಿನಿ ತಂದವರು ೧೨ನೇ ಶತಮಾನದ ಬಸವಾಧಿ ಶರಣರಲ್ಲಿ ಮಾದರ ಚೆನ್ನಯ್ಯ ಗುಪ್ತ ಭಕ್ತನಾಗಿ ಸೇವೆ ಮಾಡಿದರೆ ಮಾದರ ದೂಳಯ್ಯ ಗೌಪ್ಯ ವಚನಕಾರರಾಗಿದ್ದರು. ಡೋಹರ ಕಕ್ಕಯ್ಯ ಕಾಯಕದ ಮೂಲಕ ಸಮಾಜ ಪರಿವರ್ತನೆ ಮಾಡಿದ್ದಾರೆ ಸಮಗಾರ ಹರಳಯ್ಯ , ಉರಿಲಿಂಗ ಪೆದ್ದಿ ಕಾಯಕ ಅಂದರೆ ದೈವಿ ಸ್ವರೂಪದಿಂದ ಕಾಯಕ ಎಂದು ಕರೆಯುತ್ತೇವೆ ಕಾಯಕದಲ್ಲಿ ನಿರತನಾದೊಡೆ ಗುರುವಾದೆಡೆ ಕಾಯಕವೆ ಕೈಲಾಸ ಕಂಡಿದ್ದಾರೆ. ಕಾರಣ ಶರಣ ವಿಚಾರಧಾರೆಗಳನ್ನು ಅವಲೋಕನ ಮಾಡಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಮಾದರ ದಂಡೋರ ಸಮಿತಿಯ ಮುಖಂಡ ಸಾಯಬಣ್ಣಾ ದೇವರಮನಿ ಮಾತನಾಡಿ, ಮಾದರ ಚೆನ್ನಯ್ಯನವರು ೧೨ನೇ ಶತಮಾನದ ಶರಣರಲ್ಲಿ ಕಾಯಕ ದಾಶೋಹ ಮೂಲಕ ಕಾಯಕ ನಿಷ್ಠರಾಗಿ ಕಾರ್ಯನಿರ್ವಹಿಸಿದ್ದಾರೆ ಎನ್ನುವುದಕ್ಕೆ ಅಂದಿನ ಮದ್ರಾಸ ಇಂದಿನ ಚೆನೈ ಮಾದರ ಚನ್ನಯ್ಯನವರ ನಾಮಾಂಕಿತದಿಂದಲೇ ಬಂದಿದೆ. ಮಾದರ ದೂಳಯ್ಯನವರು ಬಸವಣ್ಣನವರ ಭಕ್ತಿಪರಾಕಾಷ್ಠೆಯಲ್ಲಿ ಮೊಳಗಿದಂತವರು. ಕೆಳ ಸಮೂದಾಯದ ಶರಣರನ್ನು ಅನುಭವ ಮಂಟಪದ ಮೂಲಕ ಗುರುತಿಸಿದಂತವರು ಜಗಜ್ಯೋತಿ ಬಸವಣ್ಣನವರು ಎಂದು ಹೇಳಿದ ಅವರು ಪರಿಶಿಷ್ಠ ಸಮುದಾಯಗಳಿಗೆ ಮಿಸಲಿರುವ ಜಾಗೆಗಳನ್ನು ಆ ಸಮುದಾಯಕ್ಕೆ ಮೀಸಲಿಡಬೇಕು ಹಸ್ತಾಂತರಿಸುವ ಕಾರ್ಯ ನಡೆದರೆ ಅದು ಕಾನೂನು ಬಾಹಿರ ಮಾಡಿದಂತೆ ಎನ್ನುವುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಕಾರಣ ಆಯಾ ಜಾತಿಗೆ ಮಿಸಲಿರುವ ಜಾಗೆಗಳನ್ನು ಆಯಾ ಸಮುದಾಯಕ್ಕೆ ಬಳಕೆಯಾಗುವಂತಾಗಬೇಕು ಎಂದು ಆಗ್ರಹಿಸಿದರು.

ನಿವೃತ್ತ ಗುಮಾಸ್ತ ಸದಾಶಿವ ಕಬಾಡೆ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ ಮಾತನಾಡಿದರು.
ಸರಕಾರಿ ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ಗ್ರೇಡ್ ೨ ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ, ಡೋಹರ ಸಮಾಜದ ಅದ್ಯಕ್ಷ ಅಂಬರೀಶ ಚೌಗಲೆ, ಸತ್ಯಪ್ಪ ಮನಗೂಳಿ ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಆಯ್.ಎಂ.ಮಕಾನದಾರ, ಶೈಲಜಾ ಸ್ಥಾವರಮಠ, ಸುನಂದಾ ಯಂಪೂರೆ, ಶಾರದಾ ಬೆಟಗೇರಿ, ವರ್ಷಾ ಪಾಟೀಲ, ಜಯಶ್ರೀ ಹದನೂರ, ರಾಜಕುಮಾರ ಬಾಸಗಿ, ಮಲ್ಲಿಕಾರ್ಜುನ ನಾರಾಯಣಕರ, ಅನ್ನಪೂರ್ಣಾ ಹೊಟಗಾರ, ತುಳಜಾರಾಮ ಇಂಗಳೆ, ಮಹೇಶ ಸಿಂಧೆ, ನಾಗು ನಾರಾಯಣಕರ, ಗೀತಾ ಚೌಗಲೆ, ಶಿವಾಜಿ ಕಟಕೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ತಹಶೀಲ್ದಾರ ಕರೆಪ್ಪ ಬೆಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಸವರಾಜ ಸೋಂಪೂರ ನಿರೂಪಿಸಿ

LEAVE A REPLY

Please enter your comment!
Please enter your name here

Latest News

ಕಬ್ಬು ಬೆಳಗಾರರ ಸಮಸ್ಯೆ ಕುರಿತು ವಿತ್ತ ಸಚಿವೆಯ ಭೇಟಿ ಮಾಡಿದ ಕಡಾಡಿ

ದೇಶದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ರಾಷ್ಟ್ರೀಯ ಬಿಜೆಪಿ ಕಿಸಾನ್ ಮೋರ್ಚಾ ಪದಾಧಿಕಾರಿಗಳ ನಿಯೋಗದೊಂದಿಗೆ ನಿರ್ಮಲಾ ಸೀತಾರಾಮನ್ ಅವರ ಭೇಟಿಮೂಡಲಗಿ: ದೇಶದ ಕಬ್ಬು...

More Articles Like This

error: Content is protected !!
Join WhatsApp Group