Bigg Boss Kannada: ಬಿಗ್ ಬಾಸ್ 5ನೇ ವಾರದ ಎಲಿಮಿನೇಷನ್, ಯಾರು ಮನೆಯಿಂದ ಹೊರಬಂದರು

Must Read

ಬಿಗ್ ಬಾಸ್ ಸೀಸನ್ ಎಂಟರ ಐದನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಬಿಗ್ ಬಾಸ್ ಮನೆಯಿಂದ ಮತ್ತೊಬ್ಬ ಪ್ರಬಲ ಸ್ಪರ್ಧಿ ಹೊರ ಬಂದಿದ್ದಾರೆ.. ಹೌದು ಈ ವಾರ ಎಲ್ಲರೂ ಘಟಾನುಘಟಿ ಸ್ಪರ್ಧಿಗಳೇ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು.. ಅರವಿಂದ್ ಪ್ರಶಾಂತ್ ಸಂಬರ್ಗಿ ಶಂಕರ್ ಅಶ್ವತ್ಥ್ ದಿವ್ಯಾ ಸುರೇಶ್ ಶಮಂತ್ ನಿಧಿ ಸುಬ್ಬಯ್ಯ ಶುಭ ಪೂಂಜಾ ನಾಮಿನೇಟ್ ಆಗಿದ್ದರು.. ಇವರುಗಳಲ್ಲಿ ಅದಾಗಲೇ ಒಬ್ಬರು ಮನೆಯಿಂದ ಹೊರ ಬಂದಿದ್ದು ಇಂದು ಸುದೀಪ್ ಅವರ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ..

ಹೌದು ಬಿಗ್ ಬಾಸ್ ಸೀಸನ್ ಎಂಟು ನೋಡು ನೋಡುತ್ತಿದ್ದಂತೆ ಐದು ವಾರಗಳು ಕಳೆದೇ ಹೋದವು‌.. ಬಿಗ್ ಮನೆಗೆ ಬಂದಿದ್ದ ಹದಿನೇಳು ಸ್ಪರ್ಧಿಗಳಲ್ಲಿ ಐದು ಮಂದಿ ಎಲಿಮಿನೇಟ್ ಕೂಡ ಆದರು.. ಒಬ್ಬರು ವೈಲ್ಡ್ ಕಾರ್ಡ್ ಮೂಲಕ ಒಳಗೆ ಬಂದರು.. ಮೊದಲ ವಾರ ಧನುಶ್ರೀ.. ಎರಡನೇ ವಾರ ನಿರ್ಮಲಾ ಚನ್ನಪ್ಪ.. ಮೂರನೇ ವಾರ ಬ್ರಹ್ಮಗಂಟು ಗೀತಾ ಭಾರತಿ ಭಟ್.. ನಾಲ್ಕನೇ ವಾರ ಚಂದ್ರಕಲಾ ಅವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದರು.. ಇದೀಗ ಐದನೇ ವಾರ ಮತ್ತೊಬ್ಬ ಖ್ಯಾತ ಸ್ಪರ್ಧಿ ಹೊರ ಬಂದಿದ್ದಾರೆ..

ಅವರು ಮತ್ಯಾರೂ ಅಲ್ಲ ಹಿರಿಯ ನಟ ಶಂಕರ್ ಅಶ್ವತ್ಥ್ ಅವರು.. ಹೌದು ಶಂಕರ್ ಅಶ್ವತ್ಥ್ ಅವರು ಐದನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು ಇನ್ನುಳಿದಂತೆ ಶಮಂತ್ ಅರವಿಂದ್ ಪ್ರಶಾಂತ್ ಸಂಬರ್ಗಿ ಶುಭಾ ಪೂಂಜಾ ದಿವ್ಯಾ ಸುರೇಶ್ ನಿಧಿ ಸುಬ್ಬಯ್ಯ ಸೇಫ್ ಆಗಿದ್ದು ತಮ್ಮ ಬಿಗ್ ಬಾಸ್ ಜರ್ನಿಯನ್ನು ಮುಂದುವರೆಸಿದ್ದಾರೆ.. ಇನ್ನು ಇತ್ತ ತಮ್ಮ 35 ದಿನಗಳ ಬಿಗ್ ಬಾಸ್ ಜರ್ನಿ ಮುಗಿಸಿರುವ ಶಂಕರ್ ಅಶ್ವತ್ಥ್ ಅವರು ಇಂದಿನ ಭಾನುವಾರದ ವಿಶೇಷ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಅನುಭವವನ್ನು ಕಿಚ್ಚನೊಟ್ಟಿಗೆ ಹಂಚಿಕೊಳ್ಳಲಿದ್ದಾರೆ..

ಇತ್ತ ಮನೆಯಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಚಕ್ರವರ್ತಿ ಚಂದ್ರಚೂಡ ಹಾಗೂ ಮನೆಯ ಕೆಲ ಸದಸ್ಯರ ನಡುವೆ ಅದಾಗಲೇ ದೊಡ್ಡ ಮಟ್ಟದಲ್ಲಿಯೇ ಭಿನ್ನಾಭಿಪ್ರಾಯಗಳು ಹತ್ತಿಕೊಂಡಿದ್ದು ಅದೆಲ್ಲವೂ ಈ ವಾರ ಹೊಟ್ಟೆ ಇಂದ ಹೊರ ಬರಲಿದ್ದು ಮನೆಯಲ್ಲಿ ಮತ್ತಷ್ಟು ಏರು ಪೇರುಗಳು ಕಾಣಸಿಗುತ್ತದೆ.. ಚಕ್ರವರ್ತಿ ಚಂದ್ರಚೂಡ ಅವರು ಬಂದ ದಿನ ಎಲ್ಲರಿಗೂ ಅರ್ಧ ಒಂದು ಅಂಕ ಕೊಟ್ಟು ಅಣುಕಿಸಿದ್ದರು… ಇತ್ತ ವಾರದ ಕತೆಯಲ್ಲಿ ಮನೆಯ ಸದಸ್ಯರು ಕೂಡ ಚಂದ್ರ ಚೂಡ ಅವರಿಗೆ ಸೊನ್ನೆ ಅರ್ಧ ಅಂಕ ಕೊಟ್ಟು ತಿರುಗೇಟು ನೀಡಿದ್ದರು..

ಮೊದಲ ದಿನದಿಂದ ಇದ್ದೇವೆ ಅನ್ನೋ ಗತ್ತು ಅವರಿಗೆ.. ಎಲ್ಲವನ್ನೂ ತಿಳಿದು ಬಂದಿದ್ದೇನೆ ಎನ್ನುವ ಸಣ್ಣ ಅಹಂ ಈತನಿಗೆ.. ಆದರೆ ಆ ಇಬ್ಬರಿಗೂ ತಿಳಿದಿಲ್ಲ ಬಿಗ್ ಬಾಸ್ ಮನೆ ಯಾರಿಗೂ ಶಾಶ್ವತವಲ್ಲವೆಂದು.. ಇನ್ನು 65 ದಿನಗಳಲ್ಲಿ ಎಲ್ಲರೂ ಒಬ್ಬೊಬ್ಬರಾಗಿಯೇ ಹೊರ ಬರುತ್ತಿರಲೇ ಬೇಕು.. ಇದೇ ವಾಸ್ತವ.. ಒಟ್ಟಿನಲ್ಲಿ ಇನ್ನು 65 ದಿನದ ಸೆಣೆಸಾಟದಲ್ಲಿ ಯಾರು ಹೊರ ಬಂದು.. ಯಾರು ಅಲ್ಲಿಯೇ ಉಳಿದು.. ಐವತ್ತು ಕೋಟಿ ರೂಪಾಯಿ ಪಡೆಯುವರೋ ಸುಮ್ಮನೆ ಮನರಂಜನೆ ಪಡೆದು ಕಾದು ನೋಡಬೇಕಷ್ಟೆ..

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group