ಬೀದರ – ಗಡಿ ಜಿಲ್ಲೆಯ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ಓಮಿಕ್ರಾನ್ ವೈರಸ್ ಭಯ ಇಲ್ಲದೇ ಬಸವಲಿಂಗ ಅವಧೂತರ ಭಕ್ತರು ಡಾನ್ಸ್ ಮಾಡಿದರುು.
ಖಟಕ್ ಚಿಂಚೋಳಿ ಗ್ರಾಮದಲ್ಲಿ ನಡೆದ ಜನಸ್ತೋಮ ಕಾರ್ಯಕ್ರಮದಲ್ಲಿ ನೂರಾರು ಜನರು ಒಬ್ಬರು ಕೂಡ ಮಾಸ್ಕ ಹಾಕದೆ ಡ್ಯಾನ್ಸ್ ಮಾಡಿದರು. ರಾಜ್ಯದಲ್ಲಿ ಈಗಾಗಲೇ ಹನ್ನೆರಡು ಜನರಿಗೆ ಓಮಿಕ್ರಾನ್ ವೈರಸ್ ವಕ್ಕರಿಸಿದ್ದು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಿದೆ ಆದರು ಕೂಡ ಬಸವಲಿಂಗ ಅವಧೂತರ ಭಕ್ತರು ಮಾತ್ರ ಓಮಿಕ್ರಾನ್ ವೈರಸ್ ಭಯ ಇಲ್ಲದೆ ಡ್ಯಾನ್ಸ್ ಮಾಡಿ, ಪೊಲೀಸ ಇಲಾಖೆ ರಾಜ್ಯ ಸರ್ಕಾರದ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದರು.. ಕೋವಿಡ್ ಸಂದರ್ಭದಲ್ಲಿ ಪೊಲೀಸ ಇಲಾಖೆ ಯಾವ ಆಧಾರದ ಮೇಲೆ ಈ ನೃತ್ಯಕ್ಕೆ ಅನುಮತಿ ನೀಡಿದರು ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಡುತ್ತದೆ ಅಲ್ಲದೆ ಬೀದರ ಜಿಲ್ಲೆಗೆ ಓಮಿಕ್ರಾನ್ ವಕ್ಕರಿಸಿದರೆ ಯಾರು ಹೊಣೆಗಾರರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

