ಕಿರು ಲೇಖನ : ಆಸಕ್ತಿಯಲ್ಲಿ ಅಡಗಿದೆ ಭವಿಷ್ಯ

Must Read

ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಆಸಕ್ತಿ ಅಡಗಿರುತ್ತದೆ. ಅಂದುಕೊಂಡದ್ದೆಲ್ಲ ಆಸಕ್ತಿಯೇ ಆಗಿರುತ್ತದೆ. ಆಸಕ್ತಿ ಹಾಗಂದರೇನು?ಎಂಬ ಪ್ರಶ್ನೆಗೆ ಉತ್ತರ ಸರಳ ಅದುವೇ ಶ್ರದ್ಧೆ. ಅದರ ಒಳಹೊಕ್ಕು ನೋಡಿದಾಗ ಇಚ್ಛಿತ ಕಾರ್ಯ ಪ್ರವೃತ್ತಿ ಎಂದಾಗುತ್ತದೆ.

ಆಸಕ್ತಿ ಮಂತ್ರದಿಂದ ನಾವು ಯಶಸ್ಸನ್ನು ಸಾಧಿಸ ಬಹುದು.ನಮ್ಮಲ್ಲಿರುವ ಆಸಕ್ತಿಯು ನಾವು ಕಾರ್ಯದಶೈಲಿಯನ್ನು ಉತ್ಕೃಷ್ಟ ಮಟ್ಟಕ್ಕೆ ಏರುವಂತೆ ಮಾಡುವುದು. ಮಾಡುವ ಕಾರ್ಯ ಸುಲಲಿತವಾಗಿ ಮುಂದೆ ಸಾಗುತ್ತದೆ. ಅಂದುಕೊಂಡದ್ದನ್ನು ಸಾಧಿಸಲು ಪ್ರೇರೇಪಿಸುತ್ತದೆ. ಆಸಕ್ತಿಯು ಸುಮ್ಮನಿರಲು ಬಿಡುವುದಿಲ್ಲ ಸದಾ ಚಟುವಟಿಕೆಯಿಂದಿರಲು ಎಡೆಬಿಡದೆ ಪ್ರತಿಕ್ಷಣವೂ ಶ್ರಮ ವಹಿಸಲು ಸೂಚಕವಾಗುತ್ತದೆ.

ಸಾಧಕರ ಜೀವನವ ಒಮ್ಮೆ ಅವಲೋಕನ ಮಾಡಿದರೆ ಅವರೆಲ್ಲರೂ ತಮ್ಮ ಆಸಕ್ತಿಯುತ ಕಾರ್ಯೋನ್ಮುಖತೆ ಛಲದಿಂದ ಆಸಕ್ತಿಯುತ ಕೆಲಸವನ್ನು ಆಯ್ದುಕೊಂಡರೆ ಯಶಸ್ಸು ಖಂಡಿತ.”ಆಸಕ್ತಿಯಿಲ್ಲದ ಜೀವನ ಆತ್ಮವಿಲ್ಲದ ಶರೀರದಂತೆ”ಇದು ಸಾಧಾರಣ ಭಾವನೆಯಲ್ಲ.ಅದ್ಭುತ ಶಕ್ತಿ.

ಅನಾಸಕ್ತಿ ಕೆಲಸ ವಿಫಲವಾದೀತು ಬೇರೆಯವರ ಒತ್ತಡದಿಂದ ಅನಾನುಕೂಲ ಸ್ಥಿತಿ, ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಆಸಕ್ತಿಗಳನ್ನ ತ್ಯಜಿಸಿದ ಕಾರಣವೆನ್ನ ಬಹುದು.

ಇಂದು ಪಾಲಕರು ಮಕ್ಕಳ ನಿರಾಸಕ್ತಿಯ ಕುರಿತು ಮಾತನಾಡುವರೆ ಹೊರತು ಅವರ ಆಸಕ್ತಿಯ ಬಗ್ಗೆ ಗಮನ ನೀಡಲಾರರು.ಪ್ರತಿ ಮಗುವಿನ ವಿಕಾಸ ಸಾಧನೆಗೆ ಅವರಿಗೆ ಹಿಡಿಸಿದ ಕಾರ್ಯ ಮಾಡಲು ಬಿಡಿ ಆಗ ಮಾತ್ರ ಸಾಧ್ಯ.

ನಿರಾಸಕ್ತಿ ಕಾರ್ಯದ ವಿಫಲತೆಗೆ ಸಾಕ್ಷಿ. “ಮನಸ್ಸಿದ್ದರೆ ಮಾರ್ಗ”ಎಂಬಂತೆ ಮನಸ್ಸಿಟ್ಟು ಮನಸಿಗೆ ಇಷ್ಟ ವಾದ ಕಾರ್ಯ ಮಾಡಿದರೆ ಸಫಲತೆಯ ದಾರಿ ತಾನೆ ತೆರೆದುಕೊಳ್ಳುತ್ತದೆ. ಆಸಕ್ತಿ ಎಂಬ ಬಂಡವಾಳ ದಿಂದ ಹೆಗ್ಗುರಿಯನ್ನು ಈಡೇರಿಸಲು ಸಹಾಯಕ.

ದೃಢವಾದ ನಿರ್ಧಾರ ಇಚ್ಛಿತ ಕಾರ್ಯವನ್ನು ಮಾಡಿದಾಗ ಜೀವನದ ಭವ್ಯ ಭವಿಷ್ಯದ ಅಡಿಗಲ್ಲನ್ನು ಇಟ್ಟಂತೆ.ಆಸಕ್ತಿಯಲ್ಲಿ ಭವಿಷ್ಯದ ಬೆಳ್ಳಿರೇಖೆ ಅಡಗಿದೆ.

ರೇಷ್ಮಾ ಕಂದಕೂರ
ಗಂಗಾವತಿ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group