Homeಲೇಖನಪುಸ್ತಕ ಪರಿಚಯ: ಸಾಧನೆಯ ಭಗೀರಥ ಎಚ್ ಬಿ ಎಲ್ ರಾವ್

ಪುಸ್ತಕ ಪರಿಚಯ: ಸಾಧನೆಯ ಭಗೀರಥ ಎಚ್ ಬಿ ಎಲ್ ರಾವ್

spot_img

ಪುಸ್ತಕ ಹೆಸರು : ಸಾಧನೆಯ ಭಗೀರಥ ಎಚ್ ಬಿ ಎಲ್ ರಾವ್

ಸಂಪಾದಕರು : ವಿಶ್ವನಾಥ ದೊಡ್ಮನೆ
ಪ್ರಕಾಶಕರು : ಮಯೂರ ವಮ೯ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ 84
ಪುಟಗಳು : 184 ಬೆಲೆ : 200
ಪ್ರಥಮ ಮುದ್ರಣ : 2021 ಪೆಬ್ರವರಿ19

(ಭಾಗ 1 ರಲ್ಲಿ ಹದಿನೆಂಟು ಜನ, ಭಾಗ 2 ರಲ್ಲಿ 20 ಜನ, ಭಾಗ 3 ರಲ್ಲಿ 4 ಜನ, ಭಾಗ 4 ರಲ್ಲಿ 3 ಜನ, ಒಟ್ಟು 45 ಜನ ಸಾಹಿತಿಗಳು ಬರೆದಿದ್ದಾರೆ)

ವಿಶ್ವನಾಥ ದೊಡ್ಮನೆಯವರು ಪೀಠಿಕೆಯಲ್ಲಿ ರಾಯರ ಪೂರ್ಣ ಹೆಸರು ಹೆಜಮಾಡಿ ಬಾಗಿಲ್ತಾಯು ಲಕ್ಷ್ಮೀ ನಾರಾಯಣರಾವ್. ಎಚ್ ಬಿಎಲ್ ರಾವ್ ದಕ್ಷಿಣ ಕನ್ನಡ ಜಿಲ್ಲೆಯ ಹೆಜಮಾಡಿಯಲ್ಲಿ 29-09-1933 ರಲ್ಲಿ ಜನಿಸಿದರು ಇವರ ತಂದೆ ಆಯುರ್ವೇದ ಪಂಡಿತರು ಬಾಲ್ಯದಲ್ಲಿ ಯಕ್ಷಗಾನದಲ್ಲಿ ಆಸಕ್ತಿ. ಪ್ರಾಥಮಿಕ ಶಾಲೆ ಪ್ರೌಢ ಶಾಲೆ ಊರಲ್ಲೇ ಪೂರೈಸಿದರು. ಉದ್ಯೋಗ ಅರಸುತ್ತ ಮದ್ರಾಸಿಗೆ ತೆರಳಿದರು.

ಅಲ್ಲಿಂದ 1957 ರಲ್ಲಿ ಮುಂಬೈಗೆ ಹೋದರು. ಉದ್ಯೋಗ ಮಾಡುತ್ತಾ ಬಿ.ಎ. ಎಲ್.ಎಲ್.ಬಿ ಮತ್ತು ತತ್ವಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದುಕೊಂಡರು. ಅಲ್ಲಿ ಯಕ್ಷಗಾನ ತರಬೇತಿ ಕಾರ್ಯ ಶುರುಮಾಡಿದರು. ಪ್ರಕಾಶಕರಾಗಿ ಎಚ್.ಬಿ.ಎಲ್ ರಾವ್ ಎಂಬುದು ವಿಶ್ವವಿದ್ಯಾಲಯಗಳ ಪಿ.ಎಚ್.ಡಿ. ವಿಷಯವಾಗಬಹುದು 139 ಪೌರಾಣಿಕ ಪ್ರಸಂಗಗಳನ್ನು ಹಂತಹಂತವಾಗಿ ಪ್ರಕಟಿಸಿದ್ದಾರೆ. ಯಕ್ಷಗಾನ ಸಾಹಿತ್ಯ ಸಮ್ಮೇಳನದ 14 ಸ್ಮರಣ ಸಂಚಿಕೆಗಳು 13 ಸಾಧಕರ ಅಭಿನಂದನಾ ಗ್ರಂಥಗಳು ಇತರ 40 ಕೃತಿಗಳು.

