ಮಾನವ ಸಮಾಧಾನ ಶಾಂತಿಯಿಂದ ಜೀವಿಸಬೇಕು – ಬಂಡಿಗಣಿ ಶ್ರೀಗಳು

Must Read

ಮೂಡಲಗಿ : ಮಾನವ ಜನ್ಮ ಶ್ರೇಷ್ಠವಾದದ್ದು ಉತ್ತಮ ಗುರುವಿನ ಮಾರ್ಗದರ್ಶನದಲ್ಲಿ ಜೀವನವನ್ನು ಸಮಾಧಾನ ಮತ್ತು ಶಾಂತಿಯಿಂದ ಜೀವಿಸಬೇಕು ಎಂದು ಬಂಡಿಗಣಿಯ ನೀಲಮಾಣಿಕ್ಯ ಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.

ಸಮೀಪದ ಹಳ್ಳೂರ ಗ್ರಾಮದ ಗಾಂಧಿನಗರದ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ದೇವರ ನಾಮಸ್ಮರಣೆಯಿಂದ ಮಾತ್ರ ಮನುಷ್ಯನಿಗೆ ಮುಕ್ತಿ ಸಾಧ್ಯ, ವಿಜ್ಞಾನವು ಕೈ ಬಿಟ್ಟಾಗ ದೈವ ಕೈ ಹಿಡಿಯುತ್ತದೆ, ಆಸ್ತಿ ಅಧಿಕಾರ ಸ್ಥಿರವಾಗಿ ಯಾರ ಬಳಿಯು ಇರುವದಿಲ್ಲ ಎಲ್ಲರೂ ತನ್ನವರು ಎಂದು ಅರಿತು ನಡೆಯಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ರೇವಣಸಿದ್ದ ಶಿವಾಚಾರ್ಯ ಶ್ರೀಗಳು ಮಾತನಾಡಿ, ನಿರ್ಮಲವಾದ ಮನಸ್ಸಿನಿಂದ ದೇವರನ್ನು ಧ್ಯಾನಿಸಿದರೆ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದರು.

ಖಾನಟ್ಟಿಯ ಬಸವಾನಂದ ಶ್ರೀಗಳು ಮಾತನಾಡಿ, ಸತ್ಯವನ್ನು ಸುಳ್ಳು ಮಾಡಿ ಯಾವುದೋ ಯಾರ ಮಾತನ್ನು ಕೇಳಿ ಹಣ ಅಧಿಕಾರದ ಆಸೆಗಾಗಿ ಮೋಸ ವಂಚನೆ ಮಾಡುವವರು ಮಾನವರಲ್ಲಾ, ತಾವು ಮಾಡಿದ ಪಾಪಕ್ಕೆ ತಾವೇ ಶಿಕ್ಷೆ ಅನುಭವಿಸಬೇಕು ಎಂದರು.

ವೇದಿಕೆಯ ಮೇಲೆ ಬಸವ್ವಾ ಕತ್ತಿ, ಗಂಗಪ್ಪ ಪಾಲಭಾಂವಿ, ಶೋಭಾ ಲೋಕನ್ನವರ, ಮಾರುತಿ ದೊಡ್ಡಮನಿ, ಹಣಮಂತ ಪಾಲಭಾಂವಿ, ಬಸವರಾಜ ಅರಳಿಮಟ್ಟಿ, ಬಸಪ್ಪ ಮಾಲಗಾರ, ಈಶ್ವರ ಕತ್ತಿ, ಸಿದ್ದು ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುರಗೆಪ್ಪ ಮಾಲಗಾರ ಸ್ವಾಗತಿಸಿದರು, ಸಿದ್ದು ದುರದುಂಡಿ ನಿರೂಪಿಸಿದರು, ಎಸ್ ಎಸ್ ಮನ್ನಾಪೂರ ವಂದಿಸಿದರು.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group