ಬೀದರ – ವಸತಿ ಯೋಜನೆಗಳಿಂದ ವಂಚಿತಗೊಂಡ ಫಲಾನುಭವಿಗಳ ಪ್ರಶ್ನೆಗಳಿಗೆ ಬೀದರ ಸಂಸದ ಭಗವಂತ ಖೂಬಾ ತಡವರಿಸಿದ ಘಟನೆ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಜರುಗಿದೆ.
ಪ್ರಧಾನ ಮಂತ್ರಿಗಳ ಸಾಮಾಜಿಕ ಭದ್ರತಾ ಯೋಜನೆಯ ಕಾರ್ಯಕ್ರಮ ದಲ್ಲಿ ಈ ಘಟನೆ ನಡೆದಿದ್ದು, ವಿವಿಧ ಯೋಜನೆಗಳಡಿ ಮಂಜೂರಾಗಿದ್ದ ಮನೆಗಳ ಹಣ ಬಿಡುಗಡೆಯಾಗದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಂಸದ ಖೂಬಾ ಕಾರ್ಯಕ್ರಮದಿಂದ ಹೊರನಡೆದರು.
ಕಾರ್ಯಕ್ರಮದ ವೇಳೆಗೆ ಗ್ರಾಮಸ್ಥರು ಆಕ್ರೋಶಭರಿತರಾಗಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದರಿಂದ ತಡವರಿಸಿದ ಸಂಸದರು ಉತ್ತರಿಸಲಾಗದೆ ಕೆಳಗಿಳಿದು ಹೋಗಬೇಕಾಯಿತು.