Homeಸುದ್ದಿಗಳುಬೀದರ್ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಗೆ ವ್ಯಕ್ತಿ ಬಲಿ

ಬೀದರ್ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಗೆ ವ್ಯಕ್ತಿ ಬಲಿ

ಬೀದರ – ಕೊರೊನಾ ಗೆದ್ದು ಖುಷಿ ಖುಷಿಯಲ್ಲಿದ್ದ ವ್ಯಕ್ತಿಗೆ ಬ್ಲ್ಯಾಕ್ ಫಂಗಸ್ ಆಗಿ ಸಾವನ್ನಪ್ಪಿದ ದುರಂತ ಘಟನೆ ಹುಮನಾಬಾದ ತಾಲೂಕಿನ ಧೂಮ್ಮನಸೂರ ಗ್ರಾಮದಲ್ಲಿ ನಡೆದಿದೆ.

ಜಗನ್ನಾಥ ಧರ್ಮರೆಡ್ಡಿ(57) ಎಂಬ ವ್ಯಕ್ತಿ ಬ್ಲ್ಯಾಕ್ ಫಂಗಸ್ ನಿಂದ ನಿಧನ ಹೊಂದಿದ್ದಾರೆ.

ಈ ಮೊದಲು ಅವರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೊನಾ ದಿಂದ ಗುಣಮುಖರಾಗಿದ್ದರು. ನಂತರ ಏಕಾಏಕೀ ಆರೋಗ್ಯ ದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮತ್ತೆ ಬ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದಾಗ
ಕಣ್ಣು ಕಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ನೆರೆಯ ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೈದರಾಬಾದ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.

ಕೊರೋನಾ ಸೋಂಕು ಗೆದ್ದು ಖುಷಿಯಾಗಿ ಮನೆಗೆ ಬಂದವರಿಗೆ ಬ್ಲಾಕ್ ಫಂಗಸ್ ವಕ್ಕರಿಸಿ ಜನರ ಜೀವನವನ್ಮೇ ನರಕವಾಗಿಸಿದೆ ಎಂದರೆ ತಪ್ಪಲ್ಲ.

RELATED ARTICLES

Most Popular

error: Content is protected !!
Join WhatsApp Group