2014 ಆಗಸ್ಟ 30-31 ರಂದು ಪ್ರಥಮ ಮಹಿಳಾ ಸಾಹಿತ್ಯ ಸಮಾವೇಶ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದರು. 1978 ರಲ್ಲಿ ಯಕ್ಷಗಾನ ಸಮ್ಮೇಳನ ನಡೆದಿತ್ತು. ಪರ್ಯಾಯ ಯಕ್ಷಗಾನ ಸಾಹಿತ್ಯ ಸಮ್ಮೇಳನಗಳು 1983 ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ 2012 ರವರೆಗೆ ಜರುಗಿವೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ರಾಜ್ಯ ಕನ್ನಡಿಗರ ಸಾಂಸ್ಕೃತಿಕ ಸಮಾವೇಶ ಹರಿದಾಸ ಸಾಹಿತ್ಯ ಸಮ್ಮೇಳನ, ಅನುಭಾವ ಸಾಹಿತ್ಯ ಸಮ್ಮೇಳನ, ಗಮಕ ಕಲಾ ಸಮ್ಮೇಳನ…. ಹೀಗೆಲ್ಲ ಸಕ್ರಿಯರಾಗಿದ್ದರು. ಈ ಹದಿನೈದು ಸಮ್ಮೇಳನಗಳಲ್ಲಿ ಅವರು ನೂರಾರು ಅಪ್ರಕಟಿತ ಪ್ರಸಂಗಗಳನ್ನು ಕೃತಿರೂಪಕ್ಕೆ ತಂದಿದ್ದರು. ಧ್ವನಿಸುರುಳಿಗಳು ಹೀಗೆ ಅವರ ಕೆಲಸಗಳು ಕೊಡುಗೆಗಳು ಅಪಾರವಿದೆ.

ಎಚ್.ಬಿ.ಎಲ್.ರಾವ್ ಅವರು ‘ಸಾಹಸಭೀಮ’ ಎಂದೆನಿಸಿಕೊಂಡವರು. ಪದವೀಧರ ಯಕ್ಷಗಾನ ಸಮಿತಿ, ಸಾಹಿತ್ಯ ಬಳಗ, ಶಿವಳ್ಳಿ ಪ್ರತಿಷ್ಠಾನ, ಕರ್ನಾಟಕ ಗಮಕ ಕಲಾ ಪರಿಷತ್ತು, ಮಹಾರಾಷ್ಟ್ರದ ಘಟಕದ ನೇತೃತ್ವ, ಪ್ರವಚನ ಸಮಿತಿ, ತುಳು ಪರ್ಬ, ಯಕ್ಷಗಾನ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ(ಮೂರು ಅವಧಿಗೆ). ಹೀಗೆ 50-55 ವರ್ಷಗಳ ಕಾಲ ಮುಂಬಯಿಯಲ್ಲಿ ಕನ್ನಡ ಸಂಸ್ಕ್ರತಿಯ ಪತಾಕೆ ಹಾರಿಸುವಲ್ಲಿ ನಿರತರಾಗಿದ್ದ ರಾವ್ ತಮ್ಮ 87 ನೇಯ ವಯಸ್ಸಿನಲ್ಲಿ22-04-2020 ರಂದು ಇಹಲೋಕ ತ್ಯಜಿಸಿದರು.

ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶಿವಳ್ಳಿ ಬ್ರಾಹ್ಮಣರ ಕುರಿತು ಭಾಗ-1 ಭಾಗ-2 ಹೀಗೆ ಎರಡು ಅಧ್ಯಯನ ಹಾಗೂ ಐತಿಹಾಸಿಕ ಕೃತಿಗಳನ್ನು ನೀಡಿರುವುದು ಇವರ ಇತಿಹಾಸ ಪ್ರಜ್ಞೆಗೆ ಸಾಕ್ಷಿ. ಹೀಗೆ ಪ್ರವಚನ ಸಮಿತಿಯ ಮುಖಾಂತರ ಸುಮಾರು 15 ವರ್ಷಗಳ ಕಾಲ ನಡೆಸಿಕೊಂಡು ಬಂದ ಪ್ರವಚನವು ಪುರಾಣ ಹಾಗೂ ಆಧ್ಯಾತ್ಮಿಕ ಆಸಕ್ತರಿಗೆ ಸದಾ ನೆನಪಿನಲ್ಲಿಡುವಂತಹದ್ದು.

ಹತ್ತು ಹಲವು ವಿಶೇಷಗಳಿಂದ ಕೂಡಿದ್ದ ನಮ್ಮ ಆತ್ಮ ಕಥಾ ನಾಯಕ ಕನ್ನಡ ತುಳು ಭಾಷೆಗೆ ಕರಾವಳಿಯ ಜಾನಪದ, ಸಾಂಸ್ಕ್ರತಿಕ ಪರಂಪರೆಗೆ ನೀಡಿದ ಕೊಡುಗೆ ಅಪಾರ. ಅವರ ಸಾಧನೆಯನ್ನು ಹಿಂದೆ ಅವರ ‘ಹರಸಾಹಸಿ’ ಅಭಿನಂದನ ಗ್ರಂಥದಲ್ಲಿ ಕಾಣಬಹುದಾಗಿದೆ. ಈ ಕೃತಿ ಅವರ ಅನುಪಸ್ಥಿತಿಯಲ್ಲಿ ಅಭಿಮಾನದಿಂದ ಮಾಡಿದ ಚಿಕ್ಕ ಪ್ರಯತ್ನ ಎಂದಿದ್ದಾರೆ.

