ಸವದತ್ತಿ – “ಮಲಪ್ರಭೆ ದಡದ ಪಕ್ಕದಲ್ಲೇ ಇರುವ, ದಕ್ಷಿಣ ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡವು, ಜಾತಿ ಭೇದ ಮರೆತು, ಸರ್ವಧರ್ಮೀಯರು ಯಲ್ಲಮ್ಮನ ಸಾನ್ನಿಧ್ಯಕ್ಕೆ ದರ್ಶನಕ್ಕಾಗಿ ಬರುತ್ತಾರೆ” ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಅವರು ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಲೋಕೋಪಯೋಗಿ ಇಲಾಖೆ, ಲೆಕ್ಕ ಶೀರ್ಷಿಕೆ ಠೇವಣಿ ವಂತಿಕೆ, ಕರ್ನಾಟಕ ಪ್ರವಾಸೋದ್ಯಮ ವಿಜನ್ ಗ್ರುಪ್ ಅಡಿಯಲ್ಲಿ 5 ಕೋಟಿ ವೆಚ್ಚದಲ್ಲಿ 15 ಜನ ತಂಗುವ 24 ಕೊಠಡಿಗಳ ನಿರ್ಮಾಣ. 5 ಕೋಟಿ ವೆಚ್ಚದಲ್ಲಿ 40 ಜನ ತಂಗುವ 18 ಕೊಠಡಿಗಳ ನಿರ್ಮಾಣ. 2 ಕೋಟಿ ವೆಚ್ಚದಲ್ಲಿ 150 ನಾಲ್ಕು ಚಕ್ರ ವಾಹನ ಹಾಗೂ 500 ದ್ವಿಚಕ್ರ ವಾಹನ ಪಾರ್ಕಿಂಗ್. 5 ಕೋಟಿ ವೆಚ್ಚದಲ್ಲಿ ಡಾರ್ಮಿಟ್ರಿ ಸಮುದಾಯ ಶೌಚಾಲಯ ಹಾಗೂ ಸ್ನಾನ ಗ್ರಹಗಳು ಮತ್ತು ಲಗೇಜ್ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಯಲ್ಲಮ್ಮನ ಸಾನ್ನಿಧ್ಯಕ್ಕೆ ಪ್ರತಿ ಮಂಗಳವಾರ, ಶುಕ್ರವಾರ, ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಂದು ಲಕ್ಷಾಂತರ ಭಕ್ತರು ಬಂದು ಎಲ್ಲರ ಅಮ್ಮ ಯಲ್ಲಮ್ಮನ ದರ್ಶನ ಪಡೆದುಕೊಂಡು ಹೋಗುತ್ತಾರೆ ಸಕಲ ಭಕ್ತರಿಗೆ ಶ್ರೀಕ್ಷೇತ್ರದಲ್ಲಿ ಯಾವುದೇ ರೀತಿ ಅನಾನುಕೂಲವಾಗದಂತೆ ಭಕ್ತರಿಗೆ ಮೂಲಸೌಕರ್ಯ ಒದಗಿಸಲಾಗುವುದು” ಎಂದರು.
ಸವದತ್ತಿ ಎಇಇ ಎಚ್ ಎ ಕದ್ರಾಪೂರ, ಕಿರಿಯ ಅಭಿಯಂತರ ಕಲನ್, ದೇವಸ್ಥಾನ ಅಭಿಯಂತರ ಎಮ್ ವ್ಹಿ ಮೂಳ್ಳೂರ, ತಾಪಂ ಸದಸ್ಯರು ಹಾಗೂ ಗ್ರಾಪಂ ಅಧ್ಯಕ್ಷರು, ಉಪಾದ್ಯಕ್ಷರು ಹಾಗೂ ಸದಸ್ಯರ ದೇವಸ್ಥಾನ ಅರ್ಚಕರು ಹಾಗೂ ಸಿಬ್ಬಂದಿ ಹರ್ಲಾಪೂರ, ಉಗರಗೋಳ, ಕುರವಿನಕೊಪ್ಪ ಹಾಗೂ ಯಲ್ಲಮ್ಮನಗುಡ್ಡ ತಾಂಡೆ ಗ್ರಾಮಸ್ಥರು ಇದ್ದರು.