ಸುಶಾಂತ ಆತ್ಮಹತ್ಯೆ; ಆಘಾತ

Must Read

ಆತ್ಮಹತ್ಯೆ ಮಾಡಿಕೊಂಡಿರುವ ಖ್ಯಾತ ಬಾಲಿವುಡ್ ನಟ ಸುಶಾಂತ ಸಿಂಗ್ ಕೆಲ ತಿಂಗಳಿಂದ ಡಿಪ್ರೆಶನ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

ಕಳೆದ ಒಂದು ತಿಂಗಳಿನಲ್ಲಿ ಈ ಲೋಕವನ್ನಗಲಿದ ಶ್ರೇಷ್ಠ ಬಾಲಿವುಡ್ ಕಲಾವಿದರಲ್ಲಿ ಸುಶಾಂತ ನಾಲ್ಕನೆಯವರು. ಕಳೆದ ತಿಂಗಳಲ್ಲಿ ರಿಷಿ ಕಪೂರ್, ಇರ್ಫಾನ್ ಹಾಗೂ ಸಂಗೀತ ನಿರ್ದೇಶಕ ವಾಜಿದ್ ಖಾನ್ ರನ್ನು ದೇಶದ ಚಿತ್ರರಂಗ ಕಳೆದುಕೊಂಡಿದೆ.

‘ಚಿಚ್ಚೋರೆ’ ಎಂಬ ಚಿತ್ರ ಸುಶಾಂತ ಸಿಂಗ ರಾಜಪೂತ ಅವರಿಗೆ ಹಣ ತಂದು ಕೊಟ್ಟ ಚಿತ್ರ. ಇತ್ತೀಚೆಗೆ ಅವರು ಖ್ಯಾತ ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಪಾತ್ರದಲ್ಲಿ ‘ ಎಮ್ಎಸ್ ಧೋನಿ ‘ ಎಂಬ ಚಿತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.

ಸುಶಾಂತ ನಿಧನಕ್ಕೆ ಖ್ಯಾತ ಕ್ರಿಕೆಟ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ಹರಭಜನ್ ಸಿಂಗ್, ಕಮೆಂಟೇಟರ್ ಹರ್ಷ ಭೋಗಲೆ ಅಲ್ಲದೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group