ಅತ್ಯಂತ ಜನಾನುರಾಗಿ ಸ್ನೇಹಜೀವಿ ಅಜಾನುಬಾಹು ಅಪರೂಪದ ಪ್ರಬುದ್ಧ ನಟ ದೊಡ್ಡಣ್ಣ

Must Read

ದೊಡ್ಡಣ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅಪರೂಪದ ಪ್ರತಿಭೆ. ಖಳನಟನಾಗಿ ಚಿತ್ರರಂಗ ಪ್ರವೇಶಿಸಿ ನಂತರ ತಮ್ಮ ಹಾಸ್ಯದ ಮೂಲಕ ಅಪಾರ ಕನ್ನಡ ಸಿನಿರಸಿಕರನ್ನು ಸಂಪಾದಿಸಿದ್ದಾರೆ. ಕುಟುಂಬದಲ್ಲಿ ಕೊನೆ ಮಗನಾಗಿ ಜನಿಸಿದ ಇವರಿಗೆ ತಮ್ಮ ತಾತನ ಹೆಸರು ಕಡ್ಲೆ ದೊಡ್ಡಪ್ಪ ಎಂದು ನಾಮಕರಣ ಮಾಡಲಾಯಿತು. ಹೆಸರಿನಂತೆ ದೈತ್ಯ ದೇಹಿಯಾಗಿ ಬೆಳೆದ ದೊಡ್ಡಣ್ಣನವರು ನಂತರ ಕನ್ನಡ ಕಲಾಲೋಕದ ದೈತ್ಯ ಪ್ರತಿಭೆಯಾಗಿ ಬೆಳೆದು ನಿಂತರು.

1949 ನವೆಂಬರ್ 11 ರಂದು ಅರಸಿಕೇರಿಯಲ್ಲಿ ಜನಿಸಿದರು. ಹತ್ತನೇ ತರಗತಿಯವರೆಗೂ ಓದಿದ ದೊಡ್ಡಣ್ಣ ಭದ್ರಾವತಿಯ ಸ್ಟೀಲ್ ಫ್ಯಾಕರಿಯಲ್ಲಿ ಕೆಲಸ ಮಾಡುವಾಗ ವಿಘ್ನೇಶ್ವರ ಕಲಾಸಂಘದಲ್ಲಿ ನಾಟಕಗಳಲ್ಲಿ ಅಭಿನಯದಲ್ಲಿ ತೊಡಗಿಕೊಂಡರು.ನಗೆ ಹಾಸ್ಯ ನಯನಗಳು ನಮ್ಮ ಬದುಕಿಗೆ ಆಸರೆ. ಮುಖದ ಮೇಲೆ ನಗುನಗುತಿರುವ ನಯನಗಳನ್ನು ರಕ್ಷಿಸುವ ಹೊಣೆ ನಮ್ಮೆಲ್ಲರಾಗಬೇಕು’ ಎಂದು ನಂಬಿರುವ ಅತ್ಯಂತ ಅಪರೂಪದ ಪ್ರಬುದ್ಧ ನಟ ಕನ್ನಡ ಪ್ರೇಮಿ ಚಲನಚಿತ್ರ ನಟ ದೊಡ್ಡಣ್ಣ.

ಇವರ ಜೀವನ ಚರಿತ್ರೆ ಒಂದು ಅತ್ಯಂತ ಸರಳ ಸಹಜ ಹಾಗೂ ಏರಿಳಿತಗಳನ್ನು ಹೊಂದಿದ ಸಂಪುಟ ತೆರೆದಿಟ್ಟ ಪುಸ್ತಕ.
ಸುಮಾರು 600 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ನಟ. ಅವರು ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪಾತ್ರ ನಟನಾಗಿ ಪ್ರವೇಶಿಸಿದರು.

ದೊಡ್ಡಣ್ಣ ಅವರು 15 ನವೆಂಬರ್ 1949 ರಂದು ಜನಿಸಿದರು. ಕುಟುಂಬದ ಕಿರಿಯ ಮಗನಿಗೆ ಅವರ ಅಜ್ಜ ಕಡಲೆ ದೊಡ್ಡಪ್ಪ ಎ೦ದು ಹೆಸರಿಡಲಾಗಿದತು. ಅವರು ಭದ್ರಾವತಿಯಲ್ಲಿ ವಿಘ್ನೇಶ್ವರ ಕಲಾ ಸಂಘ ಎಂಬುವುದರಲ್ಲಿ ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು, ಆ ಸಮಯದಲ್ಲಿ ಅವರು ಭದ್ರಾವತಿ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡಿದರು. ಇವರು ಗಂಧರ್ವ ರಂಗ ಎಂಬ ಹೆಸರಿನ ರಂಗಭೂಮಿ ತಂಡವನ್ನು ತಮ್ಮ ಸ್ನೇಹಿತರೊಂದಿಗೆ ಪ್ರಾರ೦ಭಿಸಿದರು. ನಂತರ ಅವರು ಕನ್ನಡ ಮತ್ತು ತಮಿಳು ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು.

ಹೊಟ್ಟೆ ಪಾಡಿಗಾಗಿ ಐಟಿಐ ಶಿಕ್ಷಣ ಮುಗಿಸಿ ವೆಲ್ಫೇರ್ ಫಿಟ್ಟರ್ ಕೋರ್ಸ್. ಮುಗಿಸಿ ಆರಂಭದಲ್ಲಿ ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿ ಕೆಲಸ ಆರಂಭಿಸಿ ಕೊನೆಗೆ ಭದ್ರಾವತಿ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡಲು ಶುರು ಮಾಡಿದರು. ತಮ್ಮಲ್ಲಿರುವ ನಾಟಕದ ಗೀಳು ಅವರನ್ನು ಒಂದು ನಾಟಕ ತಂಡ ಆರಂಭಿಸಿ ತಮ್ಮ ಬಿಡುವಿನ ಸಮಯದಲ್ಲಿ ರಂಗ ಭೂಮಿಯ ಮೇಲೆ ತಮ್ಮ ಅಭೂತಪೂರ್ವ ಕಲೆಗೆ ನೀರೆದರು.

ದೊಡ್ಡಣ್ಣ ಒಬ್ಬ ಬಹುಮುಖ ನಟ. ಅವರು ಖಳನಾಯಕರು, ಪೊಲೀಸ್ ಮತ್ತು ಇತರ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ನಟರಾಗಿ ಇವರು ವಿಶೇಷವಾಗಿ ಯಶಸ್ವಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಸ್ನೇಹ ಜೀವಿ ಎಲ್ಲರಿಗೂ ಬೇಕಾದ ಆಜಾನುಬಾಹು ಹೆಸರಿಗೆ ತಕ್ಕಂತೆ ದೊಡ್ಡ ಅಣ್ಣ. ಕನ್ನಡ ಪದಗಳ ಉಚ್ಚಾರಣೆ ಸಾಹಿತ್ಯ ಅಭಿರುಚಿ ಸಂಭಾಷಣೆ ಮಾಡುವ ಶೈಲಿ ಅತ್ಯದ್ಭುತವಾಗಿವೆ. ಬಣ್ಣದ ಲೋಕ ಬಯಸಿ ಬೆಂಗಳೂರಿಗೆ ಬಂದು ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಒಬ್ಬ ಖಳ ನಟ ಹಾಸ್ಯ ನಟ ಪೋಷಕ ನಟನಾಗಿ ಮಿಂಚಿದ್ದಾರೆ. ಡಾ ರಾಜಕುಮಾರ ವಿಷ್ಣುವರ್ಧನ ಅವರ ಜೊತೆಗೆ ಹಲವಾರು ಪಾತ್ರಗಳನ್ನು ನಿರ್ವಹಿಸಿರುವ ಎಲ್ಲರಿಗೂ ಆಪ್ತನಾದ ನಟ. ಅಂಬರೀಶರಂತೂ ನಟ ದೊಡ್ಡಣ್ಣ ಎಂದರೆ ಎಲ್ಲಿಲ್ಲದ ಖುಷಿ ಪ್ರೀತಿ.

*ಚಲನ ಚಿತ್ರ ಮಂಡಳಿಗೆ ಕಟ್ಟಡ*
ಚಲನ ಚಿತ್ರ ಮಂಡಳಿಗೆ ಒಂದು ಕಟ್ಟಡ ನಿರ್ಮಾಣ ಮಾಡುವ ಮೂಲಕ ದೊಡ್ಡಣ್ಣ ಕನ್ನಡಿಗರ ಜನಮಾನಸದಲ್ಲಿ ಅಜರಾಮರವಾಗಿ ನಿಲ್ಲುತ್ತಾರೆ.

*ಅತ್ಯುತ್ತಮ ಪೋಷಕ*
ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 1998–1999 ಚಿತ್ರ ಟುವ್ವಿ ಟುವ್ವಿ ಟುವ್ವಿ.ಗೆ ಅತ್ಯುತ್ತಮ ಪೋಷಕ ನಟ ದೊಡ್ಡಣ್ಣ ಅವರಿಗೆ ದೊರಕಿದೆ.ಇಂತಹ ಅಪ್ಪಟ ಕನ್ನಡ ಪ್ರೇಮಿ ನಟ ದೊಡ್ಡಣ್ಣ ನೂರಾರು ಕಾಲ ಬಾಳಿ ಇನ್ನೂ ನೂರಾರು ಚಲನ ಚಿತ್ರಗಳನ್ನು ನಿರ್ಮಿಸಲಿ ಅಭಿನಯಿಸಲಿ ಎಂದು ಎಲ್ಲಾ ಕನ್ನಡಿಗರ ಪರ ಹಾರೈಸುತ್ತೇನೆ.

_________________________

ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group