ಸವದತ್ತಿಃ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನವಿದೆ. ಮಗಳಾಗಿ, ಸೋದರಿಯಾಗಿ, ಮಡದಿಯಾಗಿ,ತಾಯಿಯಾಗಿ,ಕುಟುಂಬದಲ್ಲಿನ ಅವಿಭಾಜ್ಯ ಅಂಗವಾಗುವ ಜೊತೆಗೆ ಧಾರ್ಮಿಕ,ಸಾಮಾಜಿಕ,ಆರ್ಥಿಕ,ರಾಜಕೀಯ, ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ಪ್ರತಿನಿಧಿಸುತ್ತಿರುವಳು.
ಇಂದು ಮುನವಳ್ಳಿಯಲ್ಲಿ ಹುಟ್ಟು ಹಾಕಿರುವ ಶ್ರೀ ದಾನೇಶ್ವರಿ ಮಹಿಳಾ ಸಂಘಟನೆ ತನ್ನ ಧ್ಯೆಯೋದ್ದೇಶಗಳೊಂದಿಗೆ ಮಹಿಳೆಯರಿಗೆ ಬದುಕಿನ ಮೌಲ್ಯಗಳನ್ನು ಮೂಡಿಸುವ ಜೊತೆಗೆ ಸ್ತ್ರೀ ಶಕ್ತಿ ಹೊರಹೊಮ್ಮುವಂತಹ ಚಟುವಟಿಕೆಗಳನ್ನು ಆಯೋಜಿಸಿ ಸ್ತ್ರೀಯರಿಗೆ ಅನುಕೂಲವಾಗುವ ಕಾರ್ಯಕ್ರಮಗಳನು ಸಂಘಟಿಸುತ್ತ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ.ಅಕ್ಕಮಹಾದೇವಿ ಮಠದಲ್ಲಿ ರೂಪು ತಳೆದ ದಾನೇಶ್ವರಿ ದೇವಿಯ ಹೆಸರಿನ ಮಹಿಳಾ ಸಂಘವು ಮುಂಬರುವ ದಿನಗಳಲ್ಲಿ ಬಡ ಮಹಿಳೆಯರಿಗೆ ದಾರಿದೀಪವಾಗುವಂತಾಗಲಿ ಎಂದು ವೈ.ಬಿ.ಕಡಕೋಳ ಹೇಳಿದರು.
ಅವರು ಮುನವಳ್ಳಿಯ ಅಕ್ಕಮಹಾದೇವಿ ಮಠದಲ್ಲಿ ಜರುಗಿದ ದಾನೇಶ್ವರಿ ಮಹಿಳಾ ಸಂಘದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಪಿ.ಜೆ.ಜಿ ಪ್ರೌಢಶಾಲೆಯ ಪ್ರಧಾನ ಗುರುಮಾತೆ ಅನ್ನಪೂರ್ಣ ಲಂಬೂನವರ ವಹಿಸಿದ್ದರು.ಅಕ್ಕನ ಬಳಗದ ಅಧ್ಯಕ್ಷೆ ಗೌರಮ್ಮತಾಯಿ ಗೋಪಶೆಟ್ಟಿ. ಆಶಾ ಕಾರ್ಯಕರ್ತೆ ಗೋದಿ ಶಾಂತಾ,ಅಕ್ಕನ ಬಳಗದ ಸದಸ್ಯೆಯಾದ ಶೈಲಾ ಕರ್ಕಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪದೋನ್ನತಿ ಹೊಂದಿ ಮುಖ್ಯೋಪಾಧ್ಯಾಯನಿ ಹುದ್ದೆ ಹೊಂದಿದ ಅನ್ನಪೂರ್ಣ ಲಂಬೂನವರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಅನ್ನಪೂರ್ಣ ಲಂಬೂನವರ ಶ್ರೀ ದಾನೇಶ್ವರಿ ಮಹಿಳಾ ಸಂಘ ಉತ್ತಮ ವಿಚಾರಗಳನ್ನು ಹೊಂದಿದೆ.ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ಅನುಕೂಲವಾಗುವ ಚಟುವಟಿಕೆಗಳನ್ನು ಮಹಿಳಾ ದಿನಾಚರಣೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಸಂಘಟಿಸುವಂತಾಗಲಿ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಆಶಾ ಕಾರ್ಯಕರ್ತೆ ಗೋದಿ ಶಾಂತಾ ಮಾತನಾಡಿ,ಮಹಿಳೆ ನಾಲ್ಕು ಗೋಡೆಗಳ ಮಧ್ಯೆಯಷ್ಟೇ ಸೀಮಿತವಾಗದೇ ಹೊರಜಗತ್ತಿನಲ್ಲಿ ಕೂಡ ತನ್ನ ಪ್ರತಿಭೆ ವ್ಯಕ್ತಪಡಿಸಲು ಇಂತಹ ವೇದಿಕೆಗಳು ಸಹಾಯಕ ಎಂಬುದನ್ನು ಮುನವಳ್ಳಿಯಲ್ಲಿ ಪ್ರೇಮಾ ಸಬರದ ಅವರು 2003 ರಲ್ಲಿ ಮಹಿಳಾ ಸ್ವಸಹಾಯ ಸಂಘ ಕಟ್ಟದೇ ಹೋಗಿದ್ದರೆ ನಾನಿಂದು ನಿಮ್ಮ ಮುಂದೆ ನಿಂತು ಮಾತನಾಡುತ್ತಿರಲಿಲ್ಲ.ಅವರು ನನ್ನನ್ನು ಆ ಸಂಘಕ್ಕೆ ಸದಸ್ಯೆಯಾಗಿ ಮಾಡಿಕೊಳ್ಳುವ ಜೊತೆಗೆ ಅನೇಕ ಅವಕಾಶಗಳನ್ನು ಕೊಟ್ಟರು.ಹೀಗೆ ಇಂತಹ ಸಂಘಟನೆಗಳು ಮಹಿಳೆಯರ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತ ಬೆಳವಣಿಗೆ ಹೊಂದುವಂತಾಗಲಿ ಎಂದು ಕರೆ ನೀಡಿದರು.
ಶ್ರೀ ದಾನೇಶ್ವರಿ ಮಹಿಳಾ ಸಂಘಟನೆ ಅಧ್ಯಕ್ಷರಾಗಿ ಸಮಿತ್ರಾ ಬಾಳಿ ಖಜಾಂಚಿಯಾಗಿ ರೂಪಾ ಗೋಮಾಡಿ ಕಾವ್ಯಾ ದಶಮನಿ ಅವರನ್ನು ವೇದಿಕೆಗೆ ಪರಿಚಯಿಸಲಾಯಿತು.ಸಂಘಟನೆಯ ಕುರಿತು ದೀಪಾ ಜಂತಲಿ ಮತ್ತು ರೂಪಾ ಗೋಪಶೆಟ್ಟಿ ಮಾತನಾಡಿದರು. ರಾಜೇಶ್ವರಿ ಬಾಳಿ.ಇಂದಿರಾ ಕದಂ.ಲಲಿತಾ ಕಾಮಶೆಟ್ಟಿ.,ವಿದ್ಯಾ ಬಾಳಿ.ರೂಪಾ ಗೋಪಶೆಟ್ಟಿ.ತೇಜಸ್ವಿನಿ ವಿರಕ್ತಮಠ,ಭಾಗ್ಯಶ್ರೀ ಗೋಮಾಡಿ.ಸವಿತಾ ಪಾಟೀಲ.ಕಮಲಾ ದೇವಣಗಾವಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಭಾಗ್ಯ ಗೋಮಾಡಿ.ಜ್ಯೋತಿ ಕೋರಿ.ಶೃತಿ ನಾಲವಾಡ ಇವರಿಂದ ಪ್ರಾರ್ಥನೆ ಜರುಗಿತು.ಪೂಜಾ ಗೋಪಶೆಟ್ಟಿ ಸ್ವಾಗತಿಸಿದರು.ಉಮಾಶ್ರೀ ಪೂಜಾರ ನಿರೂಪಿಸಿದರು.ಮಹಾದೇವಿ ಬಾಳಿ ವಂದಿಸಿದರು.