- Advertisement -
ಕಲಿಯುಗ
ಕಲಿಯುಗದ ಕಾಲವಿದು
ಪ್ರತಿದಿನವು ಹೊಸದು
ಕಲಿಸುತಿದೆ ಹೊಸ ವಿಚಾರ
ಮಾಚಿ ಮರೆಯಾಗುತಿದೆ ಆಚಾರ
ಪ್ರೀತಿಯ ಬೆಲೆ ಅಳಿದು ಹೋಯಿತು
ಕಾಮದ ಸೆಲೆಯಲಿ ಜಗವು ಮುಳುಗಿತು
ಮಾನ ಮರ್ಯಾದೆ ಹೋದರೇನಂತೆ
ಮೊಬೈಲ್ ಒಂದು ಜೊತೆಯಿರಬೇಕಂತೆ
- Advertisement -
ನನ್ನವರು ತನ್ನವರು ಯಾರು ಕಾಣುತ್ತಿಲ್ಲ
ಸಂಬಂಧ ಸಂಧರ್ಭ ಅರಿವಿಗೆ ಬರುತ್ತಿಲ್ಲ
ಸಂಭ್ರಮಕ್ಕೆ ಸಂಭಾವನೆ ಬೇಕಾಗುತಿದೆಯಲ್ಲ
ಸಂಪತ್ತು ಹೊತ್ತು ತರುತಿದೆ ಆಪತ್ತು ತಿಳಿತಿಲ್ಲ
ಸಿಕ್ಕ ಸಿಕ್ಕವರ ಜೊತೆ ಮುದ್ದಾಟ ಗುದ್ದಾಟ
ಬಿಕ್ಕಿ ಅಳುತ್ತಿದ್ದರು ಕೆಳಲ್ಲ ಹೆತ್ತವರ ನರಳಾಟ
ಅಜ್ಞಾನದ ಬೆನ್ನಟ್ಟಿ ನಡೆಯುತಿದೆ ಡೊಂಬರಾಟ
ಹಾದಿ ಬೀದಿಗಳಲಿ ನಾ ನನ್ನದೆಂದು ಕಿತ್ತಾಟ
ಬಾಬರ್ ಟಿ ಇಂಗಳಗಿ