ಸಿಡಿ ಕೇಸ್: ಬೀದರನಲ್ಲಿ ಇಬ್ಬರ ಬಂಧನ

Must Read

ಬೀದರ – ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬೀದರ್ ನ ಇಬ್ಬರನ್ನು ವಿಶೇಷ ತನಿಖಾ ತಂಡ ಬಂಧಿಸಿದ ಪ್ರಕರಣ ವರದಿಯಾಗಿದೆ.

ಬಂಧಿತ ಇಬ್ಬರು ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದವರು

ಭಾಲ್ಕಿ ಪಟ್ಟಣದ ಆಕಾಶ್ ತಲವಾಡೆ, ಅಭೀಷೇಕ್ ಜಿಂದೆ ಎಂಬ ಇಬ್ಬರನ್ನು ಬಂಧಿಸಲಾಗಿದ್ದು ಇದರಲ್ಲಿ ಇನ್ನೂ ಕೆಲವರು ಇರುವ ಬಗ್ಗೆ ಗುಮಾನಿಯಿದೆ.

ಮಾರ್ಚ್ 11 ರಂದು ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಭಾಲ್ಕಿ ಪಟ್ಟಣದ ಗಂಜ್ ಪ್ರದೇಶದಲ್ಲಿ ಆರೋಪಿಗಳ ಬಂಧನವಾಗಿದೆ

ಪ್ರಮುಖ ಆರೋಪಿ ಆಕಾಶ್ ತಳವಾಡೆ ಬೆಂಗಳೂರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ವಿಡಿಯೋದಲ್ಲಿದ್ದ ಯುವತಿಗೂ ಆಕಾಶನಿಗೂ ಲಿಂಕ್ ಇತ್ತು ಎನ್ನಲಾಗುತ್ತಿದೆ.

ಇದಲ್ಲದೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹಳ್ಳಿಯ ಮನೆಯೊಂದರ ಮೇಲೆ ಹಾಗೂ ಬೆಂಗಳೂರಿನ ವಿಜಯನಗರದ ಮನೆಯೊಂದರ ಮೇಲೆ ಸಿಟ್ ತಂಡ ದಾಳಿ ಮಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ವರದಿ: ನಂದಕುಮಾರ ಕರಂಜೆ
Times of ಕರ್ನಾಟಕ, ಬೀದರ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group