ಪ್ರಕಾಶಕರಾದ ಕಡಂದಲೆ ಸುರೇಶ ಭಂಡಾರಿ ಸಾಹಸಿಗರ ಕಥೆ ಬರೆಯುವುದು ಒಂದು ಸಾಹಸವೇ! ಎಂದಿದ್ದಾರೆ. ಸಲಹಾ ಸಮಿತಿಯ ಪ್ರೋ. ಎಂ. ಎಲ್. ಸಾಮಗ, ರಾಜೇಶಗೌಡ, ಅಮಿತಾಭಾಗ್ವತ್, ಡಾ. ಕರುಣಾಕರ್ ಶೆಟ್ಟಿ, ಗೋಪಾಲ ಉಳ್ಳೂರ, ಡಾ. ಜೆ. ಪಿ. ಕುಸುಮ ಪದ್ಮನಾಭ ಸಪಲಿಗ ಉತ್ತಮ ಕಾರ್ಯ ಮಾಡಿದ್ದಾರೆ.

ಅಶೋಕ ಸುವರ್ಣ, ಶಿಮಂತೂರ ಚಂದ್ರಹಾಸ, ಸುವರ್ಣ, ಕೋಲ್ಯಾರು ರಾಜು-ಶೆಟ್ಟಿ, ಸುಧೀರ್, ಆರ್, ಎಲ್, ಶೆಟ್ಟಿ, ಶ್ರೀನಿವಾಸ ಜೋಕಟ್ಟೆ, ಬಿ. ಜನಾರ್ಧನ ಭಟ್, ಸುಶೀಲಾ ದೇವಾಡಿಗ, ಎನ್.ಕೆ. ಸುಂದರ, ಶೇಖರ, ಅಜೆಕಾರು, ಕೆ.ಗೋವಿಂದ ಭಟ್ಟ, ನಂದಳಿಕೆ ನಾರಾಯಣಶೆಟ್ಟಿ, ಅನುರಾಧಾ ರಾವ್, ಕೆ.ಎಲ್.ಕುಂಡಾಂತಾಯ, ಸುನಿತಾ ಶೆಟ್ಟಿ, ವರದರಾಜ ಚಂದ್ರಗಿರಿ, ಕೆ.ಎಸ್,ಹೆಗಡೆ, ಶ್ರೀ ವತ್ಸ, ಎಸ್.ವಟಿ ವ್ಯಾಸರಾವ್ ನಿಂಜುರು, ಬಿ.ಎಚ್.ಕಟ್ಟಿ ವಿದ್ಯಾಧರ ಮುತಾಲಿಕ ದೇಸಾಯಿ, ಅಮೃತಾ ಎ. ಶೆಟ್ಟಿ, ಗುರುರಾಜ ನಾಯಕ್, ಎಸ್.ಕೆ.ಭವಾನಿ, ಸಾದಯಾ, ಜಿ.ಟಿ. ಆಚಾರ್ಯ, ಸತೀಶ ಎನ್ ಬಂಗೇರ, ಪ್ರೊ ವೆಂಕಟೇಶ ಪೈ, ಸವಿತಾ ಎಸ್ ಶೆಟ್ಟಿ ಶಾಂತ ಲಕ್ಷ್ಮೀ ಉಡುಪ, ಸಹನಾ ಭಾರದ್ವಾಜ್, ಶೈಲಜಾ ಹೆಗಡೆ, ಶಯದೇವಿ ಸುತ್ರೆ, ಜಿ.ವಿ. ಕುಲಕರ್ಣಿ, ಶಾರದಾ ಅಂಚನ್ ಇನ್ನೂ ಮುಂತಾದವರು ಉತ್ತಮವಾಗಿ ಬರೆದಿದ್ದಾರೆ.

ಬೆನ್ನುಡಿಯನ್ನು ಡಾ. ವಿಶ್ವನಾಥ ಕಾರ್ಣಾಡ್ ಮುಂಬಯಿ ಅವರು ಬರೆದಿದ್ದಾರೆ ಮುಖಪುಟ ಹರೀಶಕುಮಾರ ಸಿ. ಮುದ್ರಣ ಶ್ರೀ ರಾಮ ಪ್ರಿಂಟಿಂಗ್ ಮಂಡ್ಯ ಉತ್ತಮ ಮುದ್ರಣ ಉತ್ತಮ ಮುಖಪುಟ ಉತ್ತಮ ಪುಸ್ತಕ ಇದಾಗಿದೆ.

ಎಲ್ಲರೂ ಓದಲೇಬೇಕಾದ ಕೃತಿ.

ವಿಶ್ವನಾಥ ದೊಡ್ಮನೆ ಇವರ ಚರವಾಣಿ 9222137634.


ಎಂ. ವೈ ಮೆಣಸಿನಕಾಯಿ ಬೆಳಗಾವಿ
9449209570.

RELATED ARTICLES

Most Popular

error: Content is protected !!
Join WhatsApp Group