ವಿಚಾರಜೀವಿ ಮಾನವನಿಗೆ ಸ್ವಾತಂತ್ರ್ಯ ಬಹುಮುಖ್ಯ ಎನ್ನುವ ಮೇಲಿನ ನುಡಿಮುತ್ತು ನಿಜವಾಗಿಯೂ ಸತ್ಯ. ಸಾಮಾನ್ಯರ ವಿಚಾರಧಾರೆಗಳು ಅಸಮಾನ್ಯರೆನಿಸಿ ಕೊಂಡವರಿಗೆ ಅನುಭವಕ್ಕೆ ಬರದೆ, ಅವರ ವಿಚಾರಗಳನ್ನು ಸ್ವತಂತ್ರ ವಾಗಿ ಹೊರಹಾಕಿ, ಇಂದಿನ. ಭಾರತ. ವಿದೇಶಿಗಳ ಕೈ ಗೊಂಬೆಯಂತೆ ಕೇವಲ ಪ್ರಚಾರದಲ್ಲಿ ಮುಳುಗಿದೆ.
ಏನೇ ಇರಲಿ, ನಮ್ಮ ಮೂಲ ಜ್ಞಾನ ನಮ್ಮೊಳಗೆ ಇದ್ದಾಗ ಯಾರು ತಾನೆ ಕದಿಯಲು ಸಾಧ್ಯ?.ನಮ್ಮ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿ ಇದ್ದರೂ ಹೊರಗಿನ ಶಿಕ್ಷಣ ಅದನ್ನು ಹೊಸಕಿಹಾಕಿದರೆ ನಮ್ಮದೇ ತಪ್ಪು. ನಾವೀಗ ನಮ್ಮ ಧರ್ಮ ಸಂಸ್ಕೃತಿ ಭಾಷೆ ಉಳಿಸಲು ನಮ್ಮವರನ್ನು ಬೇಡೋ ಪರಿಸ್ಥಿತಿಯಿದೆ.
ಆದರೆ ಬೇಡೋದರಿಂದ ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ಅದಕ್ಕೆ ಭಗವಂತನೆ ನಡೆಸುತ್ತಿರುವುದೆಂದು ನಮ್ಮಕೆಲಸ ನಾವೇ ಮಾಡಬೇಕಷ್ಟೆ. ಸ್ವತಂತ್ರ ವಾಗಿ ಬದುಕಲು ಸರಳತೆ,ಸತ್ಯ,ಸ್ವಾಭಿಮಾನ ಸಾಕು. ಹೊರಗೆ ಇದು ಸಿಗುವುದಿಲ್ಲ.
ಸಾಹಿತ್ಯ ಎಂದರೆ ಅನುಭಾವದ ಸತ್ಯವನ್ನು ಹಿತವಾಗಿ ಸಾಮಾನ್ಯರಿಗೆ ತಿಳಿಸುವ ಬರವಣಿಗೆಯ ಪ್ರಾಕಾರ.ಇದೀಗ ಅತಿಯಾದ ಅಹಂಕಾರ ಸ್ವಾರ್ಥ ಕ್ಕೆ ಬಳಸಿ ಜನರಲ್ಲಿ ತಿರಸ್ಕಾರ ಮೂಡಿಸುವಷ್ಟು ಬೆಳೆದಿರಲು ಕಾರಣವೆ ಮಧ್ಯವರ್ತಿಗಳು. ಮಹಾತ್ಮರ ಹೆಸರಲ್ಲೊ ರಾಜಕೀಯ ಬೆಳೆಸಿಕೊಂಡು ಸರ್ಕಾರದ ಹಣವನ್ನು ಬಳಸಿಕೊಂಡರೆ ಸಾಹಿತಿಗಳ ಜ್ಞಾನ ಅರ್ಥವಾಗದು. ಅದಕ್ಕೆ ಬದಲು ಸಾಹಿತಿಗಳೆ ಶಿಕ್ಷಕರಾಗಿ ದುಡಿದು ತಮ್ಮ
ಜ್ಞಾನಶಕ್ತಿ ಯನ್ಮು ಮಕ್ಕಳವರೆಗೆ ತಲುಪಿಸಿದರೆ ನಮ್ಮಧರ್ಮ,ಸಂಸ್ಕೃತಿ, ಭಾಷೆಗೆ ಬಲಬರುತ್ತದೆ.ಸರ್ಕಾರಿ ಶಾಲಾ ಕಾಲೇಜುಗಳಿಗೆ ಶೋಭೆ ತರುವ ಕೆಲಸ ಕಾರ್ಯ ನಮ್ಮ ಜ್ಞಾನಿಗಳಾದ ಸಾಹಿತಿಗಳು, ಗುರು ಹಿರಿಯರು ಶಿಕ್ಷಕರು, ಕಲಾವಿದರು ಮಾಡುವುದು ಧರ್ಮ.ಆದರೆ ಇದರಲ್ಲಿ ಅತಿಯಾದ ಸ್ವಾರ್ಥ, ಅಹಂಕಾರ, ವ್ಯವಹಾರಜ್ಞಾನವಿದ್ದರೆ ಪ್ರಯೋಜನವಿಲ್ಲ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು