ಕೆಜಿಎಫ್ ನ ಕ್ಯಾತಿ ದೇಶದ ಗಡಿ ದಾಟಿ ವ್ಯಾಪಿಸುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಸಾಧನೆ ಕೂಡ ಆಲ್ ಇಂಡಿಯಾ ಲೆವೆಲ್ ನತ್ತ ತಲುಪಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದಿಂದ ಹಾಲಿವುಡ್ ಲೆವೆಲ್ ವರೆಗೂ ತಲುಪಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಸಾಧನೆಯ ಹಾದಿ ಸಾಗುತ್ತಿದೆ, ಒಂದು ಕಾಲದಲ್ಲಿ ಮೆಜೆಸ್ಟಿಕ್ನಲ್ಲಿ ಕುಲಿತು ಗಾಂಧಿನಗರದಲ್ಲಿ ಕಟೌಟ್ ಆಗಬೇಕು ಎಂದು ಕನಸು ಕಂಡಿದ್ದ ಯಶ್ ಅವರು ಇವತ್ತು ಆಲ್ ಇಂಡಿಯಾ ಕಟ್ ಔಟ್ ಲೆವೆಲ್ ವರೆಗೂ ಬೆಳೆದು ನಿಂತಿದ್ದಾರೆ. ಒಂದೇ ಒಂದು ಸಿನಿಮಾದಿಂದ ಅಕ್ಕಪಕ್ಕದವರು ಕೂಡ ರತ್ನಗಂಬಳಿ ಹಾಸಿ ಕರೆಯುವಂತೆ ಮಾಡಿದೆ ಕೆಜಿಎಫ್ ಹವಾ.
ಯಶ್ ಅವರ ಹವಾ ಯಾವ ರೀತಿ ಎಂದರೆ ಅಕ್ಕಪಕ್ಕದವರ ಸಿನಿಮಾ ಮಂದಿ ಕೂಡ ನಾಲ್ಕೈದು ವರ್ಷಗಳ ಹಿಂದೆ ಕನ್ನಡದಲ್ಲಿ ರಿಲೀಸಾದ ಸಿನಿಮಾಗಳನ್ನು ಇವತ್ತು ಬೇರೆ ಬೇರೆ ಭಾಷೆಗಳಲ್ಲಿ ಡಬ್ ಮಾಡಿ ರೀ ರಿಲೀಸ್ ಮಾಡ್ತಾ ಇದ್ದಾರೆ. ಇದಕ್ಕೆ ಕಾರಣ ಯಶ್ ಅವರ ಡೆಡಿಕೇಶನ್, ಹಾಗೂ ಕೆಜಿಎಫ್ ಸಿನಿಮಾ ಸೃಷ್ಟಿಸಿರುವ ಕ್ರೇಜ್. ಏನೇ ಕೆಲಸ ಮಾಡಿದರೂ ಸಹ ಲೆಕ್ಕಾಚಾರ ಹಾಕಿ ಪರ್ಫೆಕ್ಟಾಗಿ ಮಾಡುವ ಯಶ್ ಅವರ ಕೆಲಸ ಎಲ್ಲರಿಗೂ ಇಷ್ಟ ಆಗುತ್ತದೆ. ಈಗಂತೂ ಕೆಜಿಎಫ್ ಸಿನಿಮಾದ ಕ್ಯಾತಿ 7 ಸಮುದ್ರವನ್ನು ದಾಟಿದೆ. ಸದ್ಯಕ್ಕಂತೂ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಇರುವುದು ಒಂದೇ ಚಿಂತೆ,, ಎಸ್ ಕೆಜಿಎಫ್ ಸಿನಿಮಾ ಆದಮೇಲೆ ನಂತರ ಮುಂದೆ ಯಾವ ಸಿನಿಮಾ ಮಾಡುತ್ತಾರೆ? ಆ ಸಿನಿಮಾ ಹೇಗಿರುತ್ತದೆ ಯಾವಾಗ ಸೆಟ್ ಏರುತ್ತದೆ ಹೀಗೆ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಈಗಲೇ ಯೋಚನೆ ಮಾಡುತ್ತಿದ್ದಾರೆ, ಕೆಜಿಎಫ್ ಚಾಪ್ಟರ್ 2 ಕಡೆ ಅಂತದಲ್ಲಿ ನಿಂತಿರುವ ಯಶ್ ಅವರ ನಡೆ ಈಗ ಕುತೂಹಲಕ್ಕೆ ಕಾರಣವಾಗಿದೆ, ಕೆಜಿಎಫ್ ನಂತರ ಎಸ್ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಜೊತೆಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.
ಆ ಸುದ್ದಿಗೆ ಪುಷ್ಟಿ ಸಿಕ್ಕಹಾಗೆ ರಾಕಿ ಬಾಯ್ ಕೆಜಿಎಫ್ ನಂತರ ನೆಕ್ಸ್ಟ್ ಸಿನಿಮಾಗೆ ಸಜ್ಜಾಗುವುದು ಕನ್ಫರ್ಮ್ ಎಂದು ಮೂಲಗಳಿಂದ ಮಾಹಿತಿ ಸಿಕ್ತಾ ಇದೆ. ಕೆಜಿಎಫ್ ಸಿನಿಮಾದ ಮೇಲೆ ಕೇಸ್ ನಂತರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಯಶ್ ಅವರ ಮೂರನೇ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ನಿರ್ದೇಶಕರಾಗಿ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಫಿಕ್ಸ್ ಆಗಲಿದ್ದಾರೆ. ಈ ಹೊಸ ಪ್ರಯತ್ನಕ್ಕೆ ಸ್ವತಃ ಯಶ್ ಅವರೇ ನಿರ್ಮಾಣದ ಜವಾಬ್ದಾರಿಯನ್ನು ಹೊರ್ತಾರಂತೆ .
ಈ ಕಾರಣಕ್ಕೆ ಸೈಲೆಂಟಾಗಿ ಹೊಸ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಬಿಜಿಯಾಗಿದ್ದಾರೆ ಯಶ್, ಮೊದಲ ಬಾರಿಗೆ ಪ್ರೊಡಕ್ಷನ್ ಹೌಸ್ ಅನ್ನು ಶುರು ಮಾಡಿ ಅವರದೇ ಬ್ಯಾನರ್ ಅಡಿಯಲ್ಲಿ ಅವರದೇ ಸಿನಿಮಾವನ್ನು ಮಾಡುವುದಕ್ಕೆ ಯಶ್ ಪ್ಲಾನ್ ಮಾಡುತ್ತಿದ್ದಾರೆ. ಯಶ್ ಅವರ ಈ ನಡೆಗೆ ಮುಂಬೈ ಮೂಲದ ನಿರ್ಮಾಪಕರ ಜೊತೆ ಪಾರ್ಟ್ನರ್ ಶಿಪ್ನಲ್ಲಿ ನರ್ತನ್ ಹಾಗೂ ಯಶ್ ಅವರ ಕಾಂಬಿನೇಷನ್ನಲ್ಲಿ ಸಿನಿಮಾ ಮೂಡಿ ಬರುವ ಸಾಧ್ಯತೆ ಇದೆ. ಮೇ ತಿಂಗಳಲ್ಲಿ ಯಶ್ ಅವರ ಮುಂದಿನ ಸಿನಿಮಾ ಲಾಂಚ್ ಆಗಬಹುದು ಎಂತಲೂ ಹೇಳಲಾಗುತ್ತಿದೆ. ಸದ್ಯಕ್ಕಂತೂ ಕೆಜಿಎಫ್ ಚಾಪ್ಟರ್ ಟು ಸಿನಿಮಾ ಹವಾ ಸಕ್ಕತ್ತಾಗಿದೆ, ಹೀಗಿರುವಾಗ ಕೆಜಿಎಫ್ ನಂತರದಲ್ಲಿ ಯಶ್ ಅವರು ಮತ್ತೊಂದು ಜವಾಬ್ದಾರಿಯನ್ನು ಹೊತ್ತು ಮತ್ತೆ ಸಕ್ಸಸ್ ಕಾಣುವುದಕ್ಕೆ ಪ್ರಯತ್ನಿಸುತ್ತಿದ್ದಾರೆ….