ಬೀದರ: ಬೀದರನಲ್ಲಿ ನಡೆಯುತ್ತಿರುವ ಸಂಭ್ರಮದ ಬೀದರ್ ಉತ್ಸವದ ಹಿನ್ನೆಲೆಯಲ್ಲಿ ಕೋಟೆ ಒಳಗೆ ಆಕರ್ಷಕ ಶ್ವಾನಗಳ ಪ್ರದರ್ಶನ ಮೇಳ ನಡೆಯಿತು.
ಬೀದರ ನಲ್ಲಿ ಒಂದು ಹಬ್ಬದ ವಾತಾವರಣದ ನಿಮಿತ್ತ ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಬೀದರ ಕೋಟೆಯ ಸಡಗರವನ್ನು ಹೆಚ್ಚಿಸುವಂತೆ ಎರಡನೆಯ ದಿನದಂದು ಬೀದರ ಕೋಟೆ ಒಳಗೆ ಶ್ವಾನಗಳ ಪ್ರದರ್ಶನ ನಡೆಯಿತು. ಬೀದರ್ ಜಿಲ್ಲಾದ್ಯಂತ ಇರುವ ವಿವಿಧ ತಳಿಗಳ ಶ್ವಾನಗಳ ಪ್ರದರ್ಶನ ಎಲ್ಲರ ಮನಸೆಳೆಯಿತು.
ಮೇಳದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಪೊಲೀಸ ನಾಯಿ ದೀಪಾ ಎಲ್ಲರಿಂದ ಶಾಭಾಸ್ ಗಿರಿ ಪಡೆಯಿತು. ದೀಪಾ ನಾಯಿ ಪೋಲಿಸ್ ಇಲಾಖೆಯಲ್ಲಿ ನಿಯತ್ತಾಗಿ ಇರುವ ಶ್ವಾನ ಎನ್ನಲಾಗಿದ್ದು ಅಪರಿಚಿತರು ನೀಡಿದ ಬಿಸ್ಕಿಟ್ ತಿನ್ನಲು ಹಿಂದೇಟು ಹಾಕಿತು ಆದರೆ ಅದೇ ಸಂದರ್ಭದಲ್ಲಿ ಅದನ್ನು ಸಾಕಿದ ಪೊಲೀಸಪ್ಪ ನೀಡಿದ ಬಿಸ್ಕಿಟ್ ತಿನ್ನಲು ಶುರು ಮಾಡಿ ಅಲ್ಲಿದ್ದ ಜನರ ಮೆಚ್ಚುಗೆ ಪಡೆಯಿತು.
ಹಾಗೆಯೇ ಮುಚ್ಚಿ ಇಡಲಾಗಿದ್ದ ವಸ್ತುಗಳನ್ನೂ ಪತ್ತೆ ಹಚ್ಚಿದ ದೀಪಾ ನಾಯಿ ಚಪ್ಪಾಳೆ ಗಿಟ್ಟಿಸಿತು.
ಸಂಜಯ್ ಖೇಣಿ ಅವರು ಹನ್ನೆರಡು ವಿವಿಧ ತಳಿ ಶ್ವಾನ ತೆಗೆದುಕೊಂಡು ಬಂದಿದ್ದ ವಿಶೇಷವಾಗಿದ್ದು ಈ ಮೇಳದ ವಿಶೆಷವಾಗಿತ್ತು.
ನಾಯಿಗಿರುವ ನಿಯತ್ತು ಮನುಷ್ಯರಿಗಿರಲ್ಲ ಎಂದು ಒಂದು ಗಾದೆ ಮಾತು ಅದು ನಿಜವೇ ಆಗಿದೆ ಎಂಬುದಾಗಿ ಖೇಣಿ ಈ ಸಂದರ್ಭದಲ್ಲಿ ಹೇಳಿದರು.
ವರದಿ : ನಂದಕುಮಾರ ಕರಂಜೆ, ಬೀದರ