ಬೀದರ – ತನ್ನ ಪೋಲಿಸ್ ಠಾಣೆಯಿಂದ ವರ್ಗಾವಣೆ ಗೊಂಡ ಪೋಲಿಸ್ ಪೇದೆಗೆ ಮದುವೆಯ ಮನೆಯಲ್ಲಿ ವಧುವಿಗೆ ವಿದಾಯ ಮಾಡಿದಂತೆ ಬೀಳ್ಕೊಡುಗೆ ಮಾಡಿದ ಅಪರೂಪದ ಘಟನೆ ಬೀದರ ಜಿಲ್ಲೆಯ ಮೇಹಕರ ಪೋಲಿಸ್ ಠಾಣೆಯಲ್ಲಿ ನಡೆದಿದೆ.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಮೇಹಕರ್ ಪೊಲೀಸ್ ಠಾಣೆ ಪೋಲಿಸ್ ಪೇದೆಯಾದ ಅನೀಲ ಪೂಣೆಕರ್ ಅವರು ಮಂಠಾಳ ಪೋಲಿಸ್ ಠಾಣೆಗೆ ವರ್ಗಾವಣೆ ಯಾದ ಹಿನ್ನಲೆಯಲ್ಲಿ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಈ ಸಮಾರಂಭದಲ್ಲಿ PSI ನಂದಕುಮಾರ ಮೊಳೆ ಅವರು ತಮ್ಮ ಹಾಡಿನ ಮೂಲಕ ಎಲ್ಲರ ಗಮನ ಸಳೆದು, ಪೋಲಿಸರದು ಒರಟು ಸ್ವಭಾವ,ಅವರು ಕಲ್ಲು ಹೃದಯದವರು ಎನ್ನುವ ಅಪವಾದಗಳು ಎಂಬ ಸಾರ್ವಜನಿಕರಲ್ಲಿ ಇರುವುದು ಸಹಜ, ಆದರೆ ಪೋಲಿಸರಲ್ಲೂ ಮೃದುವಾದ ಹೃದಯ ವಿದೆ ಅವರಲ್ಲಿ ಕೂಡಾ ಮಾನವೀಯತೆ ಇದೆ ಎಂಬುದನ್ನು ತೋರಿಸಿದರು.. ಅವರಲ್ಲದೆ ಅವರ ಹಾಡಿರುವ ಹಾಡನ್ನು ಕೇಳಿದರ ಪ್ರತಿಯೊಬ್ಬರು ಮೈಮರೆತು ಕೇಳುತಿದ್ದರೆ ಮದುವೆ ಮನೆಯಲ್ಲಿ ವಧುವಿಗೆ ವಿದಾಯ ಮಾಡಿದಂತಿತ್ತು ಎಂದು ಸಾರ್ವಜನಿಕರ ಅಭಿಪ್ರಾಯ ಮೂಡಿ ಬಂದಿತು.
ವರದಿ : ನಂದಕುಮಾರ ಕರಂಜೆ, ಬೀದರ